ಚಂದನವನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ ‘ವಿಕ್ರಾಂತ್ ರೋಣ’ ಟೀಸರ್ ಏಪ್ರಿಲ್ 2 ರಂದು ರಿಲೀಸ್ ಆಗುತ್ತಿದೆ.
Advertisement
ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಕಾಂಬೀನೇಷನ್‍ನಲ್ಲಿ ಮೂಡಿ ಬರುತ್ತಿರುವ ಚೊಚ್ಚಲ ಸಿನಿಮಾ ‘ವಿಕ್ರಾಂತ್ ರೋಣ’. ಈ ಸಿನಿಮಾದ ಅಪ್ಡೇಟ್‍ಗಾಗಿ ಅಭಿಮಾನಿಗಳು ಕಾಯುತ್ತಿದ್ದು, ಸ್ಟಾರ್ ಜೋಡಿಯ ಸಿನಿಮಾ ಹೇಗೆ ಇರುತ್ತೆ ಎಂದು ಉತ್ಸಾಹದಲ್ಲಿ ಇದ್ದಾರೆ. ಮಂಗಳವಾರ(ಇಂದು) ಅನೂಪ್ ಭಂಡಾರಿ ಅವರು ‘ವಿಕ್ರಾಂತ್ ರೋಣ’ ಬಗ್ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಟ್ವಿಟ್ಟರ್‍ನಲ್ಲಿ ಅನೂಪ್, ಅಂನೌನ್ಸಿನ್ಗ್ ದಿ ಅರೈವಲ್ ಆಫ್ ದಿ ಡೆವಿಲ್! ‘ವಿಕ್ರಾಂತ್ ರೋಣ’ ಸಿನಿಮಾದ ಟೀಸರ್ ಏಪ್ರಿಲ್ 2ರಂದು 9:55ಕ್ಕೆ ರಿಲೀಸ್ ಆಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳ ಒತ್ತಡಕ್ಕೆ ಕೊನೆಗೂ ಮಣಿದ ‘ವಿಕ್ರಾಂತ್ ರೋಣ’ :ಏಪ್ರಿಲ್ ಮೊದಲ ವಾರದಲ್ಲಿ ಟೀಸರ್
Advertisement
Announcing the arrival of the Devil! #VikrantRonaReleaseTeaser at 9:55 AM on Apr 2nd. #VikrantRona @KicchaSudeep @nirupbhandari @neethaofficial@Asli_Jacqueline @JackManjunath @shaliniartss @Alankar_Pandian @ZeeStudios_ pic.twitter.com/0OY1dBuAh4
— Anup Bhandari (@anupsbhandari) March 29, 2022
Advertisement
ಈ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಅಭಿಮಾನಿಗಳು ರೀ-ಟ್ವೀಟ್ ಮಾಡಿದ್ದು, ನಮ್ಮ ಬಾಸ್, ನಮ್ಮ ಕಿಚ್ಚ ಎಂದು ಬರೆದುಕೊಂಡು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕಿಚ್ಚನ ಅಪ್ಡೇಟ್‍ಗಾಗಿ ಕಾಯುತ್ತಿದ್ದ ಅಭಿಮಾನಿಗಳು ಭಂಡಾರಿ ಅವರ ಟ್ವೀಟ್ ನೋಡಿ ಫುಲ್ ಖುಷ್ ಆಗಿದ್ದಾರೆ. ಇದನ್ನು ಕಿಚ್ಚ ಸಹ ಶೇರ್ ಮಾಡಿಕೊಂಡಿದ್ದಾರೆ. ಕಿಚ್ಚನನ್ನು ತೆರೆಮೇಲೆ ನೋಡಬೇಕೆಂದು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತುಕೊಂಡಿದ್ದಾರೆ.
Advertisement
‘ವಿಕ್ರಾಂತ್ ರೋಣ’ ಪ್ಯಾನ್ ಇಂಡಿಯಾ ಚಿತ್ರವಾಗಿದ್ದರಿಂದ, ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೇ ಈ ಸಿನಿಮಾವನ್ನು 2ಡಿ ಮತ್ತು 3ಡಿಯಲ್ಲಿ ತಯಾರಾಗಿರುವುದು ಮತ್ತೊಂದು ವಿಶೇಷ. ಏಕಕಾಲಕ್ಕೆ ಹಾಲಿವುಡ್ ಮತ್ತು ಭಾರತೀಯ ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಸಾವಿರಾರು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