Connect with us

Dakshina Kannada

ನನ್ನ ಮಗನನ್ನ ಯಾವ ರಾಜಕಾರಣಿಗಳು, ಸಂಘಟನೆಯವ್ರು ಉಳಿಸಲಿಲ್ಲ: ಶರತ್ ತಂದೆ ಕಣ್ಣೀರು

Published

on

– ಶರತ್ ಸ್ವಗ್ರಾಮಕ್ಕೆ ಭೇಟಿ ನೀಡಿದ ಕಲ್ಲಡ್ಕ ಪ್ರಭಾಕರ್ ಭಟ್

ಮಂಗಳೂರು: 4 ದಿನಗಳ ಹಿಂದೆ ಹಲ್ಲೆಗೊಳಗಾಗಿದ್ದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವನ್ನಪ್ಪಿದ್ದು, ಮಗನ ಸಾವಿನ ದುಃಖವನ್ನ ಶರತ್ ಕುಟುಂಬ ಹೊರಹಾಕಿದೆ.

ನನ್ನ ಮಗನನ್ನ ಯಾವ ರಾಜಕಾರಣಿಗಳು ಉಳಿಸಲಿಲ್ಲ. ಸಂಘಟನೆಯವ್ರು ಉಳಿಸಲಿಲ್ಲ. ದಿನವಡೀ ಸುದ್ದಿ ಹಾಕಿದ ನಿಮ್ಮ ಕೈಯಲ್ಲೂ ನನ್ನ ಮಗನನ್ನ ಉಳಿಸೋಕೆ ಆಗಲಿಲ್ಲ. ಶರತ್ ಸಾವು ನಮ್ಮ ಇಡೀ ಕುಟುಂಬವನ್ನ ನೋವಿಗೆ ತಳ್ಳಿದೆ. ನಾವು ಯಾರ ಬಗ್ಗೆನೂ ಮಾತನಾಡಲು ಇಷ್ಟವಿಲ್ಲ ಎಂದು ಶರತ್ ತಂದೆ ಕಣ್ಣೀರಿಟ್ಟದ್ದಾರೆ.

ಈ ಮಧ್ಯೆ ಮೃತ ಶರತ್ ಮಡಿವಾಳ ಮನೆಗೆ ಕಲ್ಲಡ್ಕ ಪ್ರಭಾಕರ್ ಭಟ್ ಭೇಟಿ ನೀಡಿದ್ರು. ಶರತ್ ಪೋಷಕರಿಗೆ ಸಾಂತ್ವನ ಹೇಳಿ ಅಂತ್ಯ ಸಂಸ್ಕಾರದ ಜಾಗ ವೀಕ್ಷಣೆ ಮಾಡಿದ್ರು. ಇದೇ ವೇಳೆ ಮಾತನಾಡಿದ ಅವರು, ನಿಮ್ಮ ಕಣ್ಮುಂದೆಯೇ ಎಲ್ಲಾ ಇದೆ. ನೀವೇ ನೋಡಿ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ರು.

ಶರತ್ ಕುಟುಂಬದ ಎಸ್ಟೇಟ್‍ನಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆದಿದೆ. ಶರತ್ ಮನೆಯಲ್ಲಿ ಶೋಕ ಮಡುಗಟ್ಟಿದ್ದು, ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.  ಸುರಿಯೋ ಮಳೆಯಲ್ಲೂ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗುತ್ತಿದೆ.

ಸಜಿಪ ಬಳಿಯ ಕೆಂದೂರು ಗ್ರಾಮಕ್ಕೆ ಶರತ್ ಪಾರ್ಥಿವ ಶರೀರ ತಲುಪಿದ್ದು, ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಾವಿರಾರು ಜನರು ಅಂತಿಮ ದರ್ಶನ ಪಡೆದಿದ್ದಾರೆ. ಸಾವಿರಕ್ಕೂ ಅಧಿಕ ಬೈಕ್ ಗಳಲ್ಲಿ ಬಂದು ಹಿಂದೂ ಸಂಘಟನಾ ಕಾರ್ಯಕರ್ತರು ಅಂತಿಮ ದರ್ಶನದಲ್ಲಿ ಭಾಗಿಯಾಗಿದ್ದಾರೆ. ಮೃತದೇಹದ ಸುತ್ತಲು ಪೊಲೀಸರ ಸರ್ಪಗಾವಲು ಹಾಕಲಾಗಿದೆ.

ಈ ನಡುವೆ ಬಂಟ್ವಾಳದ ಸಜೀಪಕ್ಕೆ ಶರತ್ ಶವಯಾತ್ರೆ ಸಾಗುತ್ತಿರುವ ವೇಳೆ ಬಿಸಿ ರೋಡ್‍ನಲ್ಲಿ ಶವಯಾತ್ರೆಗೆ ತಡೆಯೊಡ್ಡಿದ ಹಿಂದೂ ಮುಖಂಡರು, ಅಂತಿಮ ದರ್ಶನಕ್ಕೆ ಒತ್ತಾಯಿಸಿದ್ರು. ದರ್ಶನಕ್ಕೆ ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಪೊಲೀಸರ ಜೊತೆ ಹಿಂದೂ ಮುಖಂಡರು ವಾಗ್ವಾದ ನಡೆಸಿದ್ರು. ಕೈಕಂಬದಲ್ಲಿ ಕಲ್ಲು ತೂರಾಟ ನಡೆಯಿತು. ಗಲಭೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದು, ಲಘು ಲಾಠಿಚಾರ್ಜ್ ಮಾಡಿದ್ರು. ಖಾಸಗಿ ಬಸ್ ಮೇಲೆ ಕಲ್ಲು ತೂರಾಟವಾಗಿ ಬಸ್‍ನ ಗಾಜು ಪುಡಿಪುಡಿಯಾಯ್ತು. ಓರ್ವ ಯುವಕನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಮಾಜಿ ಸಚಿವ ಕೃಷ್ಣ ಪಾಲೀಮರ್, ಮಾಜಿ ಶಾಸಕ ಯೋಗೀಶ್ ಭಟ್, ರಾಜೇಶ್ ನಾಯಕ್ ಉಲ್ಲೇಪಾಡಿ, ಬಿಜೆಪಿ ನಾಯಕ ಸಂತೋಷ್, ಉಲ್ಲಾಳದ ಬಿಜೆಪಿ ಮುಖಂಡರು, ಬಜರಂಗದಳ, ಆರ್‍ಎಸ್‍ಎಸ್, ವಿಎಚ್‍ಪಿಯ ನೂರಾರು ಮುಖಂಡರುಗಳು ಶವಯಾತ್ರೆಯಲ್ಲಿ ಭಾಗಿಯಾದ್ರು.

https://www.youtube.com/watch?v=bHr6olvlgmU

https://www.youtube.com/watch?v=o40hIeKFh8E

Click to comment

Leave a Reply

Your email address will not be published. Required fields are marked *