ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಮೇಲೆ ಮತ್ತೆ ಹತ್ಯೆಗೆ ಯತ್ನ ನಡೆದಿದೆ. ಹಿಲ್ಟನ್ ಹೋಟೆಲ್‌ನ (Hilton Hotel) ಘಟನೆ ಸೇರಿ ಒಟ್ಟು 4 ಬಾರಿ ಅಪರಿಚಿತರು ಹತ್ಯೆಗೆ ಯತ್ನ ನಡೆಸಿದ್ದರು.

ವಾಷಿಂಗ್ಟನ್ ಡಿ.ಸಿಯ ಪ್ರತಿಷ್ಠಿತ ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಧ್ಯಕ್ಷ ಟ್ರಂಪ್ (Donald Trump) ಅವರು ಭಾಷಣ ಮಾಡಲು ವೇದಿಕೆಗೆ ಸಿದ್ಧರಾಗುತ್ತಿದ್ದಂತೆಯೇ, ಹೋಟೆಲ್‌ನ ಹೊರಗೆ ಸತತವಾಗಿ 5 ರಿಂದ 8 ಬಾರಿ ಗುಂಡಿನ ಸದ್ದು ಕೇಳಿಬಂದಿದೆ. ಇದರಿಂದ ಎಚ್ಚೆತ್ತ ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ಕ್ಷಣಾರ್ಧದಲ್ಲಿ ಅಧ್ಯಕ್ಷರು ಮತ್ತು ಗಣ್ಯರನ್ನು ಸುತ್ತುವರಿದು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.

ಗುಂಡಿನ ದಾಳಿ ನಡೆದ ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಪಡೆಗಳು ಒಬ್ಬ ಶಂಕಿತ ವ್ಯಕ್ತಿಯನ್ನು ಸ್ಥಳದಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಶ್ವೇತಭವನದ ಸುತ್ತಮುತ್ತಲಿನ ಭದ್ರತೆಯನ್ನು ಹಿಂದೆಂದಿಗಿಂತಲೂ ಹೆಚ್ಚಿಸಲಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: White House Dinner Shooting| ಸೀಕ್ರೆಟ್ ಸರ್ವಿಸ್ ಅದ್ಭುತವಾಗಿ ಕೆಲಸ ಮಾಡಿದೆ, ದಾಳಿಕೋರನನ್ನು ಬಂಧಿಸಲಾಗಿದೆ: ಟ್ರಂಪ್

ಟ್ರಂಪ್ ಮೇಲಿನ ಆ 4 ದಾಳಿಗಳು
1. ಶ್ವೇತಭವನದ ವರದಿಗಾರರ ಔತಣಕೂಟ (ಏಪ್ರಿಲ್ 25/26, 2026)
ವಾಷಿಂಗ್ಟನ್ ಡಿ.ಸಿಯ ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ನಡೆದ “ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್” ವೇಳೆ ದಾಳಿ ನಡೆದಿದೆ. ಟ್ರಂಪ್ ಅವರು ಭಾಷಣ ಮಾಡಲು ಸಿದ್ಧರಾಗಿದ್ದಾಗ ಸುಮಾರು 5 ರಿಂದ 8 ಬಾರಿ ಗುಂಡಿನ ಸದ್ದು ಕೇಳಿಬಂದಿದೆ.


2. ಮಾರ್-ಎ-ಲಾಗೋ ಘಟನೆ (ಫೆಬ್ರವರಿ 22, 2026)
ಸುಮಾರು ಎರಡು ತಿಂಗಳ ಹಿಂದೆ ಟ್ರಂಪ್ ಅವರ ಫ್ಲೋರಿಡಾ ನಿವಾಸವಾದ ಮಾರ್-ಎ-ಲಾಗೋದ ಭದ್ರತಾ ವಲಯವನ್ನು ಪ್ರವೇಶಿಸಲು ಪ್ರಯತ್ನಿಸಿದ ಸಶಸ್ತ್ರ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದರು. ಈತ ನುಗ್ಗಿದ ಸಂದರ್ಭದಲ್ಲಿ ಟ್ರಂಪ್ ನಿವಾಸದಲ್ಲಿ ಇರಲಿಲ್ಲ. ಇದನ್ನೂ ಓದಿ: ಫ್ಲೋರಿಡಾದಲ್ಲಿರುವ ಟ್ರಂಪ್ ರೆಸಾರ್ಟ್‌ಗೆ ನುಗ್ಗಿದ್ದ ಯವಕನ ಹತ್ಯೆ
2024ರ ಸೆಪ್ಟೆಂಬರ್‌ನಲ್ಲಿ ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿ ಟ್ರಂಪ್ ಗಾಲ್ಫ್ ಆಡುತ್ತಿದ್ದಾಗ ಅವರ ಮೇಲೆ ದಾಳಿಗೆ ಸಂಚು ರೂಪಿಸಲಾಗಿತ್ತು. ರೈಯಾನ್ ವೆಸ್ಲಿ ರೌತ್ ಎಂಬತಾ ರೈಫಲ್‌ನೊಂದಿಗೆ ಪೊದೆಗಳಲ್ಲಿ ಅಡಗಿದ್ದಾಗ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಅವನನ್ನು ಗುರುತಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿಕೋರನಿಗೆ ಫೆಬ್ರವರಿ 2026ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ಶ್ವೇತಭವನದ ಡಿನ್ನರ್ ವೇಳೆ ಗುಂಡಿನ ದಾಳಿ – ವೇದಿಕೆಯಿಂದ ಟ್ರಂಪ್ ಸ್ಥಳಾಂತರ
4. ಪೆನ್ಸಿಲ್ವೇನಿಯಾ ರ‍್ಯಾಲಿ ದಾಳಿ (ಜುಲೈ 13, 2024)
ಇದು ಟ್ರಂಪ್ ಅವರ ಮೇಲಿನ ಅತ್ಯಂತ ಗಂಭೀರ ದಾಳಿಯಾಗಿದ್ದು, ಅವರ ಬಲಗಿವಿಗೆ ಗುಂಡು ತಗುಲಿ ಗಾಯವಾಗಿತ್ತು. ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂಬ 20 ವರ್ಷದ ಯುವಕ ಹತ್ತಿರದ ಕಟ್ಟಡದ ಮೇಲ್ಛಾವಣಿಯಿಂದ ಎಂಟು ಬಾರಿ ಗುಂಡು ಹಾರಿಸಿದ್ದ. ಘಟನೆಯಲ್ಲಿ ಒಬ್ಬ ಪ್ರೇಕ್ಷಕ ಮೃತಪಟ್ಟಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು.

