ಕ್ಯಾಲಿಫೋರ್ನಿಯಾ: ಐಫೋನ್ (iPhone) ತಯಾರಕಾ, ಜಾಗತಿಕ ಐಟಿ ಕಂಪನಿ ಆಪಲ್ (Apple) ಎರಡನೇ ಬಾರಿ 3 ಟ್ರಿಲಿಯನ್ (3 ಲಕ್ಷ ಕೋಟಿ) ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದ ಕಂಪನಿಯಾಗಿ ಹೊರಹೊಮ್ಮಿದೆ.
ಆಪಲ್ ಕಂಪನಿಯ ಒಂದು ಷೇರು ಮೌಲ್ಯ 1.6% ಏರಿಕೆಯಾಗಿ ಕೊನೆಗೆ 192.6 ಡಾಲರ್‌ನಲ್ಲಿ(15,804 ರೂ.) ವ್ಯವಹಾರ ಮುಗಿಸಿತು. ಈ ವರ್ಷ ಕಂಪನಿಯ ಷೇರು ಮೌಲ್ಯ 46% ಏರಿಕೆಯಾಗಿದೆ. ಈ ಹಿಂದೆ ಕಳೆದ ವರ್ಷದ ಜನವರಿಯಲ್ಲಿ 3 ರಂದು 3 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದ ಅಮೆರಿಕದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
Advertisement
Advertisement
ಮೇ ತಿಂಗಳಿನಲ್ಲಿ ಬಿಡುಗಡೆಯಾದ ಎರಡನೇ ತ್ರೈಮಾಸಿಕದಲ್ಲಿ ಆಪಲ್ ಕಂಪನಿ 94.8 ಶತಕೋಟಿ ಡಾಲರ್ ಆದಾಯ ಗಳಿಸಿತ್ತು. ಈ ಆದಾಯದ ಪೈಕಿ ಐಫೋನ್ ಮಾರಾಟದಿಂದಲೇ 54.1% ಆದಾಯ ಬಂದಿತ್ತು. ಅಮೆರಿಕದಲ್ಲಿ ಆರ್ಥಿಕ ಅನಿಶ್ಚಿತತೆ ಇದ್ದರೂ ಆಪಲ್ ಕಂಪನಿ ಹೂಡಿಕೆದಾರರ ನಂಬಿಕೆಯನ್ನು ಉಳಿಸಿಕೊಂಡಿದೆ. ಇದನ್ನೂ ಓದಿ: ಕೇಂದ್ರದ ಆದೇಶವನ್ನು ಪಾಲಿಸಿ – ಟ್ವಿಟ್ಟರ್ ಅರ್ಜಿ ವಜಾ, 50 ಲಕ್ಷ ದಂಡ
Advertisement
Advertisement
2018ರಲ್ಲಿ 1 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದ ಮೊದಲ ಅಮೆರಿಕದ ಕಂಪನಿ ಎಂಬ ಸಾಧನೆ ನಿರ್ಮಿಸಿತ್ತು. 1976ರಲ್ಲಿ ಆಪಲ್ ಕಂಪನಿಯನ್ನು ಸ್ವೀವ್ ಜಾಬ್ಸ್ ಸ್ಥಾಪಿಸಿದ್ದರು. ಸದ್ಯ ಟಿಮ್ ಕುಕ್ ಕಂಪನಿಯ ಸಿಇಒ ಆಗಿ ಕಾರ್ಯವಿರ್ವಹಿಸುತ್ತಿದ್ದಾರೆ.
Web Stories