ತುಮಕೂರು: ಹೃದಯಾಘಾತದಿಂದ (Heart Attack) ನ್ಯಾಯಾಧೀಶೆ (Judge) ಸಾವನ್ನಪ್ಪಿದ ಘಟನೆ ತುಮಕೂರು (Tumakuru) ಜಿಲ್ಲೆಯ ಮಧುಗಿರಿಯಲ್ಲಿ (Madhugiri) ನಡೆದಿದೆ.
ಕಾಂತಮ್ಮ (43), ಸಾವನ್ನಪ್ಪಿದ ನ್ಯಾಯಾಧೀಶೆ. ಮಧುಗಿರಿ ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಕಾಂತಮ್ಮ ಸಾವನಪ್ಪಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಅಂಚೆದೊಡ್ಡಿ ಗ್ರಾಮದ ಕಾಂತಮ್ಮ ಕಳೆದ ಒಂದು ವರ್ಷದಿಂದ ಮಧುಗಿರಿಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಮಹಿಳಾ ಮೀಸಲಾತಿ ಬಿಲ್ ವಿರೋಧಿಸುವವರನ್ನ ದೇಶದ ಮಹಿಳೆಯರು ಕ್ಷಮಿಸಲ್ಲ – ನಮಗೆ ಕ್ರೆಡಿಟ್ ಬೇಡ ಎಂದ ಮೋದಿ
ಮಧುಗಿರಿ ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ವಾಸವಿದ್ದ ನ್ಯಾ.ಕಾಂತಮ್ಮ ಇಂದು ವಸತಿ ಗೃಹದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರು IISc ದಾಳಿಯ ಸಂಚುಕೋರನಿಗೆ ಲಾಹೋರ್‌ನಲ್ಲಿ ಗುಂಡೇಟು – ಗಂಭೀರ ಗಾಯ, ಐಸಿಯುನಲ್ಲಿ ಚಿಕಿತ್ಸೆ

