ಕೇಜ್ರಿವಾಲ್‌ ಅಕ್ರಮದ ಬಗ್ಗೆ ಸಾಕ್ಷ್ಯಗಳೊಂದಿಗೆ ಕಾಂಗ್ರೆಸ್‌ ದೂರು ನೀಡಿತ್ತು: ಬಿಜೆಪಿ ತಿರುಗೇಟು

Public TV
1 Min Read
arvind kejriwal BJP

ನವದೆಹಲಿ: ಲೋಕಸಭಾ ಚುನಾವಣಾ (Lok Sabha Election) ಸಮಯದಲ್ಲಿ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ (Delhi CM Arvind Kejriwal) ಅವರನ್ನು ಬಂಧನ ಮಾಡುವ ಮೂಲಕ ಮೋದಿ (PM Narendra Modi) ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಕಾಂಗ್ರೆಸ್‌ (Congress) ಆರೋಪಕ್ಕೆ ಬಿಜೆಪಿ (BJP) ಈಗ ಕಾಂಗ್ರೆಸ್‌ ಪಕ್ಷವೇ ದೆಹಲಿ ಮದ್ಯ ಹಗರಣದ ಬಗ್ಗೆ ದೂರಿನ ಪ್ರತಿಯನ್ನು ಅಪ್ಲೋಡ್‌ ಮಾಡಿ ತಿರುಗೇಟು ನೀಡಿದೆ.

ಕೇಜ್ರಿವಾಲ್‌ ವಿರುದ್ಧ ದೆಹಲಿ ಪ್ರದೇಶ ಕಾಂಗ್ರೆಸ್‌ ಮದ್ಯ ಹಗರಣಕ್ಕೆ (Delhi Excise Policy Case) ಸಂಬಂಧಿಸಿದಂತೆ 2022ರ ಜೂನ್‌ 3 ರಂದು ದೆಹಲಿ ಪೊಲೀಸ್‌ ಆಯುಕ್ತರಿಗೆ ದೂರು ನೀಡಿತ್ತು. ಇದನ್ನೂ ಓದಿ: ಏನಿದು ದೆಹಲಿ ಮದ್ಯ ಹಗರಣ? ಕೇಜ್ರಿವಾಲ್‌ ಮೇಲಿರುವ ಆರೋಪ ಏನು? ಬಂಧನವಾದ ಪ್ರಮುಖರು ಯಾರು?

2021ರಲ್ಲಿ ಜಾರಿಗೆ ತಂದ ಮದ್ಯ ನೀತಿಯಲ್ಲಿ ಭಾರೀ ಅಕ್ರಮ ನಡೆದಿದೆ. ಟೆಂಡರ್‌ ನಿಯಮವನ್ನು ಉಲ್ಲಂಘನೆ ಮಾಡಿ ಬೇಕಾದವರಿಗೆ ಲೈಸೆನ್ಸ್‌ ನೀಡಲಾಗಿದೆ ಆರೋಪಿಸಿ ಹಲವು ಸಾಕ್ಷ್ಯಗಳನ್ನು ನೀಡಿತ್ತು. ಈಗ ಆ ದೂರಿನ ಪ್ರತಿಯನ್ನು ಉಲ್ಲೇಖಿಸಿ ಬಿಜೆಪಿ ಸಾಮಾಜಿಕ ಜಾಲತಾಣ ಮುಖ್ಯಸ್ಥ ಅಮಿತ್‌ ಮಾಳವೀಯ (Amit Malviya)ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ದೆಹಲಿ ಮದ್ಯ ಹಗರಣ – ತೆಲಂಗಾಣ ಮಾಜಿ ಸಿಎಂ ಕೆಸಿಆರ್‌ ಪುತ್ರಿ ಕವಿತಾ ಅರೆಸ್ಟ್‌ ಆಗಿದ್ದು ಯಾಕೆ?

ಅಷ್ಟೇ ಅಲ್ಲದೇ ದೆಹಲಿ ಮದ್ಯ ನೀತಿ ಹಗರಣದ ಕುರಿತು ಕಾಂಗ್ರೆಸ್‌ ನಾಯಕ ಅಜಯ್‌ ಮಾಕೇನ್‌ ಸೇರಿದಂತೆ ವಕ್ತಾರರು ಮಾತನಾಡಿದ ವಿಡಿಯೋವನ್ನು ಅಪ್ಲೋಡ್‌ ಮಾಡಿದ್ದಾರೆ.

ಆಪ್‌ ಜೊತೆ ಮೈತ್ರಿ ಮಾಡಿಕೊಳ್ಳದ ಸಮಯದಲ್ಲಿ ಅವರ ವಿರುದ್ಧವೇ ನೀವು ದೂರು ನೀಡಿದ್ದೀರಿ. ಈಗ INDIA ಒಕ್ಕೂಟ ಸೇರ್ಪಡೆಯಾದ ನಂತರ ನಿಮ್ಮ ನಿಲುವು ಬದಲಾಗಿದ್ದು ಹೇಗೆ ಎಂಬ ಪ್ರಶ್ನೆಯನ್ನು ಬಿಜೆಪಿ ಕೇಳಿದೆ.

 

Share This Article