ಕಲಬುರಗಿ: ನಮ್ಮ ಜಿಲ್ಲೆಗಳಲ್ಲಿ ಏನೇ ಆದ್ರು ನೋಡಿಕೊಂಡು ಇರಲು ದಕ್ಷಿಣ ಕನ್ನಡ ಜಿಲ್ಲೆಯವರು ಷಂಡರಾ? ನಾವು ಪ್ರತಿಭಟನೆ ಮಾಡೋದು ತಪ್ಪಾ ಅಂತ ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ನಲವತ್ತೆರಡು ದಿನ ಸುಮ್ಮನಿದ್ದೆವು. ಆದ್ರೆ ನೀವು ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾದಾಗ ಧರಣಿ ಮಾಡಲು ಮುಂದಾಗಿದ್ದೆವೆ. ನಾವು ಕಾರ್ಯಕ್ರಮ ಮಾಡ್ತೇವೆ, ಧರಣಿ ಮಾಡ್ತೇವೆ ಅಂದ್ರೆ ಪರವಾನಿಗೆ ಕೊಡೋದಿಲ್ಲ. ಆದ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯವನರು ಕಾರ್ಯಕ್ರಮ ಮಾಡ್ತಾರೆ ಅಂತ ಕಿಡಿಕಾರಿದ್ದಾರೆ.
Advertisement
ಕೆಎಫ್‍ಡಿ ಮತ್ತು ಪಿಎಫ್‍ಐ ಸಂಘಟನೆಗಳನ್ನು ನಿಷೇಧ ಮಾಡಬೇಕು. ಈ ಹಿಂದೆ ಈ ಸಂಘಟನೆಗಳ ಮೇಲೆ ಕೇಸ್ ಹಾಕಲಾಗಿತ್ತು. ಆದ್ರೆ ಸಿದ್ದರಾಮಯ್ಯನವರ ಸರ್ಕಾರ ಬಂದ ಮೇಲೆ ಅವರ ಮೇಲಿನ ಕೇಸ್ ಹಿಂಪಡೆಯಲಾಗಿದೆ. ಜೈಲಿಂದ ಬಂದವರು ನಮ್ಮ ಕಾರ್ಯಕರ್ತರನ್ನು ಹತ್ಯೆ ಮಾಡುತ್ತಿದ್ದಾರೆ ಅಂತಾ ಶೋಭಾ ಆರೋಪಿಸಿದ್ದಾರೆ.
Advertisement
ಇದನ್ನೂ ಓದಿ: ಡಿವಿಎಸ್, ಕರಂದ್ಲಾಜೆಯಿಂದ ಕೋಮು ಗಲಭೆ: ರಮಾನಾಥ ರೈ
Advertisement
ಇದನ್ನೂ ಓದಿ: ನನ್ನ ಮಗನನ್ನ ಯಾವ ರಾಜಕಾರಣಿಗಳು, ಸಂಘಟನೆಯವ್ರು ಉಳಿಸಲಿಲ್ಲ: ಶರತ್ ತಂದೆ ಕಣ್ಣೀರು