ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನ ದೇಶದ ಮಹಿಳೆಯರು ಕ್ಷಮಿಸಲ್ಲ – ನಮಗೆ ಕ್ರೆಡಿಟ್‌ ಬೇಡ ಎಂದ ಮೋದಿ

3 Min Read

– ಯಾವ ರಾಜ್ಯಕ್ಕೂ ಅನ್ಯಾಯ ಆಗಲ್ಲ, ದೇಶವನ್ನ ತುಂಡಾಗಿ ಯೋಚಿಸಬಾರದು
– ವಿಪಕ್ಷಗಳಿಗೂ ಲಾಭ ಇದೆ, ಪ್ರತಿಯೊಬ್ಬರಿಗೂ ಕ್ರೆಡಿಟ್‌ ನೀಡಲು ಸಿದ್ಧ

ನವದೆಹಲಿ: ಮಹಿಳಾ ಮೀಸಲಾತಿ ಬಿಲ್‌ (Womens Reservation Bill) ವಿರೋಧಿಸುವವರನ್ನ ದೇಶದ ಮಹಿಳೆಯರು ಕ್ಷಮಿಸುವುದಿಲ್ಲ. ಈ ನಿರ್ಧಾರದ ಹಿಂದೆ ಮೋದಿಗೆ ರಾಜಕೀಯ ಸ್ವಾರ್ಥ ಇದೆ ಎಂದು ಇಲ್ಲಿ ಕೆಲವರಿಗೆ ಅನ್ನಿಸಿದೆ. ಇದನ್ನ ವಿರೋಧ ಮಾಡಿದರೆ ನಮಗೆ ರಾಜಕೀಯ ಲಾಭ ಅಂದುಕೊಂಡಿದ್ದಾರೆ. ನಮ್ಮಗೆ ಈ ವಿಚಾರದಲ್ಲಿ ಕ್ರೆಡಿಟ್‌ ಬೇಡ, ನಾಳೆ ಜಾಹೀರಾತು ಮೂಲಕ ಎಲ್ಲರಿಗೂ ಕ್ರೆಡಿಟ್ ನೀಡಲು ನಾವು ಸಿದ್ಧರಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra ModiP ಹೇಳಿದರು.

ಇದು ನಡೆದ ಸಂಸತ್‌ (Parliament) ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದನ್ನ ವಿರೋಧಿಸುವವರು ಸುಧೀರ್ಘ ಕಾಲದವರೆಗೂ ಬೆಲೆ ತೆರಬೇಕಾಗುತ್ತದೆ ಎಂದು ಮಾತಿನಲ್ಲೇ ಕೌಂಟರ್‌ ಕೊಟ್ಟರು.

