ತೆಲುಗಿನ ಸೂಪರ್ ಸ್ಟಾರ್, ರಾಜಕಾರಣಿ ಪವನ್ ಕಲ್ಯಾಣ್ ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಆಗಮಿಸಿದ್ದರು. ಇಂದು ಅವರು ಕ್ಷೇತ್ರದಲ್ಲಿ ಆಶ್ಲೇಷ ಪೂಜೆ ಮತ್ತು ಆದಿ ಸುಬ್ರಹ್ಮಣ್ಯದ ಹುತ್ತಕ್ಕೆ ವಸ್ತ್ರ ಸಮರ್ಪಣೆ ಮಾಡುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ
Advertisement
ಪೂಜೆ ಪುನಸ್ಕಾರಗಳು ಮುಗಿದ ನಂತರ ಪವನ್ ಕಲ್ಯಾಣ್ ಅವರಿಗೆ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಅವರಿಂದ ಸನ್ಮಾನ ಕೂಡ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪವನ್ ಕಲ್ಯಾಣ್ ಕ್ಷೇತ್ರದ ಸ್ವಚ್ಛತೆಯ ಬಗ್ಗೆ ಕೊಂಡಾಡಿದರು. ಇದನ್ನೂ ಓದಿ: ಮಿಡಲ್ ಫಿಂಗರ್ ತೋರಿಸಿದ ಪೂನಂ: ಕೈಯನ್ನ ತುಂಡು ತುಂಡಾಗಿ ಕತ್ತರಿಸ್ತೀನಿ ಎಂದ ನಟ ಆಲಿ
Advertisement
Advertisement
‘ಲಕ್ಷಾಂತರ ಭಕ್ತರು ಬರುವ ಈ ದೇವಸ್ಥಾನದ ಪ್ರತೀ ಏಕಾದಶಿಯಂದು ದೇವಸ್ಥಾನದಲ್ಲಿ ನಡೆಸುವ ಸ್ವಚ್ಛತೆ ಕಂಡು ಬೆರಗಾಗಿದೆ. ಪರಿಸರ ಸ್ವಚ್ಛಾತಾ ಜಾಗೃತಿಗಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಈ ಕಾರ್ಯ ಎಲ್ಲ ಕಡೆಗೂ ನಡೆಯಬೇಕು. ಪರಿಸರ ಸ್ವಚ್ಛತೆಯೇ ಆದ್ಯತೆ ಆಗಬೇಕು’ ಎಂದು ಪವನ್ ಕಲ್ಯಾಣ್. ಇದನ್ನೂ ಓದಿ: ಏಪ್ರಿಲ್ 2ಕ್ಕೆ ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್
Advertisement
ಕುಕ್ಕೆಗೆ ಪವನ್ ಕಲ್ಯಾಣ್ ಬರುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಅಪಾರ ಅಭಿಮಾನಿಗಳು ಅವರನ್ನು ನೋಡಲು ಆಗಮಿಸಿದ್ದರು. ಪೂಜೆ ಮುಗಿದ ನಂತರ ಪವನ್ ಅಭಿಮಾನಿಗಳೊಂದಿಗೆ ಬೆರೆತರು.