ಜೈಪುರ: ರಾಜಸ್ಥಾನ (Rajasthan) ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಮತ್ತು ಪೊಲೀಸ್ ಮಹಾನಿರ್ದೇಶಕರು ಸುಖದೇವ್ ಸಿಂಗ್ ಗೊಗಮೇಡಿಗೆ (Sukhdev Singh Gogamedi) ಜೀವ ಬೆದರಿಕೆ ಇದ್ದರೂ ಭದ್ರತೆ ನೀಡಲು ವಿಫಲರಾಗಿದ್ದಾರೆ ಎಂದು ಸುಖದೇವ್ ಸಿಂಗ್ ಪತ್ನಿ ಆರೋಪಿಸಿದ್ದಾರೆ.
ಕರ್ಣಿ ಸೇನೆಯ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಮಂಗಳವಾರ ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಘಟನೆಯ ಸಿಸಿಟಿವಿ ವೀಡಿಯೋದಲ್ಲಿ ಬಂದೂಕುಧಾರಿಗಳು ಗೊಗಮೆಡಿಗೆ ಗುಂಡು ಹಾರಿಸಿ ನಂತರ ಸ್ಥಳದಿಂದ ಪರಾರಿಯಾಗುವುದನ್ನು ತೋರಿಸುತ್ತದೆ. ಈ ಕುರಿತು ಅವರ ಪತ್ನಿ ದೂರು ದಾಖಲಿಸಿದ್ದು, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಪೊಲೀಸ್ ಮಹಾನಿರ್ದೇಶಕರು ಗೋಗಮೆಡಿಗೆ ಜೀವ ಬೆದರಿಕೆಯ ನಡುವೆಯೂ ಭದ್ರತೆ ನೀಡಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: POK ನಮ್ಮದೇ, 24 ಅಸೆಂಬ್ಲಿ ಸೀಟ್‌ಗಳನ್ನು ಮೀಸಲಿಟ್ಟಿದ್ದೇವೆ: ಅಮಿತ್ ಶಾ
Advertisement
Advertisement
ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಕೊಲ್ಲಲು ಯೋಜನೆ ರೂಪಿಸಲಾಗಿದೆ ಎಂದು ಮಾರ್ಚ್‌ನಲ್ಲಿ ರಾಜಸ್ಥಾನ ಡಿಜಿಪಿ ಉಮೇಶ್ ಮಿಶ್ರಾ ಅವರಿಗೆ ಪತ್ರವೊಂದನ್ನು ಕಳುಹಿಸಲಾಗಿತ್ತು ಎಂದು ಸುಖದೇವ್ ಸಿಂಗ್ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಗೊಗಮೆಡಿಗೆ ಕೊಲೆ ಬೆದರಿಕೆಗಳ ಕುರಿತು ಮಾಹಿತಿ ನೀಡಿದರೂ ಗೆಹ್ಲೋಟ್ ಮತ್ತು ಮಿಶ್ರಾ ಅವರು ಕರ್ಣಿ ಸೇನಾ ಮುಖ್ಯಸ್ಥರಿಗೆ ಭದ್ರತೆಯನ್ನು ನೀಡಲಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ವೈದ್ಯ
Advertisement
Advertisement
ಘಟನೆಯ ಕುರಿತು ಪೊಲೀಸರು ಭಾರತೀಯ ದಂಡ ಸಂಹಿತೆಯ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯ 10 ಸಂಸದರಿಂದ ಸಂಸತ್ ಸ್ಥಾನಕ್ಕೆ ರಾಜೀನಾಮೆ
ಇಬ್ಬರು ಆರೋಪಿಗಳ ಗುರುತು ಪತ್ತೆ:
ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ ಅವರ ಹತ್ಯೆಯ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳ ಗುರುತನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆರೋಪಿಗಳಲ್ಲಿ ಒಬ್ಬನನ್ನು ರೋಹಿತ್ ರಾಥೋಡ್ ಎಂದು ಗುರುತಿಸಲಾಗಿದೆ. ಈತ ಮಕ್ರಾನಾ ನಾಗೌರ್ ಮೂಲದವನಾಗಿದ್ದು, ಮತ್ತೊಬ್ಬನನ್ನು ಹರಿಯಾಣದ ಮಹೇಂದ್ರಗಾತ್ ಮೂಲದ ನಿತಿನ್ ಫೌಜಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಪ್ಯಾಕಿಂಗ್ ಆಹಾರ ಉತ್ಪನ್ನಗಳಿಂದ ಜೀರ್ಣಾಂಗಕ್ಕೆ ಹಾನಿ- ಏಮ್ಸ್ ವೈದ್ಯರಿಂದ ಹೊಸ ವರದಿ
ಆರೋಪಿಗಳಾದ ನವೀನ್ ಶೇಖಾವತ್, ರೋಹಿತ್ ರಾಥೋಡ್ ಮತ್ತು ನಿತಿನ್ ಫೌಜಿ ಅವರು ಮದುವೆ ಕಾರ್ಡ್ ನೀಡುವ ನೆಪದಲ್ಲಿ ಕರ್ಣಿ ಸೇನಾ ಮುಖ್ಯಸ್ಥರನ್ನು ಭೇಟಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಜಮೀನು ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ವರದಿಯ ಪ್ರಕಾರ, ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ ಅವರು ರೋಹಿತ್ ಗೋಡಾರಾ ಅವರ ಭೂ ವಿವಾದಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ. ಇದನ್ನೂ ಓದಿ: ಜಮೀನು ವಿವಾವದವೇ ಕರ್ಣಿ ಸೇನಾ ಮುಖ್ಯಸ್ಥನ ಕೊಲೆಗೆ ಕಾರಣವಾಯ್ತಾ?