‘ಆರ್ಯ’ (Aarya) ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ ಸಿನಿಮಾ. ಅಲ್ಲು ಅರ್ಜುನ್ (Allu Arjun) ‘ಆರ್ಯ’ನಾಗಿ ಪಾರ್ಟ್ 1 ಮತ್ತು ಎರಡರಲ್ಲಿ ಸಕ್ಸಸ್ ಕಂಡಿದ್ದರು. ಇದರ ನಡುವೆ ಈ ಚಿತ್ರದ ನಿರ್ಮಾಪಕ ದಿಲ್ ರಾಜು ಅವರು ‘ಆರ್ಯ 3’ ಟೈಟಲ್ ಅನ್ನು ತೆಲುಗು ಫಿಲ್ಮ್ ಚೇಂಬರ್‌ನಲ್ಲಿ ರಿಜಿಸ್ಟರ್ ಮಾಡಿಸಿದ್ದು, ಈ ಚಿತ್ರದ 3ನೇ ಪಾರ್ಟ್ ಬರುವ ಬಗ್ಗೆ ಚರ್ಚೆ ಶುರುವಾಗಿದೆ. ಇದನ್ನೂ ಓದಿ:ತಿಂಗಳಿಗೆ 40 ಲಕ್ಷ ಕೊಡಿ – ರವಿ ಮೋಹನ್ ಬಳಿ ಭಾರೀ ಜೀವನಾಂಶ ಕೇಳಿದ ಆರತಿ!
ಇತ್ತೀಚೆಗೆ ದಿಲ್ ರಾಜು ‘ಆರ್ಯ 3’ ಟೈಟಲ್ ರಿಜಿಸ್ಟರ್ ಮಾಡಿಸಿರೋದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಸೈಲೆಂಟ್ ಆಗಿ ಆರ್ಯ ಸೀಕ್ವೆಲ್‌ಗೆ ತಯಾರಿ ಮಾಡಿಕೊಂಡಿರಬಹುದಾ? ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ. ಅಲ್ಲು ಅರ್ಜುನ್ ಮತ್ತು ಸುಕುಮಾರ್ ಕಾಂಬಿನೇಷನ್‌ನಲ್ಲಿ ಮತ್ತೆ ಆರ್ಯ ಸೀಕ್ವೆಲ್ ಮೂಡಿ ಬರಲಿದೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಇದನ್ನೂ ಓದಿ:ಥಗ್‌ಲೈಫ್‌ಲ್ಲಿ ‘ಶುಗರ್ ಬೇಬಿ’ ತ್ರಿಷಾ ಮಿಂಚಿಂಗ್ – ವಿವಾದಕ್ಕೀಡಾಗುತ್ತಾ ಹಾಡು?
ಅಂದಹಾಗೆ, 2004ರಲ್ಲಿ ‘ಆರ್ಯ’ ಚಿತ್ರದಲ್ಲಿ ಅಲ್ಲು ಅರ್ಜುನ್ ನಾಯಕನಾಗಿ ನಟಿಸಿ ಗೆದ್ದಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದನ್ನು ಸುಕುಮಾರ್ ಅವರೇ ನಿರ್ದೇಶನ ಮಾಡಿದ್ದರು. ಬಳಿಕ ಇದರ ಪಾರ್ಟ್ 2 ಕೂಡ ಸಕ್ಸಸ್ ಕಂಡಿತ್ತು. ಹೀಗಾಗಿ `ಆರ್ಯ 3′ ಬರುವ ಬಗ್ಗೆ ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಾಗಿದೆ. ಈ ಬಗ್ಗೆ ನಿರ್ಮಾಪಕ ದಿಲ್ ರಾಜು ಅಧಿಕೃತವಾಗಿ ತಿಳಿಸುವವರೆಗೂ ಕಾದುನೋಡಬೇಕಿದೆ.
‘ಪುಷ್ಪ’ ಸಿನಿಮಾ ಬಳಿಕ ಅಲ್ಲು ಅರ್ಜುನ್ ಗ್ಲೋಬಲ್ ಸ್ಟಾರ್ ಆಗಿ ಮಿಂಚ್ತಿದ್ದಾರೆ. ಸಂಭಾವನೆಯ ಜೊತೆಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಸದ್ಯ ಅಟ್ಲಿ ಜೊತೆ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರಲ್ಲಿ ನಟ ತ್ರಿಬಲ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ.