ಐಪಿಎಲ್ 2026ರ ಆವೃತ್ತಿ ಆರಂಭಕ್ಕೂ ಮುನ್ನ ಕಮ್ಮಿನ್ಸ್ ಭಾರತಕ್ಕೆ ಆಗಮಿಸಿದ್ದರು. ಆದರೆ ಒಂದೇ ಒಂದು ಪಂದ್ಯದಲ್ಲಿಯೂ ಆಡಿರಲಿಲ್ಲ. ಏ.2ರಂದು ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಎಸ್‌ಆರ್‌ಹೆಚ್ 65 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು. ಈ ಪಂದ್ಯದ ಬಳಿಕ ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾಕ್ಕೆ ವಾಪಸ್ಸಾಗಿದ್ದರು. ಅಲ್ಲಿ ಕೆಲವು ಸ್ಕ್ಯಾನಿಂಗ್‌ಗೆ ಒಳಪಟ್ಟಿದ್ದಾರೆ. ಸದ್ಯ ಗಾಯ ವಾಸಿಯಾಗಿದ್ದು, ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದನ್ನೂ ಓದಿ:ಪಂದ್ಯದ ವೇಳೆ `ದೋಸೆ ಇಡ್ಲಿ’ ಹಾಡು ಪ್ರಸಾರ – ಬಿಸಿಸಿಐಗೆ RCB ವಿರುದ್ಧ CSK ದೂರು
ಇನ್ನೂ ಒಂದೆರಡು ದಿನದಲ್ಲಿ ಪ್ಯಾಟ್ ಕಮಿನ್ಸ್ ಭಾರತಕ್ಕೆ ಮರಳಲಿದ್ದು, ಏ.25ರಂದು ಜೈಪುರದಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್ (RR) ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ಈ ಬಗ್ಗೆ ಸ್ವತಃ ಪ್ಯಾಟ್ ಕಮಿನ್ಸ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಕಮಿನ್ಸ್ ಅನುಪಸ್ಥಿತಿಯಲ್ಲಿ, ಇಶಾನ್ ಕಿಶನ್ (Ishan Kishan) ಅವರು ಹೈದರಾಬಾದ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ, ಈವರೆಗೆ ತಂಡವು ಐದು ಪಂದ್ಯಗಳ ಪೈಕಿ ಎರಡರಲ್ಲಿ ಗೆಲವು ಸಾಧಿಸಿದೆ. ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿದೆ.
ಏ.18ರಂದು ಐದು ಬಾರಿ ಚಾಂಪಿಯನ್ ವಿಜೇತ ತಂಡ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಎಸ್‌ಆರ್‌ಹೆಚ್ ತಮ್ಮ ತವರು ಮೈದಾನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಎದುರಿಸಲಿದೆ.ಇದನ್ನೂ ಓದಿ: IPLನಲ್ಲಿ ಕೇವಲ 1 ರನ್‌ನಿಂದ 66ನೇ ಅರ್ಧಶತಕ ಮಿಸ್ ಮಾಡಿಕೊಂಡ ಕೊಹ್ಲಿ – ಪತ್ನಿ ಅನುಷ್ಕಾ ರಿಯಾಕ್ಷನ್ ಹೇಗಿತ್ತು?

