– 13 ಡಾಟ್ ಬಾಲ್ ಎಸೆದಿದ್ದ ಇಬ್ಬರು ಬೌಲರ್‌ಗಳು
ಬೆಂಗಳೂರು: ಲಕ್ನೋ (LSG) ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ (RCB) 5 ವಿಕೆಟ್‌ಗಳಿಂದ ಜಯಗಳಿಸಿದರೂ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಒಂದು ವಿಕೆಟ್ ಪಡೆದ ಜೋಶ್ ಹ್ಯಾಜಲ್‌ವುಡ್‌ಗೆ(Josh Hazlewood) ನೀಡಿದ್ದು ಯಾಕೆ ಎನ್ನುವ ವಿಚಾರದ ಬಗ್ಗೆ ಈಗ ಕ್ರಿಕೆಟ್ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ.
ಈ ಪಂದ್ಯದಲ್ಲಿ ಜೋಶ್ ಹ್ಯಾಜಲ್‌ವುಡ್ 4 ಓವರ್ ಎಸೆದು 5 ಎಕಾನಮಿಯಲ್ಲಿ 20 ರನ್ ನೀಡಿ 1 ವಿಕೆಟ್ ಪಡೆದರೆ ರಸಿಕ್ ಸಲಾಂ ದಾರ್ (Rasikh Dhar) 4 ಓವರ್ ಎಸೆದು 6 ಎಕಾನಮಿಯಲ್ಲಿ 24 ರನ್ ನೀಡಿ 4 ವಿಕೆಟ್ ಕಿತ್ತಿದ್ದರು.
ಬಹಳ ಮುಖ್ಯವಾಗಿ ಇಬ್ಬರೂ 13 ಡಾಟ್ ಬಾಲ್ ಎಸೆದಿದ್ದರು. ಹೀಗಿದ್ದರೂ 4 ವಿಕೆಟ್ ಪಡೆದ ರಸಿಕ್ ದಾರ್ ಅವರನ್ನು ಬಿಟ್ಟು ಹ್ಯಾಜಲ್‌ವುಡ್ ಅವರಿಗೆ ಪಂದ್ಯಶ್ರೇಷ್ಠ(Player Of The Match) ಗೌರವ ನೀಡಿದ್ದು ಯಾಕೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಪಂದ್ಯದ ವೇಳೆ `ದೋಸೆ ಇಡ್ಲಿ’ ಹಾಡು ಪ್ರಸಾರ – ಬಿಸಿಸಿಐಗೆ RCB ವಿರುದ್ಧ CSK ದೂರು
ಪಂದ್ಯಶ್ರೇಷ್ಠ ಗೌರವ ಯಾಕೆ?
ಆರ್‌ಸಿಬಿ ಪರ ಇನ್ನಿಂಗ್ಸ್‌ನ ಮೊದಲ ಓವರನ್ನು ಭುವನೇಶ್ವರ್ ಕುಮಾರ್ ಹಾಕಿದರೆ ಎರಡನೇ ಓವರನ್ನು ಹ್ಯಾಜಲ್‌ವುಡ್ ಎಸೆದಿದ್ದರು. ನಾಲ್ಕನೇಯ ಓವರ್ ಅನ್ನು ರಸಿಕ್ ದಾರ್ ಹಾಕಿದ್ದರು.
ಹ್ಯಾಜಲ್‌ವುಡ್ ತಮ್ಮ ಮೊದಲ ಓವರಿನಲ್ಲಿ 5 ರನ್, ಎರಡನೇ ಓವರ್‌ನಲ್ಲಿ 5 ಡಾಟ್ ಬಾಲ್ ಹಾಕಿ 1 ರನ್ ನೀಡಿದ್ದರು. ತಮ್ಮ ಮೂರನೇ ಓವರ್‌ನಲ್ಲಿ ಪೂರನ್ ವಿಕೆಟ್ ಪಡೆಯುವುದರ ಜೊತೆಗೆ 3 ಡಾಟ್ ಬಾಲ್ ಎಸೆದು 5 ರನ್ ನೀಡಿದ್ದರು. ಅಂದರೆ ಆರ್‌ಸಿಬಿ ಎಸೆದ ಮೊದಲ 7 ಓವರ್‌ಗಳಲ್ಲಿ ಹ್ಯಾಜಲ್‌ವುಡ್ ಅವರೇ 3 ಓವರ್ ಎಸೆದು 11 ರನ್ ಮಾತ್ರ ನೀಡಿದ್ದರು.
