ಬೆಂಗಳೂರು: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಹಾಗೂ ಕಿಚ್ಚ ಸುದೀಪ್ ನಟನೆಯ ‘ದಬಾಂಗ್-3’ ಚಿತ್ರ ಎಲ್ಲೆಡೆ ಹವಾ ಕ್ರಿಯೆಟ್ ಮಾಡಿದೆ. ಇದೀಗ ರಂಗೋಲಿಯಲ್ಲಿ ದಬಾಂಗ್-3 ಮೂಡಿದೆ.
ಬೆಂಗಳೂರಿನ ಖ್ಯಾತ ರಂಗೋಲಿ ಕಲಾವಿದ ಅಕ್ಷಯ್ ಜಲಿಹಲ್ ಎಂಬವರು ರಂಗೋಲಿ ಮೂಲಕ ಇಬ್ಬರು ನಟರಿಗೂ ಗೌರವ ಸಲ್ಲಿಸಿದ್ದಾರೆ. ರಂಗೋಲಿಯಲ್ಲೇ ಅಕ್ಷಯ್ ದಬಾಂಗ್-3ರ ಸಲ್ಮಾನ್ ಖಾನ್ ಹಾಗೂ ಸುದೀಪ್ ಅವರ ಪೋಸ್ಟರ್ ರೆಡಿ ಮಾಡಿದ್ದಾರೆ.
Advertisement
Advertisement
ಅಕ್ಷಯ್ ಅವರ ರಂಗೋಲಿಗೆ ಸುದೀಪ್ ಹಾಗೂ ಸಲ್ಮಾನ್ ಅಭಿಮಾನಿಗಳಿಂದ ಪ್ರಶಂಸೆಗಳ ಮಹಾಪೂರ ಹರಿದು ಬರುತ್ತಿದೆ. ಅಕ್ಷಯ್ ಜಲಿಹಲ್ ಅವರು ಪ್ಲ್ಯಾಷ್ ರಂಗೋಲಿ, ಪೋಟ್ರೇಟ್ ರಂಗೋಲಿ, ಹೆಚ್‌ಡಿ ರಂಗೋಲಿಯಂತಹ ಹಲವು ವಿಭಿನ್ನ ರಂಗೋಲಿಗಳಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ.
Advertisement
ಕನ್ನಡ ಬಿಗ್ ಬಾಸ್‍ನಲ್ಲಿ ಶನಿವಾರ `ವಾರದ ಜೊತೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಸ್ಕ್ರೀನ್ ಮೇಲೆ ಬಂದಿದ್ದರು. ಸಲ್ಮಾನ್ ಖಾನ್ ಜೊತೆ `ದಬಾಂಗ್-3′ ಚಿತ್ರತಂಡ ಹಿಂದಿಯ ಬಿಗ್ ಬಾಸ್ ವೇದಿಕೆಯಲ್ಲಿ ನಿಂತು ಕನ್ನಡ ಬಿಗ್ ಬಾಸ್ ಸ್ಕ್ರೀನ್ ಮೇಲೆ ಬಂದಿದ್ದರು.
Advertisement
ಸುದೀಪ್ ‘ದಬಾಂಗ್- 3’ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಚಿತ್ರವನ್ನು ನಟ, ನಿರ್ದೇಶಕ ಪ್ರಭುದೇವ ನಿರ್ದೇಶಿಸಿದ್ದು, ಸಲ್ಮಾನ್‍ಗೆ ನಾಯಕಿಯಾಗಿ ನಟಿ ಸೋನಾಕ್ಷಿ ಸಿನ್ಹಾ ನಟಿಒಸಿದ್ದಾರೆ. ಸಲ್ಮಾನ್ ಮತ್ತು ಅರ್ಬಾಜ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಡಿಸೆಂಬರ್ 20ರಂದು ಈ ಚಿತ್ರ ಬಿಡುಗಡೆಯಾಗಲಿದೆ.