ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) ಹಲವು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ದುರ್ಗಾ ದೇವಸ್ಥಾನವೊಂದು (Durga Temple), ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ (BJP) ಅಭೂತಪೂರ್ವ ಗೆಲುವಿನ ನಂತರ ಭಕ್ತರಿಗಾಗಿ ಮತ್ತೆ ಬಾಗಿಲು ತೆರೆದಿದೆ.
ಅಸನ್ಸೋಲ್‌ನಲ್ಲಿರುವ ದುರ್ಗಾ ದೇವಾಲಯವು ಸ್ಥಳೀಯ ಉದ್ವಿಗ್ನತೆಯಿಂದಾಗಿ ಹಲವು ವರ್ಷಗಳಿಂದ ಬಂದ್ ಆಗಿತ್ತು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ದೇವಸ್ಥಾನದ ಬಾಗಿಲನ್ನು ತೆರೆಯಲಾಗಿದೆ. ಭಕ್ತರು ದುರ್ಗಾ ದೇವಿ ದರ್ಶನ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಮೇ 9ರಂದು ಬಂಗಾಳದ ನೂತನ ಸಿಎಂ ಪ್ರಮಾಣ ಸ್ವೀಕಾರ – ಎಲ್ಲ NDA ಆಡಳಿತ ರಾಜ್ಯಗಳ ಸಿಎಂಗಳಿಗೆ ಆಹ್ವಾನ
ಶ್ರೀ ಶ್ರೀ ದುರ್ಗಾಮಾತಾ ಚಾರಿಟೇಬಲ್ ಟ್ರಸ್ಟ್‌ನಿಂದ ದೇವಾಲಯ ನಿರ್ವಹಣೆ ಆಗುತ್ತಿತ್ತು. ದುರ್ಗಾ ಪೂಜೆ ಮತ್ತು ಲಕ್ಷ್ಮಿ ಪೂಜೆಯಂತಹ ಹಬ್ಬಗಳಲ್ಲಿ ಮಾತ್ರ ದೇವಾಲಯ ತೆರೆಯುತ್ತಿತ್ತು. ಆದರೆ, ಸ್ಥಳೀಯ ಗಲಾಟೆ ಮತ್ತು ಆಡಳಿತಾತ್ಮಕ ನಿರ್ಬಂಧಗಳಿಂದಾಗಿ ದೇವಾಲಯ ಬಾಗಿಲು ಮುಚ್ಚಿತ್ತು. ಅಸನ್ಸೋಲ್ ವ್ಯಾಪ್ತಿಗೆ ಬರುವ ಪಶ್ಚಿಮ ಬರ್ಧಮಾನ್ ಜಿಲ್ಲೆಯ ಎಲ್ಲಾ ಒಂಬತ್ತು ವಿಧಾನಸಭಾ ಸ್ಥಾನಗಳನ್ನು ಬಿಜೆಪಿ ಗೆದ್ದ ನಂತರ ದೇವಾಲಯವನ್ನು ಪುನಃ ತೆರೆಯಲಾಗಿದೆ. ಇದು ಸ್ಥಳೀಯರಲ್ಲಿ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.
ದೇವಾಲಯದ ದ್ವಾರಗಳು ತೆರೆದ ಕೂಡಲೇ ಭಕ್ತರು ಮತ್ತು ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪ್ರಾರ್ಥನೆ ಸಲ್ಲಿಸಿದರು. ಅಸನ್ಸೋಲ್ ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿರುವ ನೂತನ ಶಾಸಕ ಕೃಷ್ಣೇಂದು ಮುಖರ್ಜಿ, ತಾವು ಗೆದ್ದರೆ ವರ್ಷಪೂರ್ತಿ ದೇವಾಲಯವನ್ನು ತೆರೆಯುವುದಾಗಿ ಭರವಸೆ ನೀಡಿದ್ದರು. ಇದನ್ನೂ ಓದಿ: Vijay Blockbuster Debut `ವಿಜಯ’ದ ಹಿಂದಿದೆ 17 ವರ್ಷದ ರಹಸ್ಯ
ಎಸ್‌ಐಆರ್ ಬಳಿಕ ಮೊದಲ ಚುನಾವಣೆ ಎದುರಿಸಿದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಮೊದಲ ಗೆಲುವು ದಾಖಲಿಸಿದೆ. ಟಿಎಂಸಿಯನ್ನು ಅಧಿಕಾರದಿಂದ ಕೆಳಗಿಳಿಸಿದೆ. ಚುನಾವಣೆಯಲ್ಲಿ 293 ಕ್ಷೇತ್ರಗಳ ಪೈಕಿ ಬಿಜೆಪಿ 206 ಸ್ಥಾನಗಳನ್ನು ಗೆದ್ದಿದೆ. ಇದರಿಂದ 15 ವರ್ಷಗಳ ನಂತರ ಮಮತಾ ಬ್ಯಾನರ್ಜಿಯವರ ಆಳ್ವಿಕೆ ಕೊನೆಗೊಂಡಿದೆ. ಆಡಳಿತಾರೂಢ ಟಿಎಂಸಿ ಕೇವಲ 80 ಸ್ಥಾನಗಳನ್ನು ಗೆದ್ದಿದೆ.












