ಮಣಿಪುರ ಹಿಂಸಾಚಾರದ ಹಿಂದೆ ಇದೆ ವಿದೇಶಿ ಶಕ್ತಿಗಳ ಕೈವಾಡ

Public TV
1 Min Read
MANIPUR

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

ನವದೆಹಲಿ: ಮಣಿಪುರ ಹಿಂಸಾಚಾರದ (Violence In Manipur) ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿರುವುದು ಬೆಳಕಿಗೆ ಬಂದಿದೆ. ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ಮ್ಯಾನ್ಮಾರ್‌ನಿಂದ ಪೂರೈಕೆಯಾದ ಶಸ್ತ್ರಾಸ್ತ್ರಗಳನ್ನು (Arms) ವಶಪಡಿಸಿಕೊಳ್ಳಲಾಗಿದೆ.

ಮ್ಯಾನ್ಮಾರ್‌ನಿಂದ ಕಳ್ಳಸಾಗಾಣಿಕೆಯ ಮೂಲಕ ಭಾರತಕ್ಕೆ ಶಸ್ತ್ರಾಸ್ತ್ರಗಳ ಪೂರೈಕೆಯಾಗಿದೆ. ಜೂನ್‌ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಪೂರೈಕೆಯಾಗಿದೆ ಎಂದು ಗುಪ್ತಚರ ಮೂಲಗಳು (Intelligence Sources) ತಿಳಿಸಿವೆ. ಇದನ್ನೂ ಓದಿ: ವಿದೇಶ ಕೆಲಸ ಬಿಟ್ಟು ಭಾರತದಲ್ಲಿ ಟೀ ಅಂಗಡಿ ಹಾಕಿ ಕೋಟ್ಯಧಿಪತಿಯಾದ್ರು!

Manipur Violence 4

ಬಂಡುಕೋರ ಗುಂಪುಗಳು (Insurgent Groups) ಮೂರು ವಾಹನಗಳಲ್ಲಿ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿವೆ. ಮ್ಯಾನ್ಮಾರ್-ಚೀನಾ ಗಡಿಯ ಸಮೀಪದಲ್ಲಿರುವ ಕಳ್ಳ ಸಾಗಾಣೆ ಮಾರುಕಟ್ಟೆಯಿಂದ ಶಸ್ತ್ರಾಸ್ತ್ರ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇಂಫಾಲ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ 4 ಮಂದಿಯನ್ನು ಬಂಧಿಸಲಾಗಿದೆ. ಶೋಧದ ವೇಳೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು, 2.5 ಲಕ್ಷ ರೂ. ನಗದು, ಕೆಲವು ಮೊಬೈಲ್ ಫೋನ್‌ಗಳು ಮತ್ತು ನಾಲ್ಕು ಚಕ್ರದ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೊನ್ನೆ ಮಾನವೀಯ ದೃಷ್ಟಿಯಿಂದ 12 ಬಂಡುಕೋರರನ್ನು ಸೇನೆ ಬಿಡುಗಡೆ ಮಾಡಿತ್ತು. ಆದರೆ ಇದು ನಮ್ಮ ಬಲಹೀನತೆ ಅಲ್ಲ ಎಂದು ಬಂಡುಕೋರರಿಗೆ ಸೇನೆ ಎಚ್ಚರಿಕೆ ನೀಡಿದೆ.

Share This Article