ಕನ್ನಡ ಸಿನಿಮಾ ರಂಗದ ಹಿರಿಯ ನಟ ಶಕ್ತಿ ಪ್ರಸಾದ್ ಪತ್ನಿ, ಖ್ಯಾತ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮೀದೇವಿ ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕಳೆದ ಒಂದು ತಿಂಗಳಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ, ಇಂದು ಮಧ್ಯಾಹ್ನ 12 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
Advertisement
ಸರ್ಜಾ ಕುಟುಂಬದ ಬೆಳವಣಿಗೆಯಲ್ಲಿ ಲಕ್ಷ್ಮಿದೇವಿ ಅವರ ಪಾತ್ರದ ದೊಡ್ಡದು. ಪತಿಯು ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದರೆ, ಮಕ್ಕಳನ್ನು ಬೆಳೆಸುವಲ್ಲಿ ಲಕ್ಷ್ಮಿದೇವಿ ಅವರೇ ಪ್ರಮುಖ ಪಾತ್ರ ವಹಿಸಿದವರು. ಮೂವರು ಮಕ್ಕಳಲ್ಲಿ ಇಬ್ಬರು ಮಕ್ಕಳನ್ನು ಸಿನಿಮಾ ರಂಗದಲ್ಲೇ ಬೆಳೆಯುವಂತೆ ಮಾಡಿದ್ದರು. ಕಿಶೋರ್ ಸರ್ಜಾ ಮತ್ತು ಅರ್ಜುನ್ ಸರ್ಜಾ ಹಾಗೂ ಚಿರು ಸರ್ಜಾ ಅವರ ತಾಯಿ ಅಮ್ಮಾಜಿ ಇವರ ಮೂವರು ಮಕ್ಕಳು. ಮುಂದೆ ಮೊಮ್ಮಕ್ಕಳು ಕೂಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಾಗ ಅವರನ್ನು ಪ್ರೋತ್ಸಾಹಿಸಿದವರು.ಇದನ್ನೂ ಓದಿ:ಚಿಕ್ಕಣ್ಣನ ಮದುವೆ ಮುಂದಿನ ವರ್ಷ ಫಿಕ್ಸ್: ಕುಟುಂಬದ ಒತ್ತಡಕ್ಕೆ ಕೊನೆಗೂ ಮಣಿದ ನಟ
Advertisement
Advertisement
ಕಳೆದ ವರ್ಷವಷ್ಟೇ ಸರ್ಜಾ ಕುಟುಂಬ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದೆ. ಈಗ ಕುಟುಂಬದ ಹಿರಿಯ ಜೀವವನ್ನು ಕಳೆದುಕೊಂಡಿದೆ. ಅರ್ಜುನ್ ಸರ್ಜಾ ಸದ್ಯ ಬೆಂಗಳೂರಿನಲ್ಲೇ ಇದ್ದಾರೆ ಎಂಬ ಮಾಹಿತಿ ಇದೆ. ಧ್ರುವ ಸರ್ಜಾ ಶೂಟಿಂಗ್ ಗಾಗಿ ಹೈದರಾಬಾದ್ ಗೆ ತೆರಳಿದ್ದರು. ಅಲ್ಲಿಂದ ಈಗ ಹೊರಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.