ಶಿವಮೊಗ್ಗ/ಮಂಗಳೂರು: ಶಿವಮೊಗ್ಗ ಪೊಲೀಸರಿಂದ (Shivamogga Police) ಬಂಧಿತನಾಗಿದ್ದ ಶಂಕಿತ ಉಗ್ರ (Suspected Terrorist) ಮಾಝ್ (Maz) ತಂದೆ ಶುಕ್ರವಾರ ಮಂಗಳೂರಿನ (Mangaluru) ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ.
ಮಗನ ಬಂಧನದ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಮುನೀರ್ ಅಹಮದ್ ಇಂದು ಸಂಜೆ ಎದೆನೋವಿನ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಈ ಹಿನ್ನಲೆ ಮಾಝ್‌ನನ್ನು ಶಿವಮೊಗ್ಗ ಪೊಲೀಸರು ಇಂದು ರಾತ್ರಿಯೇ ಮಂಗಳೂರಿಗೆ ಕರೆದೊಯ್ಯಲಿದ್ದಾರೆ.
Advertisement
Advertisement
ಮಾಝ್ ಬಗ್ಗೆ ಅತಿ ಹೆಚ್ಚು ಕಾಳಜಿ ಹೊಂದಿದ್ದ ಮುನೀರ್, ಆತನ ಶಿಕ್ಷಣಕ್ಕಾಗಿ ತೀರ್ಥಹಳ್ಳಿಯಿಂದ ಮಂಗಳೂರಿಗೆ ಶಿಫ್ಟ್ ಆಗಿದ್ದರು. ತಮ್ಮ ಮಗ ಸೆಪ್ಟೆಂಬರ್ 14 ರಿಂದ ನಾಪತ್ತೆಯಾಗಿದ್ದಾನೆ ಎಂದು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಕೂಡಾ ಸಲ್ಲಿಸಿದ್ದರು. ಮನೆ ಕೆಳಗೆ ಪಾರ್ಸೆಲ್ ತೆಗೆದುಕೊಂಡು ಬರಲು ಹೋದವನು ವಾಪಸ್ ಬಂದಿರಲೇ ಇಲ್ಲ ಎಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಮೈಸೂರಿನಲ್ಲಿ ಮತ್ತೆ DC Vs MLA ಫೈಟ್- ಬಗಾದಿ ವರ್ಗಾವಣೆಗೆ ರಾಮದಾಸ್ ಪಟ್ಟು
Advertisement
Advertisement
ಮಾಝ್ ತಂದೆಗೆ 53 ವರ್ಷ ವಯಸ್ಸಾಗಿದ್ದು, ಮಗನ ಬಂಧನದ ಬಳಿಕ ಕುಗ್ಗಿಹೋಗಿದ್ದರು. ಹೀಗಾಗಿ ಅವರಿಗೆ ಹೃದಯಾಘಾತ ಉಂಟಾಗಿ ನಿಧನರಾಗಿದ್ದಾರೆ ಎನ್ನಲಾಗಿದೆ. ಇನ್ನೂಬ್ಬ ಬಂಧಿತ ಶಾರೀಕ್ ತಂದೆ ಕೂಡಾ ಒಂದೂವರೆ ತಿಂಗಳ ಹಿಂದಷ್ಟೆ ನಿಧನರಾಗಿದ್ದರು. ಇದನ್ನೂ ಓದಿ: ಅಂಗಾಂಗ ದಾನ ಮಾಡಿ 9 ಜೀವಗಳಿಗೆ ಬೆಳಕಾದ ರಕ್ಷಿತಾ ಕುಟುಂಬಕ್ಕೆ ಸರ್ಕಾರದಿಂದ 8 ಲಕ್ಷ ರೂ. ಪರಿಹಾರ