ಟಿ20ಯಲ್ಲಿ ಪವರ್‌ಪ್ಲೇ ಬಹಳ ಮುಖ್ಯವಾಗಿರುತ್ತದೆ. ಮೊದಲ 6 ಓವರ್‌ಗಳಲ್ಲಿಇಬ್ಬರು ಫೀಲ್ಡರ್‌ಗಳು ಮಾತ್ರ 30 ಯಾರ್ಡ್ ಸರ್ಕಲ್ ಹೊರಗಡೆ ಇರುತ್ತಾರೆ. ಈ ಸಂರ್ಭದಲ್ಲಿ ಬ್ಯಾಟರ್‌ಗಳು ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿ ಹೆಚ್ಚು ರನ್ ಹೊಡೆಯುತ್ತಾರೆ. ಪವರ್ ಪ್ಲೇನಲ್ಲಿ ಲಕ್ನೋ ವಿರುದ್ಧ ಹ್ಯಾಜಲ್‌ವುಡ್ ಉತ್ತಮ ಬೌಲಿಂಗ್ ಎಸೆದು ರನ್ ನಿಯಂತ್ರಣ ಮಾಡಿದ್ದಕ್ಕೆ ಪಂದ್ಯಶ್ರೇಷ್ಠ ಗೌರವ ನೀಡಿರಬಹುದು ಎಂದು ವಿಶ್ಲೇಷಿಸಲಾಗುತ್ತದೆ. ಇದನ್ನೂ ಓದಿ: SRHಗೆ ಗುಡ್‌ನ್ಯೂಸ್ – ಪ್ಯಾಟ್ ಕಮಿನ್ಸ್ ಫಿಟ್ನೆಸ್ ಟೆಸ್ಟಲ್ಲಿ ಪಾಸ್, ಆಡಲು ಅನುಮತಿ
ರಸಿಕ್ ದಾರ್ ಇನ್ನಿಂಗ್ಸ್‌ನ ಮೂರನೇ ಓವರಿನಲ್ಲಿ ತಮ್ಮ ಮೊದಲ ಓವರ್ ಎಸೆದರು. ಈ ಓವರ್‌ನಲ್ಲಿ 10 ರನ್ ಪಡೆದು ಒಂದು ವಿಕೆಟ್ ಪಡೆದರು. ತಮ್ಮ ಎರಡನೇ ಓವರ್‌ನಲ್ಲಿ 2 ರನ್ ನೀಡಿದರೆ ಮತ್ತೆ ಅವರ ಕೈಗೆ ಬಾಲ್ ಸಿಕ್ಕಿದ್ದು ಇನ್ನಿಂಗ್ಸ್‌ನ 16ನೇ ಓವರ್‌ನಲ್ಲಿ. ಈ ಓವರ್‌ನಲ್ಲಿ 6 ರನ್ ನೀಡಿ 1 ವಿಕೆಟ್ ಕಿತ್ತರು. 20ನೇ ಓವರ್‌ನಲ್ಲಿ ತಮ್ಮ ನಾಲ್ಕನೇ ಓವರ್ ಎಸೆದ ದಾರ್ 7 ರನ್ ನೀಡಿ 2 ವಿಕೆಟ್ ಪಡೆದರು.
ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ತಮ್ಮ ಕಡೆಯ ಓವರ್ ಮಾಡಿದ ಹ್ಯಾಜಲ್‌ವುಡ್ ಯಾವುದೇ ವಿಕೆಟ್ ಪಡೆಯದೇ 11 ರನ್ ನೀಡಿದ್ದರು.



