ಪಬ್ಲಿಕ್ ಟಿವಿ ವಿದ್ಯಾಪೀಠಕ್ಕೆ ಇಂದು ಕೊನೆ ದಿನ – ಬನ್ನಿ, ಭಾಗವಹಿಸಿ, ಮಾಹಿತಿ ಪಡೆಯಿರಿ

1 Min Read

– ಪ್ರತಿ ಗಂಟೆಗೊಮ್ಮೆ ಬೈಸಿಕಲ್, ಲ್ಯಾಪ್‌ಟಾಪ್ ಗೆಲ್ಲುವ ಅವಕಾಶ

- Advertisement -

ಬೆಂಗಳೂರು: ಪಬ್ಲಿಕ್ ಟಿವಿ (PUBLiC TV) ಪ್ರಸ್ತುತ 9ನೇ ಆವೃತ್ತಿ ವಿದ್ಯಾಪೀಠಕ್ಕೆ (Vidhyapeeta) ಇಂದು ಕೊನೆ ದಿನ. ಅರಮನೆ ಮೈದಾನ ಗಾಯತ್ರಿ ವಿಹಾರ್‌ನಲ್ಲಿ ಎಕ್ಸ್‌ಪೋ (Education Expo) ನಡೆಯುತ್ತಿದೆ. ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಮುಗಿದ ಬಳಿಕ ಮುಂದೇನು ಎನ್ನುವ ನೂರಾರು ಪ್ರಶ್ನೆಗಳಿಗೆ ಹಾಗೂ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನೆರವಾಗಲು ಈ ಶೈಕ್ಷಣಿಕ ಮೇಳ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿ, ನಿಮ್ಮ ಆಯ್ಕೆ ಕಾಲೇಜು, ಕೋರ್ಸ್‌ಗಳ ಬಗ್ಗೆ ಮಾಹಿತಿ ಪಡೆಯಿರಿ.

- Advertisement -

- Advertisement -

ಮೊದಲ ದಿನವಾದ ಶನಿವಾರ ಕಾರ್ಯಕ್ರಮಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಇಂದೂ ಕೂಡಾ ಎಕ್ಸ್‌ಪೋ ನಡೆಯಲಿದೆ. 125ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳು ಒಂದೇ ಸೂರಿನಡಿ ಲಭ್ಯವಾಗಲಿವೆ. ಪ್ರವೇಶ ಉಚಿತ ಇದ್ದು, ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೂ ಎಕ್ಸ್‌ಪೋ ನಡೆಯಲಿದೆ.

- Advertisement -

ಇಂದಿನ ಎಕ್ಸ್‌ಪೋದಲ್ಲಿ ಹ್ಯಾಂಡ್‌ರೈಟಿಂಗ್ ಎಕ್ಸ್‌ಪರ್ಟ್ ಆಗಿರುವ ರಫೀಉಲ್ಲಾ ಬೇಗ್‌ರಿಂದ ಸ್ಪೆಷಲ್ ಸೆಮಿನಾರ್ ಇರಲಿದೆ. ಇನ್ನು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಾದ ಡಾ. ಸುಜಾತ ರಾಥೋಡ್‌ರಿಂದ ನೀಟ್ ಪರೀಕ್ಷೆ ಮತ್ತು ವೈದ್ಯಕೀಯ ಸೀಟು ಹಂಚಿಕೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವೂ ಇರಲಿದೆ. ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್‌ರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಪ್ರತಿ ಗಂಟೆಗೊಮ್ಮೆ ಲಕ್ಕಿ ಡಿಪ್ ಮೂಲಕ ಬೈಸಿಕಲ್, ಲ್ಯಾಪ್ ಟ್ಯಾಪ್ ಸೇರಿದಂತೆ ಹಲವು ಬಂಪರ್ ಗಿಫ್ಟ್ ಗೆಲ್ಲುವ ಅವಕಾಶ ಸಿಗಲಿದೆ. ವಿವಿಧ ಗೇಮ್ಸ್‌ಗಳು ಎಕ್ಸ್‌ಪೋದಲ್ಲಿ ಇರಲಿದೆ. ಬನ್ನಿ, ಭಾಗವಹಿಸಿ ಬಹುಮಾನ ಗೆಲ್ಲಿ.

Share This Article