ChikkamagaluruDistrictsKarnatakaLatestMain Post

ಅಂಗಾಂಗ ದಾನ ಮಾಡಿ 9 ಜೀವಗಳಿಗೆ ಬೆಳಕಾದ ರಕ್ಷಿತಾ ಕುಟುಂಬಕ್ಕೆ ಸರ್ಕಾರದಿಂದ 8 ಲಕ್ಷ ರೂ. ಪರಿಹಾರ

ಚಿಕ್ಕಮಗಳೂರು: ಸಾವಿನಲ್ಲೂ ಸಾರ್ಥಕತೆ ಮೆರೆದ ಜಿಲ್ಲೆಯ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯಾದ ಪ್ರಥಮ ಪಿಯುಸಿ (PUC) ವಿದ್ಯಾರ್ಥಿನಿ ರಕ್ಷಿತಾ (Rakshitha) ಕುಟುಂಬಕ್ಕೆ ರಾಜ್ಯ ಸರ್ಕಾರ (Karnataka Government) ಎಂಟು ಲಕ್ಷ ರೂ. ಪರಿಹಾರ (Compensation) ಘೋಷಣೆ ಮಾಡಿದೆ.

ಚಿಕ್ಕಮಗಳೂರು ನಗರದ ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಫಸ್ಟ್ ಪಿಯುಸಿ ಓದುತ್ತಿದ್ದ 18 ವರ್ಷದ ಯುವತಿ ರಕ್ಷಿತಾ, ಐದು ದಿನಗಳ ಹಿಂದೆ ಸರ್ಕಾರಿ ಬಸ್‍ನಿಂದ (Bus) ಇಳಿಯುವಾಗ ಆಯಾ ತಪ್ಪಿ ಬಿದ್ದು ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿತ್ತು (Brain Dead). ಕೂಡಲೇ ಆಸ್ಪತ್ರೆಗೆ ಸೇರಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹಾಗಾಗಿ, ರಕ್ಷಿತಾ ಪೋಷಕರು ಆಕೆಯ ಸಾವಿನ ನೋವಿನಲ್ಲೂ ಆಕೆಯ ಅಂಗಾಂಗಗಳನ್ನು ದಾನ ಮಾಡಿದ್ದರು. ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ – ಕುಟುಂಬದ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ

ಆಕೆಯ ಒಂಬತ್ತು ಅಂಗಾಂಗಳಿಂದ 9 ಜನರ ಜೀವ ಉಳಿದಿದೆ. ಹಾಗಾಗಿ, ಸರ್ಕಾರ ಆಕೆಯ ಕುಟುಂಬಕ್ಕೆ ಪರಿಹಾರ ಎನ್ನುವುದಕ್ಕಿಂತ ಗೌರವಯುತವಾಗಿ ಎಂಟು ಲಕ್ಷ ರೂ. ಹಣವನ್ನು ನೀಡಿದೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ರೂ. ತಾಂಡಾ ಅಭಿವೃದ್ಧಿ ನಿಗಮದಿಂದ 1 ಲಕ್ಷ ರೂ. ಹಾಗೂ ಉದ್ಯಮಶೀಲತೆ ಯೋಜನೆಯಡಿ 2 ಲಕ್ಷ ರೂ. ಹಣವನ್ನು ಸರ್ಕಾರ ಮಂಜೂರು ಮಾಡಿದೆ. ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕುಡುಚಿ ಶಾಸಕ ಪಿ.ರಾಜೀವ್ (P. Rajeev) ಕಡೂರಿನ ಸೋಮನಹಳ್ಳಿ ತಾಂಡ್ಯಾದ ರಕ್ಷಿತಾ ಮನೆಗೆ ಭೇಟಿ ನೀಡಿ ತಾಂಡ ಅಭಿವೃದ್ಧಿ ನಿಗಮದ ಒಂದು ಲಕ್ಷ ರೂ. ಹಾಗೂ ಉದ್ಯಮಶೀಲತೆ ಯೋಜನೆಯಡಿಯ 2 ಲಕ್ಷ ಒಟ್ಟು ಮೂರು ಲಕ್ಷ ರೂ. ಹಣದ ಚೆಕ್ ನೀಡಲಿದ್ದಾರೆ. ಸರ್ಕಾರದ ಪ್ರತಿನಿಧಿಯಾಗಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಮುಖ್ಯಮಂತ್ರಿ ಪರಿಹಾರ ನಿಧಿಯ 5 ಲಕ್ಷ ರೂ. ಚೆಕ್ ನೀಡಲಿದ್ದಾರೆ. ಇದನ್ನೂ ಓದಿ: ಗಾಂಜಾ ಮಿಶ್ರಿತ ಚಾಕ್ಲೇಟ್ ಮಾರಾಟ- ರಾಯಚೂರಿನಲ್ಲಿ ಅಬಕಾರಿ ಪೊಲೀಸರ ದಾಳಿ

Live Tv

Leave a Reply

Your email address will not be published.

Back to top button