ಅಭಿಷೇಕ್‌, ಕಿಶನ್‌ ಜವಾಬ್ದಾರಿ ಆಟ; ರಾಜಸ್ಥಾನ್‌ ವಿರುದ್ಧ ಹೈದರಾಬಾದ್‌ಗೆ 5 ವಿಕೆಟ್‌ಗಳ ಜಯ

0 Min Read

ಜೈಪುರ: ಅಭಿಷೇಕ್‌ ಶರ್ಮಾ, ಇಶನ್‌ ಕಿಶನ್‌ ಜವಾಬ್ದಾರಿಯುತ ಬ್ಯಾಟಿಂಗ್‌ ಎದುರು ರಾಜಸ್ಥಾನ್‌ ರಾಯಲ್ಸ್‌ ಸೋತು ಮಂಡಿಯೂರಿದೆ. ರಾಜಸ್ಥಾನ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ 5 ವಿಕೆಟ್‌ಗಳ ಜಯ ಸಾಧಿಸಿದೆ.

- Advertisement -

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ 15ರ ಹುಡುಗ ವೈಭವ್‌ ಸೂರ್ಯವಂಶಿ ಸ್ಫೋಟಕ ಶತಕದೊಂದಿಗೆ 6 ವಿಕೆಟ್‌ ನಷ್ಟಕ್ಕೆ 228 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಹೈದರಾಬಾದ್‌ ಉತ್ತಮ ಬ್ಯಾಟಿಂಗ್‌ ನೆರವಿನಿಂದ ಗುರು ತಲುಪಿ ಗೆದ್ದು ಬೀಗಿದೆ.

- Advertisement -

ಉತ್ತಮ ಫಾರ್ಮ್‌ನಲ್ಲಿ ವೈಭವ್‌ ಸೂರ್ಯವಂಶಿ ಇಂದು ಕೂಡ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. 37 ಬಾಲ್‌ಗೆ 12 ಸಿಕ್ಸರ್‌, 5 ಫೋರ್‌ಗಳೊಂದಿಗೆ ವೇಗದ ಶತಕ (103 ರನ್)‌ ಸಿಡಿಸಿ ಮಿಂಚಿದರು. ಧ್ರುವ್‌ ಜುರೆಲ್‌ ಅರ್ಧಶತಕ ಗಳಿಸಿ ತಂಡ ಸವಾಲಿನ ಮೊತ್ತ ಪೇರಿಸಲು ಕೊಡುಗೆ ನೀಡಿದರು. ಡೊನೊವನ್ ಫೆರೀರಾ 33 ಗಳಿಸಿದರು.

- Advertisement -

ನಂತರ ಬ್ಯಾಟಿಂಗ್‌ ಮಾಡಿದ ಹೈದರಾಬಾದ್‌ ಹೊಡಿಬಡಿ ಆಟವಾಡಿತು. ಆರಂಭದಲ್ಲಿ ಟ್ರಾವಿಸ್‌ ಹೆಡ್‌ ಕೇವಲ 6 ರನ್‌ ಗಳಿಸಿ ಔಟಾದರು. ಈ ವೇಳೆ ಇಶನ್‌ ಕಿಶನ್‌ ಮತ್ತು ಅಭಿಷೇಕ್‌ ಶರ್ಮಾ ಜೋಡಿ ಮೋಡಿ ಮಾಡಿತು. ಕಿಶನ್‌ 31 ಬಾಲ್‌ಗೆ 11 ಫೋರ್‌, 3 ಸಿಕ್ಸರ್‌ನೊಂದಿಗೆ 71 ರನ್‌ ಗಳಿಸಿದರು. ಅಭಿಷೇಕ್‌ ಶರ್ಮಾ ಅರ್ಧಶತಕ ಆಟವಾಡಿದರು. ಇವರಿಬ್ಬರು 55 ಬಾಲ್‌ಗೆ 132 ರನ್‌ಗಳ ಉತ್ತಮ ಜೊತೆಯಾಟವಾಡಿದರು.

- Advertisement -

ನಿತೀಶ್‌ ಕುಮಾರ್‌ ರೆಡ್ಡಿ 36, ಹೆನ್ರಿಚ್‌ ಕ್ಲಾಸೆನ್‌ 29 ರನ್‌ ಮೂಲಕ ತಂಡಕ್ಕೆ ಗೆಲುವಿನ ಕೊಡುಗೆ ನೀಡಿದರು.

Share This Article