ನವದೆಹಲಿ: ಮಾಜಿ ಸಚಿವ ಅಶ್ವಥ್ ನಾರಾಯಣ್ (Ashwath Narayan) ಅವರ ಗುತ್ತಿಗೆದಾರರು (Contractors) ಸರಿಯಾಗಿ ಕೆಲಸ ಮಾಡಿದ್ದರೆ ಅವರ ಹಣ ಖಂಡಿತ ಸಿಗುತ್ತದೆ. ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡಿಲ್ಲ ಎಂದರೆ ಅವರಿಗೆ ಹಣ ಸಿಗುವುದಿಲ್ಲ. ಸದನದಲ್ಲಿ ಅವರೇ ಹೇಳಿದಂತೆ ತನಿಖೆ ಮಾಡಿಸಲಾಗುತ್ತಿದೆ ಎಂದು ಸಂಸದ ಡಿಕೆ ಸುರೇಶ್ (DK Suresh) ತಿರುಗೇಟು ನೀಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಮಾಡಿದ ಕಮಿಷನ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ಉದ್ದೇಶದಿಂದ ಡಿಸಿಎಂ ಹೆಸರು ಪ್ರಸ್ತಾಪ ಮಾಡುತ್ತಿದ್ದಾರೆ. ಕಮಿಷನ್ ಯಾರು ತೆಗೆದುಕೊಂಡರು ಯಾರಿಗೆ ಕೊಟ್ಟರು ಎನ್ನುವುದು ಹೇಳಬೇಕು ಎಂದು ಒತ್ತಾಯಿಸಿದರು.
ವಿಪಕ್ಷಗಳು ಹೇಳಿದಂತೆ ತನಿಖೆಗೆ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ತನಿಖೆ ಮುಗಿದು, ಕಾಮಗಾರಿ ಸರಿಯಾಗಿದ್ದರೆ ಹಣ ಎಲ್ಲೂ ಹೋಗಲ್ಲ. ಹಂತ ಹಂತವಾಗಿ ಬಿಡುಗಡೆ ಆಗಲಿದೆ. ಡಿಕೆ ಶಿವಕುಮಾರ್ ವಿರುದ್ಧದ ಆರೋಪದ ಹಿಂದೆ ರಾಜಕೀಯ ಉದ್ದೇಶ ಇದೆ. ಹೀಗಾಗಿ ನಾವು ರಾಜಕೀಯವಾಗಿ ಉತ್ತರಿಸುತ್ತೇವೆ ಎಂದರು. ಇದನ್ನೂ ಓದಿ: ವರಿಷ್ಠರು ಅನುಮತಿ ನೀಡಿದರೆ ಪ್ರಭು ಚವ್ಹಾಣ್ ವಿರುದ್ಧ ನೂರು ಕೋಟಿ ಮಾನಹಾನಿ ಕೇಸ್ ದಾಖಲಿಸುವೆ: ಖೂಬಾ ಎಚ್ಚರಿಕೆ
ನಮ್ಮ ಸರ್ಕಾರ ಬಂದು 3 ತಿಂಗಳೂ ಆಗಿಲ್ಲ. 2-3 ವರ್ಷಗಳ ಹಿಂದಿನ ಬಿಲ್ ಕೊಡಿ ಎನ್ನುತ್ತಿದ್ದಾರೆ. ಸಾಕಷ್ಟು ಅಕ್ರಮ ನಡೆದಿರುವ ಶಂಕೆ ಇದೆ. ಯಾರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೋ ಅವರು ಹೆದರಬೇಕಿಲ್ಲ. ಯಾರು ಅಕ್ರಮ ನಡೆಸಿದ್ದಾರೋ ಅವರು ತನಿಖೆ ಮುಗಿಯುವ ತನಕ ಕಾಯಬೇಕು. ಕಳಪೆ ಕಾಮಗಾರಿಗಳನ್ನು ಮುಚ್ಚಿಕೊಳ್ಳಲು ಈ ರೀತಿ ಆರೋಪ ಮಾಡುತ್ತಿದ್ದಾರೆ. ಕಳಪೆ ಕಾಮಗಾರಿಗಳು ಎಲ್ಲಿ ಆಗಿದೆ? ಯಾವ ಯಾವ ಹಂತದಲ್ಲಿ ಆಗಿದೆ ಅನ್ನೋದು ಶೀಘ್ರದಲ್ಲಿ ಸಾರ್ವಜನಿಕರಿಗೆ ಗೊತ್ತಾಗಲಿದೆ. ಆಣೆ ಪ್ರಮಾಣಗಳು ನಾವು ನೋಡಿದ್ದೇವೆ. ಯಾರ್ಯಾರು ಆಣೆ ಮಾಡಿದ್ದಾರೆ ಎಂಬುದು ಗೊತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಯವರು ಹತಾಶರಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ: ಸಿದ್ದರಾಮಯ್ಯ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]