ತೋಟದಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆ – ಕೊಲೆಯೋ, ಅಸಹಜ ಸಾವೋ?

1 Min Read

ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ (Nelamangala) ತಾಲೂಕಿನ ಗಡಿ ಗ್ರಾಮ ಹಳೇ ನಿಜಗಲ್ ಗ್ರಾಮದಲ್ಲಿ ಮಹಿಳೆಯ ತಲೆಬುರುಡೆ ಹಾಗೂ ಕೈ ಕಾಲಿನ ಕೆಲ ಮೂಳೆಗಳು ಪತ್ತೆಯಾಗಿದೆ.

ತೋಟದ ಮಾಲೀಕ ಕೆಲಸ ಮಾಡುವ ವೇಳೆ ಅವಶೇಷಗಳನ್ನ ನೋಡಿದಾಗ ಆತಂಕಕ್ಕೆ ಕಾರಣವಾಗಿದ್ದು, ನಂತರ ದಾಬಸ್ ಪೇಟೆ ಪೊಲೀಸರಿಗೆ (Dabaspet Police) ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಶ್ವಾನದಳ ಪರಿಶೀಲನೆ ನಡೆಸಿದ್ದು ನಾಪತ್ತೆಯಾಗಿದ್ದ ಮಹಿಳೆ ತುಮಕೂರು ನಿವಾಸಿ ಯಮುನಾ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಯೋಗೇಶ್ ಗೌಡ ಕೊಲೆ ಕೇಸ್ – ಅಪರಾಧಿಗಳಿಗೆ ಶಿಕ್ಷೆ ನಾಳೆ ಪ್ರಕಟ

ಗುರುತು ಪತ್ತೆಯಾಗಿದ್ದು ಹೇಗೆ?
ಅಸ್ಥಿಯ (Skeleton) ಬಳಿ ಮಹಿಳೆಯ ಬ್ಯಾಗ್ ಹಾಗೂ ಐಡಿ ಕಾರ್ಡ್‌ ಪತ್ತೆಯಾಗಿತ್ತು, ಕೂಡಲೇ ಕುಟುಂಬಕ್ಕೆ ಮಾಹಿತಿ ನೀಡಿದ ದಾಬಸ್‌ ಪೇಟೆ ಪೊಲೀಸರು, ಕುಟುಂಬಸ್ಥರನ್ನ ಕರೆಸಿ ಮಹಿಳೆಯ ಗುರುತು ಪತ್ತೆ ಮಾಡಿದರು. ಗೃಹಿಣಿ ಯಮುನಾ ನಾಪತ್ತೆ ಬಗ್ಗೆ ಕಳೆದ ತಿಂಗಳು ತುಮಕೂರು ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಹೃದಯಾಘಾತದಿಂದ ನ್ಯಾಯಾಧೀಶೆ ಸಾವು

ಸದ್ಯ ಅಸ್ಥಿಪಂಜರ ಪತ್ತೆ ಪ್ರಕರಣ ಸಂಬಂಧ ದಾಬಸ್ ಪೇಟೆ ಪೊಲೀಸರು ಕೇಸ್‌ ದಾಖಲಿಸಿಕೊಂಡು, ಯಮುನಾ ಸಾವು ಅಸಹಜ ಸಾವೋ ಅಥವಾ ಕೊಲೆಯೋ ಎಂಬುದರ ತನಿಖೆಗೆ ಇಳಿದಿದ್ದಾರೆ. ಇದನ್ನೂ ಓದಿ: ಅನಧಿಕೃತ ಮದ್ಯ ಮಾರಾಟ ಮಳಿಗೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಿ; ಅಧಿಕಾರಿಗಳಿಗೆ ಶಾಸಕ ಗಣಿಗ ರವಿಕುಮಾರ್ ಸೂಚನೆ

Share This Article