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ನಿರ್ಣಾಯಕ ದಿನ ಇದು. ಮಹಿಳೆಯರಿಗೆ 33% ಮೀಸಲಾತಿ ಅಗತ್ಯವಿದೆ, ಪ್ರಜಾಪ್ರಭುತ್ವದಲ್ಲಿ ಕಾಲಮಾನಕ್ಕೆ ತಕ್ಕಂತೆ ಬದಲಾವಣೆ ಅಗತ್ಯವಿದೆ. ನಮ್ಮ ವ್ಯವಸ್ಥೆಯಲ್ಲಿ ಹೊಸ ಆಯಾಮ ತರುವ ಸುಸಂದರ್ಭ ಈಗ ಬಂದಿದೆ. ನಾವೇಲ್ಲ ಅದೃಷ್ಟವಂತರು, ಇಂತಹ ಮಹತ್ವದ ನೀತಿ ನಿಯಮಗಳ ಜಾರಿಯಲ್ಲಿ ಭಾಗಿಯಾಗಿದ್ದೇವೆ. ಎಲ್ಲ ಸಂಸದರು ಒಟ್ಟಾಗಿ ದೇಶಕ್ಕೆ ಹೊಸ ದಿಕ್ಕು ತೋರುತ್ತಿದ್ದೇವೆ. ಈ ನಿರ್ಧಾರ ದೇಶದ ರಾಜಕೀಯ ಸ್ವರೂಪವನ್ನು ನಿರ್ಧರಿಸಲಿದೆ. ಇದು ದೇಶದ ದಿಕ್ಕು ಬದಲಿಸುವ ನಿರ್ಣಯವುವೂ ಹೌದು. ದೇಶ ಹೊಸ ಆತ್ಮ ವಿಶ್ವಾಸದೊಂದಿಗೆ ಮುನ್ನುಗ್ಗುತ್ತಿದೆ, ʻವಿಕಸಿತ ಭಾರತ ಅಂದರೆ ಮೂಲಸೌಕರ್ಯಗಳ ಅಭಿವೃದ್ಧಿ ಅಷ್ಟೇ ಅಲ್ಲ, ವಿಕಸಿತ ಭಾರತ ಅಂದರೆ ನೀತಿ ನಿಯಮಗಳನ್ನ ರೂಪಿಸುವಲ್ಲಿ ಮಹಿಳೆಯರ ಪಾತ್ರವೂ ಅಗತ್ಯವಾಗಿದೆ. ನಾವು ಈಗಾಗಲೇ ವಿಳಂಬ ಮಾಡಿದ್ದೇವೆ, ಕಾರಣ ಯಾರೇ ಆಗಿರಬಹುದು, ಈಗ ನಾವು ಒಟ್ಟಾಗಿ ಇದನ್ನು ಮಾಡಬೇಕು ಅದಕ್ಕಾಗಿ ಎಲ್ಲ ನಾವು ಎಲ್ಲ ಪಕ್ಷಗಳನ್ನು ಸಂಪರ್ಕಿಸಿದ್ದೇವೆ ಎಂದು ತಿಳಿಸಿದರು.

ಈ ಬಿಲ್‌ ವಿರೋಧಿಸುವವರನ್ನು ದೇಶದ ಮಹಿಳೆಯರು ಕ್ಷಮಿಸುವುದಿಲ್ಲ. ಇದು ರಾಜಕೀಯ ಹಿತಾಸಕ್ತಿ ವಿಚಾರ ಅಲ್ಲ. 2023 ರಲ್ಲಿ ಯಾರು ಇದನ್ನು ವಿರೋಧಿಸಿದ್ದರೋ ಅವರು ಇಂದು ಇಲ್ಲಿಲ್ಲ. ವಿಪಕ್ಷಗಳಿಗೂ ಇದರಲ್ಲಿ ಲಾಭ ಇದೆ, ಇದನ್ನ ರಾಜಕೀಯಗೊಳಿಸುವುದು ಬೇಡ ಎಂದು ತಿಳಿವಳಿಕೆ ನೀಡಿದರು.

ಪಂಚಾಯತ್‌ಗಳಲ್ಲಿ ಮೀಸಲಾತಿ ನೀಡಲು ಯಾವುದೇ ಆಕ್ಷೇಪ ಇಲ್ಲ. ಏಕೆಂದ್ರೆ ನಮ್ಮ ಸ್ಥಾನಕ್ಕೆ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಿದ್ದರು. ಆದರೆ ಲೋಕಸಭೆ ವಿಧಾನಸಭೆಯಲ್ಲಿ ಮೀಸಲಾತಿಗೆ ವಿರೋಧಿಸುತ್ತಿದ್ದರು, ಇಂದು ಹಾಗೇ ಯೋಚನೆ ಮಾಡುವ ತಪ್ಪು ಮಾಡಬೇಡಿ. ಇಂದು ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ. ಆದ್ರೂ ಏಕೆ ಅವರಿಗೆ 33% ಮೀಸಲಾತಿ ನೀಡುವುದನ್ನ ತಡೆಯಲಾಗುತ್ತಿದೆ? ಇದನ್ನು ರಾಜಕೀಯವಾಗಿ ನೋಡಬೇಡಿ, ರಾಜಕೀಯ ಹಿತಕ್ಕಾಗಿ ಇದನ್ನ ಮಾಡಲಾಗುತ್ತಿದೆ. ವಿಕಸಿತ್ ಭಾರತಕ್ಕೆ ನಾರೀ ಶಕ್ತಿ ಅಗತ್ಯವಿದೆ ಎಂದು ಕರೆ ನೀಡಿದರು.

