ಬಿಗ್ ಬಾಸ್ (Bigg Boss) ಮನೆಯ ಆಟ ಕಡೆಯ ಘಟ್ಟದಲ್ಲಿದೆ. ಫಿನಾಲೆಗೆ ಕೆಲವೇ ದಿನಗಳು ಬಾಕಿಯಿದೆ. 8 ಜನ ಸ್ಪರ್ಧಿಗಳಿದ್ದ ಮನೆಯಲ್ಲಿ, ಈ ವಾರ ಡಬಲ್ ಎಲಿಮಿನೇಷನ್ ಆಗಿದೆ. ಅಮೂಲ್ಯ ಗೌಡ (Amulya Gowda) ಮತ್ತು ಅರುಣ್ ಸಾಗರ್ (Arun Sagar) ಮನೆಯಿಂದ ಹೊರ ಬಂದಿದ್ದಾರೆ.
‘ಕಮಲಿ’ ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ್ದ ನಟಿ ಅಮೂಲ್ಯ ಗೌಡ ಸೀಸನ್ 9ಕ್ಕೆ ಕಾಲಿಟ್ಟಿದ್ದರು. ಟಾಸ್ಕ್, ಅಡುಗೆ, ಮನರಂಜನೆ ಅಂತಾ ಇತರೆ ಸ್ಪರ್ಧಿಗಳಿಗೆ ಸಖತ್ ಪೈಪೋಟಿ ನೋಡಿದ್ದರು. ಆದರೆ ಅಮೂಲ್ಯ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಅಮೂಲ್ಯ ಗೌಡ ಔಟ್
ನಟ, ಖಳ ನಟ, ಹೀಗೆ ಸಾಕಷ್ಟು ಪಾತ್ರಗಳ ಮೂಲಕ ಬೆಳ್ಳಿ ಪರದೆಯಲ್ಲಿ ರಂಜಿಸಿದ್ದ ಅರುಣ್ ಸಾಗರ್, ಬಿಗ್ ಬಾಸ್ ಸೀಸನ್ 1ರ ರನ್ನರ್ ಅಪ್ ಆಗಿದ್ದರು. ಬಳಿಕ ಸೀಸನ್ 9ರಲ್ಲೂ ರಂಜಿಸಿ ಸೈ ಎನಿಸಿಕೊಂಡಿದ್ದರು. 60ರ ಆಸುಪಾಸಿನಲ್ಲಿದ್ದರು ಕೂಡ 16ರ ಚಿರಯುವಕನಂತೆ ಟಾಸ್ಕ್, ಮನರಂಜನೆ ಅಂತಾ ಅರುಣ್ ಸಾಗರ್ ಮುಂದಿದ್ದರು. ಆದರೆ 14 ವಾರಕ್ಕೆ ಅರುಣ್ ಸಾಗರ್ ಆಟ ಅಂತ್ಯವಾಗಿದೆ. ಅಮೂಲ್ಯ ಜೊತೆ ಎರಡನೇ ಸ್ಪರ್ಧಿಯಾಗಿ ಎಲಿಮಿನೇಟ್ ಆಗಿದ್ದಾರೆ.
ಅನಾರೋಗ್ಯದ ಹಿನ್ನೆಲೆ ಈ ವಾರ ಟಾಸ್ಕ್‌ಗಳಲ್ಲಿ ಅರುಣ್ ಸಾಗರ್ ಕೊಂಚ ಎಡವಿದ್ದಾರೆ. ಹಾಗಾಗಿ ಫಿನಾಲೆಗೆ ಹೋಗುವ ಅವಕಾಶ ಈ ಬಾರಿಯೂ ಕೈ ತಪ್ಪಿದೆ. ಈ ಸಲ ಕೂಡ ಅರುಣ್ ಸಾಗರ್ ಅವರ ಅದೃಷ್ಟ ಕೈ ಕೊಟ್ಟಿದೆ. ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಲ್ಲಿ ದಿವ್ಯಾಗೆ ಕ್ಲಾಸ್ ತಗೆದುಕೊಂಡು ಆರ್ಯವರ್ಧನ್ ಗುರೂಜಿ
ಕನ್ನಡದ ಬಿಗ್ ಬಾಸ್ ಇದೀಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ಕೊನೆಗೂ ಬಿಗ್ ಬಾಸ್ ಫಿನಾಲೆ ದಿನಾಂಕವನ್ನು ಘೋಷಣೆ ಮಾಡಿದ್ದು ಡಿಸೆಂಬರ್ 31 ಹಾಗೂ ಜನವರಿ 1ನೇ ತಾರೀಖು ಬಿಗ್ ಬಾಸ್ ಫಿನಾಲೆ ನಡೆಯುವುದು ನಿಕ್ಕಿಯಾಗಿದೆ.