ನವದೆಹಲಿ: ಫಿನ್ ಟೆಕ್ ಕಂಪನಿ ಭಾರತ್ ಪೇಯ ಸಹ ಸಂಸ್ಥಾಪಕ ಅಶ್ನೀರ್ ಗ್ರೋವರ್ ಹಾಗೂ ಅವರ ಕುಟುಂಬ ಕಂಪನಿಯ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಭಾರತ್ ಪೇ ಆರೋಪಿಸಿದೆ.
ಮಂಗಳವಾರ ಅಶ್ನೀರ್ ಗ್ರೋವರ್ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇಂದು ಭಾರತ್ ಪೇ ಸ್ವತಃ ಸಹ ಸಂಸ್ಥಾಪಕನ ಮೇಲೆ ಆರೋಪ ಹೊರಿಸುತ್ತಿದೆ.
Advertisement
ಅಶ್ನೀರ್ ಗ್ರೋವರ್ ಅವರನ್ನು ಮಂಡಳಿಯ ನಿರ್ದೇಶಕ ಹುದ್ದೆ ಸೇರಿದಂತೆ ಕಂಪನಿಯ ಎಲ್ಲಾ ಸ್ಥಾನಗಳಿಂದ ತೆಗೆದುಹಾಕಲಾಗಿದೆ. ಅಶ್ನೀರ್ ಗ್ರೋವರ್ ಹಾಗೂ ಅವರ ಕುಟುಂಬ ಕಂಪನಿಯ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಭಾರತ್ಪೇ ಆರೋಪಿಸಿದೆ. ಇದನ್ನೂ ಓದಿ: ರಷ್ಯಾದಲ್ಲಿ ಆನ್ಲೈನ್ ಮಾರಾಟ ಸ್ಥಗಿತಗೊಳಿಸಿದ ಆಪಲ್
Advertisement
Advertisement
ಸಂಸ್ಥೆಯ ಆಂತರಿಕ ದಾಖಲೆಗಳನ್ನು ಸ್ವತಂತ್ರ ಬಾಹ್ಯ ಸಲಹೆಗಾರರಿಂದ ಪರಿಶೀಲಿಸಲಾಗುವುದು ಎಂದು ತಿಳಿಸಿದ ತಕ್ಷಣ ಅಶ್ನೀರ್ ಗ್ರೋವರ್ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಗ್ರೋವರ್ ಸ್ವತಃ ರಾಜಿನಾಮೆ ನೀಡಿರುವುದಾಗಿ ಸುಳ್ಳು ನಿರೂಪಣೆ ನೀಡಿದ್ದಾರೆ ಎಂದು ಕಂಪನಿ ತಿಳಿಸಿದೆ.
Advertisement
ಗ್ರೋವರ್ ಕುಟುಂಬ ಹಾಗೂ ಅವರ ಸಂಬಂಧಿಕರು ಕಂಪನಿಯ ಹಣವನ್ನು ದುರುಪಯೋಗ ಪಡಿಸಿದ್ದಾರೆ. ಇದನ್ನು ಮರೆ ಮಾಚಲು ನಕಲಿ ಮಾರಾಟಗಾರರನ್ನು ಸೃಷ್ಟಿಸಿ ಈ ಮೂಲಕ ಕಂಪನಿಯ ಖಾತೆಯಿಂದ ಹಣವನ್ನು ತೆಗೆದಿದ್ದಾರೆ ಹಾಗೂ ತಮ್ಮ ಸ್ವಂತಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಭಾರತ್ಪೇ ಎಂಡಿ ಸ್ಥಾನಕ್ಕೆ ಅಶ್ನೀರ್ ಗ್ರೋವರ್ ರಾಜೀನಾಮೆ
ಅವರ ದುಷ್ಕೃತ್ಯಗಳ ಪರಿಣಾಮವಾಗಿ ಗ್ರೋವರ್ ಇನ್ನು ಮುಂದೆ ಕಂಪನಿಯ ಉದ್ಯೋಗಿ, ಸಂಸ್ಥಾಪಕ ಅಥವಾ ನಿರ್ದೇಶಕರಾಗಿಲ್ಲ ಎಂದು ಭಾರತ್ ಪೇ ಹೇಳಿದೆ.