ಮಡಿಕೇರಿ: ರಾಜ್ಯದಲ್ಲಿ ಬಿಸಿಲಿನ ತಾಪ (Heatwave) ತಾಂಡವವಾಡುತ್ತಿದೆ. ಆದರೆ ಜೀವನದಿ ಕಾವೇರಿ ತವರೂರು ಸಹ ಇದಕ್ಕೆ ಹೊರತಾಗಿಲ್ಲ. ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿಯಲ್ಲಿ (Harangi Dam) ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರಿನ ಪ್ರಮಾಣ ಕಡಿಮೆ ಆಗಿದೆ. ಪ್ರಸಕ್ತ ವರ್ಷ 3 ಸಲ ಅಣೆಕಟ್ಟೆ ಭರ್ತಿ ಆಗಿದ್ದರೂ ಈ ವರ್ಷದ ಬೇಸಿಗೆಯ ತಾಪಮಾನಕ್ಕೆ ಹಾರಂಗಿ ಜಲಾಶಯ ಬರಿದಾಗುತ್ತಿದೆ.

ಈ ಬಾರಿ ರಾಜ್ಯದಲ್ಲಿ ಬಿಸಿಲಿನ ತಾಪಮಾನದಿಂದ ರಾಜ್ಯದ ಜನರು ದಿನನಿತ್ಯ ಹೈರಾಣಾಗುತ್ತಿದ್ದಾರೆ. ಅಲ್ಲದೇ ಮನೆಯಿಂದ ಹೊರಬರಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ತಂಪಾದ ವಾತಾವರಣದಿಂದ ಕೂಡಿದ ಕೊಡಗು ಜಿಲ್ಲೆಯಲ್ಲೂ ಈ ವರ್ಷ ಹಿಂದೆದೂ ಕಾಣದ ರೀತಿಯಲ್ಲಿ ಬಿಸಿಲಿನ ಆರ್ಭಟ ಹೆಚ್ಚಾಗಿ ಜಿಲ್ಲೆಯ ನಾನಾ ಭಾಗಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುತ್ತಿದೆ. ಈ ಹಿನ್ನೆಲೆ ಕಾವೇರಿ ಕಣಿವೆಯ ಜಿಲ್ಲೆಯ ಏಕೈಕ ಜಲಾಶಯ ಹಾರಂಗಿ ಜಲಾಶಯದಲ್ಲೂ ಬಿಸಿಲಿನ ತಾಪದಿಂದ ಜಲಾಶಯದಲ್ಲಿ ದಿನ ಕಳೆದಂತೆ ನೀರಿನ ಪ್ರಮಾಣ ಇಳಿಮುಖವಾಗುತ್ತಿದೆ. ಇದನ್ನೂ ಓದಿ: White House Dinner Shooting| ಸೀಕ್ರೆಟ್ ಸರ್ವಿಸ್ ಅದ್ಭುತವಾಗಿ ಕೆಲಸ ಮಾಡಿದೆ, ದಾಳಿಕೋರನನ್ನು ಬಂಧಿಸಲಾಗಿದೆ: ಟ್ರಂಪ್

ಹಾರಂಗಿ ಅಣ್ಣೆಕಟ್ಟಿನಲ್ಲಿ 8.5 ಟಿಎಂಸಿ ಸಂಗ್ರಹಣಾ ಸಾಮರ್ಥ್ಯವಿದ್ದು, ಇದೀಗಾ ಕೇವಲ ಎರಡು ಟಿಎಂಸಿ ನೀರು ಇದೆ. ಅದರಲ್ಲೂ ಒಂದು ಟಿಎಂಸಿ ಕುಡಿಯುವ ನೀರಿಗೆ ಮಾತ್ರ ಯೋಗ್ಯ ಇದ್ದು, ಇನ್ನೂ ಒಂದು ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದೆ. ಹೀಗಾಗಿ ಹಾರಂಗಿ ಜಲಾಶಯವನ್ನೇ ಅವಲಂಬಿಸಿಕೊಂಡಿರುವ ಹತ್ತಾರು ಹಳ್ಳಿಗಳ ಜನರು ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ ಎಂಬ ಆತಂಕದಲ್ಲಿ ಇದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಪ್ರಸ್ತುತ ವಿದ್ಯಾಪೀಠಕ್ಕೆ ಇಂದು ಕೊನೆ ದಿನ – ಬನ್ನಿ, ಭಾಗವಹಿಸಿ, ಮಾಹಿತಿ ಪಡೆಯಿರಿ

ಇನ್ನೂ ಈಗಾಗಲೇ ಅಣ್ಣೆಕಟ್ಟಿನಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿರುವುದರಿಂದ ಮುಂಬರುವ ಮೇ ತಿಂಗಳಿನಲ್ಲಿ ಮತ್ತಷ್ಟು ಸಮಸ್ಯೆ ಎದರಾಗುವ ಸಾದ್ಯತೆ ಇರುವುದರಿಂದ ಸೋಮವಾರಪೇಟೆ ತಾಲೂಕಿನ ಜನರು ಹಾಗೂ ಮೈಸೂರು ಹಾಸನ ಭಾಗದ ರೈತಾಪಿ ವರ್ಗದ ಜನರು ಜಲಕ್ಷಾಮಕ್ಕೆ ತುತ್ತಾಗುವ ಲಕ್ಷಣಗಳು ಗೋಚರಿಸುತ್ತಿದೆ. ಇದನ್ನೂ ಓದಿ: ಶ್ವೇತಭವನದ ಡಿನ್ನರ್ ವೇಳೆ ಗುಂಡಿನ ದಾಳಿ – ವೇದಿಕೆಯಿಂದ ಟ್ರಂಪ್ ಸ್ಥಳಾಂತರ

ಒಟ್ಟಿನಲ್ಲಿ ದಿನ ಕಳೆದಂತೆ ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಕ್ಷೀಣಿಸುತ್ತಿದ್ದು. ಮುಂದಿನ 2 ತಿಂಗಳು ಜನರಿಗೆ ಕುಡಿಯಲು ನೀರಿನ ಸಮಸ್ಯೆ ಉಂಟಾಗದಂತೆ ಕುಡಿಯುವ ನೀರಿಗಾಗಿ ಜಲಾಶಯದಲ್ಲಿ ನೀರನ್ನು ಕಾಯ್ದಿರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಕೇಜ್ರಿವಾಲ್ ವಿರುದ್ಧ `ಶೀಷ್ ಮಹಲ್ 2′ ಆರೋಪ ಮಾಡಿದ ದೆಹಲಿ ಡಿಸಿಎಂ ಪರ್ವೇಶ್

