ಟಾಲಿವುಡ್ ಹೀರೋ ವಿಜಯ್ ದೇವರಕೊಂಡ (Vijay Devarakonda) ಸದ್ಯ ‘ಖುಷಿ’ (Kushi) ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಈ ಬೆನ್ನಲ್ಲೇ ಹೊಸ ಸಿನಿಮಾದ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ಅರ್ಜುನ್ ರೆಡ್ಡಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಜೊತೆ ವಿಜಯ್ ಮತ್ತೆ ಸಿನಿಮಾಗಾಗಿ ಕೈಜೋಡಿಸಿದ್ದಾರೆ.
ಖುಷಿ (Kushi) ಚಿತ್ರದ ಮೂಲಕ ಸಮಂತಾ- ವಿಜಯ್ ಕೆರಿಯರ್‌ಗೆ ಬಿಗ್ ಬ್ರೇಕ್ ಸಿಕ್ಕಿದೆ. ಹೀಗಿರುವಾಗ ಹೊಸ ಪ್ರಾಜೆಕ್ಟ್‌ಗಳತ್ತ ನಟ ಗಮನ ನೀಡುತ್ತಿದ್ದಾರೆ. ಅರ್ಜುನ್ ರೆಡ್ಡಿ ಡೈರೆಕ್ಟರ್- ಹೀರೋ ವಿಜಯ್ ಮತ್ತೆ ಒಂದಾಗುತ್ತಿದ್ದಾರೆ.
‘ಕಬೀರ್ ಸಿಂಗ್’ ಬಳಿಕ ರಣ್‌ಬೀರ್, ರಶ್ಮಿಕಾ ನಟನೆಯ ‘ಅನಿಮಲ್’ (Animal) ಚಿತ್ರಕ್ಕೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿದ್ದಾರೆ. ರಿಲೀಸ್‌ಗೆ ರೆಡಿಯಿರುವ ಸಮಯದಲ್ಲೇ ವಿಜಯ್‌ಗೆ ಹೊಸ ಕಥೆ ಹೇಳಿ, ಸಿನಿಮಾ ಮಾಡುವ ಬಗ್ಗೆ ಒಂದು ಹಂತದ ಮಾತುಕಥೆ ನಡೆಸಿದ್ದಾರೆ. ಸಂದೀಪ್ ಕಥೆಗೆ ವಿಜಯ್ ಕೂಡ ಓಕೆ ಎಂದಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಲಿದೆ. ಇದನ್ನೂ ಓದಿ:ಸಹಾಯಕನ ಮದುವೆಗೆ ರಶ್ಮಿಕಾ ಹಾಜರಿ- ನಟಿಯ ಕಾಲಿಗೆ ಬಿದ್ದ ನವಜೋಡಿ
ಮೃಣಾಲ್ ಠಾಕೂರ್ (Mrunal Thakur) ಜೊತೆ ಹೊಸ ಚಿತ್ರ, ಶ್ರೀಲೀಲಾ(Sreeleela) ಜೊತೆಗಿನ ಹೊಸ ಸಿನಿಮಾಗೆ ವಿಜಯ್ ದೇವರಕೊಂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಗೀತಾ ಗೋವಿಂದಂ ನಿರ್ದೇಶಕ- ರಶ್ಮಿಕಾ ಮಂದಣ್ಣ ಜೊತೆ ಮತ್ತೆ ಹೊಸ ಸಿನಿಮಾ ಮಾಡುವ ಸುದ್ದಿಯಿದೆ. ಇದೆಲ್ಲದರ ನಡುವೆ ‘ಅರ್ಜುನ್ ರೆಡ್ಡಿ’ ಸಿನಿಮಾಗೂ ವಿಜಯ್ ಓಕೆ ಎಂದಿದ್ದಾರೆ.