ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?

1 Min Read

ಸ್ಯಾಂಡಲ್‌ವುಡ್‌ನ ಇಬ್ಬರು ಸ್ಟಾರ್‌ ನಟರಾದ ದರ್ಶನ್‌ (Darshan) ಮತ್ತು ಧ್ರುವ ಸರ್ಜಾ (Dhruva Sarja) ನಡುವೆ ಉಂಟಾಗಿರುವ ಬಿರುಕಿನ ಬಗ್ಗೆ ದರ್ಶನ್‌ ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ (Mallikarjun) ಮಾತನಾಡಿದ್ದಾರೆ.

‘ಪ್ರೇಮ ಬರಹ’ ಸಿನಿಮಾದ ಎ ಟು ಝಡ್ ಎಲ್ಲಾ ಖರ್ಚು ನಾನೇ ನೋಡಿದೆ. 1.20 ಲಕ್ಷ ಕಲೆಕ್ಷನ್‌ ಆಯ್ತು. 50 ಲಕ್ಷ ಖರ್ಚು ಹಿಡಿದುಕೊಂಡು ಕೊಡ್ಬೇಕಿತ್ತು. ಐದಾರು ವಾರದ ಅಕೌಂಟ್ ಕೊಟ್ಟಿದ್ದೆ. ಎಲ್ಲಾ ಖರ್ಚು ತೆಗೆದು 48-49 ಲಕ್ಷ ಕೊಡ್ಬೇಕಿತ್ತು. ದೀಪಕ್ ಅಕೌಂಟ್ ನೋಡ್ಕೊಳ್ತಿದ್ರು. ನಾನು ಆ ಟೈಂನಲ್ಲಿ ಅಕೌಂಟ್‌ನ ಕ್ರಾಸ್ ಚೆಕ್ ಮಾಡ್ಲಿಲ್ಲ. ಅವ್ರಿಗೆ ಅಕೌಂಟ್ ಡಿಟೇಲ್ಸ್ ಕೊಟ್ಟೆ. ಅರ್ಜುನ್ ಸರ್ಜಾ ಸರ್ ಒಂದಿನ ಕರೆದ್ರು. ಎರಡು ದಿನಗಳ ಬಳಿಕ ಹೋದಾಗ ಅಕೌಂಟ್‌ನಲ್ಲಿ 60 ಸಾವಿರದಿಂದ 1 ಲಕ್ಷ ಹೆಚ್ಚುಕಮ್ಮಿ ಲೆಕ್ಕ ಆಗಿತ್ತು.‌ ಇದನ್ನೂ ಓದಿ: ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು

ದರ್ಶನ್ ಸರ್ ಗಮನಕ್ಕೆ ಇದನ್ನ ತರ್ತೀನಿ ಅಂತಾ ಹೇಳಿದ್ರು. ಅವತ್ತು ಎನ್.ಕುಮಾರ್ ಅವರ ಹತ್ತಿರ ಅಮೌಂಟ್ ಇತ್ತು. ಈಗಲೂ ಅವರ ಕಡೆ ಇದೆ. ಅರ್ಜುನ್ ಸರ್ಜಾ ಸರ್‌ಗೆ ಕೊಡಬೇಕಾದ ಹಣ ಇನ್ನೂ ನನ್ನ ಕೈಗೆ ಬಂದಿಲ್ಲ ಎಂದು ಮಲ್ಲಿಕಾರ್ಜುನ್‌ ತಿಳಿಸಿದ್ದಾರೆ.

‘ಪ್ರೇಮ ಬರಹ’ದಿಂದ ನಾನು ಮೋಸ ಮಾಡಿಲ್ಲ. ದರ್ಶನ್ ಸರ್‌ ಮತ್ತು ಧ್ರುವ‌ ಸರ್ಜಾ ಮನಸ್ತಾಪಕ್ಕೆ ನಾನು ಕಾರಣ ಅಲ್ಲ ಎಂದು ಇದೇ ವೇಳೆ ಮಲ್ಲಿಕಾರ್ಜುನ್‌ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ

Share This Article