ಪ್ರಾಯಶ್ಚಿತ್ತದೊಂದಿಗೆ ಹಕ್ಕು ನೀಡುತ್ತಿದ್ದೇವೆ
33% ಮೀಸಲಾತಿ ಇದು ಪ್ರತಿಯೊಬ್ಬ ಮಹಿಳೆಯರ ಹಕ್ಕು. ಇದನ್ನು ಬಹಳ ವರ್ಷಗಳಿಂದ ತಡೆದಿದ್ದೇವೆ. ಪ್ರಾಯಶ್ಚಿತ್ತದೊಂದಿಗೆ ನಾವು ಅವರಿಗೆ ಅವರ ಹಕ್ಕು ನೀಡುತ್ತಿದ್ದೇವೆ. ಈಗಲೂ ತಾಂತ್ರಿಕ ಅಂಶಗಳನ್ನು ಇಟ್ಟು ತಡೆಯುವ ಯತ್ನ ನಡೆದಿದೆ. 2023 ರಲ್ಲಿ ಸರ್ವಾನುಮತದಿಂದ ಮಹಿಳಾ ಮೀಸಲಾತಿ ಮಸೂದೆಯನ್ನ ಒಪ್ಪಿಕೊಳ್ಳಲಾಗಿತ್ತು. ಅಂದು ಅದಕ್ಕೆ ರಾಜಕೀಯ ಬಣ್ಣ ಬಳಿಯಲಿಲ್ಲ. ಈಗ ಜನಗಣತಿ ಬಗ್ಗೆ ಮಾತನಾಡುತ್ತಿದ್ದಾರೆ. ಜನಗಣತಿಗೆ ನಾವೇಲ್ಲ ಏನು ಪ್ರಯತ್ನ ಮಾಡಿದ್ದೇವೆ ಅದನ್ನು ಹೇಳಲಿದ್ದೇವೆ. 2023 ರಲ್ಲಿ 33% ಮೀಸಲಾತಿ ಕೂಡಲೇ ಜಾರಿಯಾಗಬೇಕು ಎನ್ನುವ ಒತ್ತಾಯ ಇತ್ತು. 2024 ರಲ್ಲಿ ಕಡಿಮೆ ಅವಧಿಯಲ್ಲಿ ಜಾರಿ ಸಾಧ್ಯವಿರಲಿಲ್ಲ. ಹೀಗಾಗಿ ಈಗ ಅದನ್ನು ಜಾರಿ ಮಾಡಲಾಗುತ್ತಿದೆ ಎಂದು ವಿವರಿಸಿದರು.

ದೇಶವನ್ನು ತುಂಡು ತುಂಡಾಗಿ ಯೋಚಿಸಬಾರದು
ಮುಂದುವರಿದು… ನಾವು ಇಲ್ಲಿ ಕೂತು ದೇಶವನ್ನು ತುಂಡು ತುಂಡಾಗಿ ಯೋಚಿಸಬಾರದು. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಒಟ್ಟಾಗಿ ಯೋಚಿಸಬೇಕು, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಅಥಾವ ಸಣ್ಣ ದೊಡ್ಡ ರಾಜ್ಯವಾಗಲಿ, ಯಾರ ಜೊತೆಗೂ ಬೇಧಭಾವ ಮಾಡುವುದಿಲ್ಲ. ಇದರಿಂದ ಯಾರಿಗೂ ಅನ್ಯಾಯವಾಗುವುದಿಲ್ಲ. ಸ್ಥಾನಗಳ ಸಂಖ್ಯೆ ನ್ಯಾಯಯುತವಾಗಿ ಹೆಚ್ಚಳವಾಗಲಿದೆ ಎಂದು ತಿಳಿಸಿದರು.

Share This Article