ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬರುತ್ತಿದ್ದ ಸರ್ಕಾರಿ ಬಸ್‌ಗಳ ಪಾರ್ಕಿಂಗ್ ಸಮಸ್ಯೆಗೆ ಕೊನೆಗೂ ಮುಕ್ತಿ

1 Min Read

ಬೆಂಗಳೂರು: ಉತ್ತರ ಕರ್ನಾಟಕದಿಂದ (North Karnataka) ಬೆಂಗಳೂರಿಗೆ ಬರುತ್ತಿದ್ದ ಸರ್ಕಾರಿ ಬಸ್‌ಗಳ (Karnataka Government Bus) ಪಾರ್ಕಿಂಗ್ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ.

ನಗರದ ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್-1ರಲ್ಲಿ ಪುನರ್ ಅಭಿವೃದ್ಧಿಪಡಿಸಿದ ಪಾರ್ಕಿಂಗ್ ಪ್ರದೇಶವನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಉದ್ಘಾಟಿಸಿದರು.

ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕದಿಂದ ಬರುವ ಬಸ್ಸುಗಳ ನಿಲುಗಡೆ ಸ್ಥಳ ಈ ಹಿಂದೆ ಮಳೆ ನೀರು ಮತ್ತು ಗುಂಡಿಗಳು ಉಂಟಾಗಿ ಸಮಸ್ಯೆ ಉಂಟಾಗಿತ್ತು. ಸುಮಾರು 3.29 ಕೋಟಿ ರೂ. ವೆಚ್ಚದಲ್ಲಿ ಸುಮಾರು 2.5 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ಸ್ಥಳ ಅಭಿವೃದ್ಧಿ ಮಾಡಲಾಗಿದೆ.  ಇದನ್ನೂ ಓದಿ: ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?

 

ಹೊಸ ಪಾರ್ಕಿಂಗ್‌ನಲ್ಲಿ ಸುಮಾರು 200 ಬಸ್‌ಗಳು ನಿಲುಗಡೆಯಾಗಬಹುದಾಗಿವೆ.11 ವಿದ್ಯುತ್ ದೀಪದ ಕಂಬ ಅಳವಡಿಸಿ ಬೆಳಕಿನ ವ್ಯವಸ್ಥೆ,ವಿದ್ಯುತ್ ಪ್ಯಾನಲ್ ಕೊಠಡಿ ನಿರ್ಮಾಣ ಮಾಡಲಾಗಿದೆ.

ಕೆಕೆಆರ್‌ಟಿಸಿ ನೌಕರರಿಗೆ ವೇತನವಾಗದ ವಿಚಾರವಾಗಿ ಪ್ರತ್ರಿಕ್ರಿಯಿಸಿದ ರಾಮಲಿಂಗಾ ರೆಡ್ಡಿ, ಗುತ್ತಿಗೆ ಆಧಾರದ ಮೇಲೆ ಕೆಲ್ಸ ಮಾಡುತ್ತಿದ್ದವರಿಗೆ ವೇತನ ಆಗಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದೇ ಒಂದು ನೇಮಕಾತಿ ಮಾಡಲಿಲ್ಲ.ನಮ್ಮ ಸರ್ಕಾರ ಬಂದ ಮೇಲೆ ನೇಮಕಾತಿ ಮಾಡಿಕೊಂಡಿದ್ದೇವೆ ಎಂದರು.

ಇದೂವರೆಗೂ 9 ಸಾವಿರ ನೇಮಕಾತಿ ನನ್ನ ಅವಧಿಯಲ್ಲಿ ನಡೆದಿದೆ. ಅನುಕಂಪದ ಆಧಾರದ ಮೇಲೆ 1400 ಸಿಬ್ಬಂದಿ ನೇಮಕ ಮಾಡಿಕೊಂಡಿದ್ದೇವೆ. ಕೆಕೆಆರ್‌ಟಿಸಿ ಎಂಡಿ ಮೂರು ತಿಂಗಳು ರಜೆಯಲ್ಲಿದ್ದ ಕಾರಣ ಸಮಸ್ಯೆಯಾಗಿತ್ತು. ಕೂಡಲೇ ವೇತನ ನೀಡುವ ಕೆಲಸ ಇಲಾಖೆಯಿಂದ ಆಗಲಿದೆ ಎಂದರು.

Share This Article