ಬೆಂಗಳೂರು: ಬಿಗ್ಬಾಸ್ ಸೀಸನ್8ರ ದಿವ್ಯಾ ಉರುಡುಗ ಮತ್ತು ಅರವಿಂದ್ ಇಬ್ಬರು ಮದುವೆ ಆಗುತ್ತಾರಾ? ಎಂದು ಅವರ ಅಭಿಮಾನಿಗಳು ಕೇಳುತ್ತಿರುತ್ತಾರೆ. ಆದರೆ ಇದೀಗ ಈ ವಿಚಾರವಾಗಿ ಇಬ್ಬರ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.
Advertisement
ಖಾಸಗಿ ವಾಹಿನಿಯಲ್ಲಿ ಕಿರುತೆರೆಯ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅವಾರ್ಡ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಗ್ಬಾಸ್ ಖ್ಯಾತಿಯ ಅರವಿಂದ್ ಮತ್ತು ದಿವ್ಯಾ ಡಾನ್ಸ್ ಮಾಡುವ ಮೂಲಕವಾಗಿ ಮನರಂಜನೆ ನೀಡಿದ್ದಾರೆ. ಈ ವೇಳೆ ಅವರಿಗೆ ಬಂದಿರುವ ಪ್ರಶ್ನೆಗೆ ಉತ್ತರಿಸುತ್ತಾ ಇಬ್ಬರು ಮದುವೆ ಕುರಿತಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ಗೋಕರ್ಣದಲ್ಲಿ ಪೂಜೆ, ದಕ್ಷಿಣೆ ಕಾಸಿಗಾಗಿ ಜಗಳ – ಕೊನೆಗೂ ಭಕ್ತರಿಗೆ ಅವಕಾಶ, ಅರ್ಚಕರಿಗೆ ಶಾಕ್
Advertisement
Advertisement
ಬಿಗ್ಬಾಸ್ ಮನೆಯಿಂದ ಹೊರ ಬಂದ ನಂತರದಲ್ಲಿ ಅರವಿಂದ್ಗೆ ಸಾಕಷ್ಟು ಪ್ರಪೋಸ್ಗಳು ಬಂದಿವೆ. ಇದನ್ನು ಅರವಿಂದ್ ಅವರೇ ಒಪ್ಪಿಕೊಂಡಿದ್ದಾರೆ. ಈ ವೇಳೆ ಅವರಿಗೆ ಮದುವೆ ಯಾವಾಗ ಎನ್ನುವ ಪ್ರಶ್ನೆ ಕೇಳಲಾಯಿತು. ಆಗ ಇಬ್ಬರು ನಮಗೆ ಈ ಪ್ರಶ್ನೆ ಕೇಳುತ್ತಿಲ್ಲ ಎಂದು ನಾಚುತ್ತಾ ಹೇಳಿದ್ದಾರೆ. ಇದಕ್ಕೆ ಅರವಿಂದ್ ಕೊಂಚ ನಾಚುತ್ತಲೇ ಉತ್ತರಿಸಿದರು. ಲೈಫ್ನಲ್ಲಿ ಸಾಧಿಸೋಕೆ ಇನ್ನೂ ತುಂಬಾ ಇದೆ. ಎಲ್ಲವೂ ಪಾಸಿಟಿವ್ ಆಗಿಯೇ ಇದೆ. ಆ ಸಿಹಿಸುದ್ದಿ ಶೀಘ್ರವೇ ಗೊತ್ತಾಗಲಿದೆ ಎಂದರು. ಆದರೆ ಹೀಗೆ ಹೇಳುವ ಮೂಲಕವಾಗಿ ಇಬ್ಬರು ನಕ್ಕು ತಮ್ಮ ಮದುವೆ ವಿಚಾರವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ಮಗ ಇಲ್ಲದೇ ಹುಟ್ಟುಹಬ್ಬ ಆಚರಿಸಲ್ಲ: ಶಾರೂಖ್ ಪತ್ನಿ ಗೌರಿ ಖಾನ್
Advertisement
ದಿವ್ಯಾ, ಅರವಿಂದ್ ಇಬ್ಬರು ಬಿಗ್ಬಾಸ್ನ ಟಾಪ್ ಫೈನಲ್ ಲಿಸ್ಟ್ಗನಲ್ಲಿ ಬಂದಿದ್ದರು. ಇರುವಷ್ಟು ದಿನ ಸಖತ್ ಮನರಂಜನೆಯನ್ನು ಈ ಜೋಡಿ ನೀಡಿತ್ತು. ಬಿಗ್ಬಾಸ್ ಮುಗಿದು ಸರಿಸುಮಾರು ತಿಂಗಳುಗಳೇ ಕಳೆದಿದೆ. ಆದರೆ ಈ ಜೋಡಿ ಮಾತ್ರ ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದೆ. ಬಿಗ್ಬಾಸ್ ಮನೆಯಿಂದ ಹೊರ ಬಂದಿರುವ ಈ ಜೋಡಿಯ ಮದುವೆ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ. ಇವರು ಯಾವಾಗ ಮದುವೆ ಆಗುತ್ತಾರೆ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಇದಕ್ಕೆ ಅರವಿಂದ್ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ. ಇದನ್ನೂ ಓದಿ: ಉಪ ಚುನಾವಣೆ ಗೆಲ್ಲುವ ವಿಶ್ವಾಸ ಇದೆ: ದೇವೇಗೌಡ
View this post on Instagram