ಕೇಜ್ರಿವಾಲ್ ವಿರುದ್ಧ `ಶೀಷ್ ಮಹಲ್ 2′ ಆರೋಪ ಮಾಡಿದ ದೆಹಲಿ ಡಿಸಿಎಂ ಪರ್ವೇಶ್

1 Min Read

– ದೆಹಲಿಯ ಲೋಧಿ ಎಸ್ಟೇಟ್ ನಿವಾಸ ಶೀಷ್ ಮಹಲ್ 2 ಎಂದ ಬಿಜೆಪಿಯಿಂದ ಫೋಟೋ ರಿಲೀಸ್

- Advertisement -

ನವದೆಹಲಿ: 7 ರಾಜ್ಯಸಭೆ ಸದಸ್ಯರನ್ನು ಪಕ್ಷಕ್ಕೆ ಸೆಳೆದು ಎಎಪಿಗೆ ಬಿಗ್ ಶಾಕ್ ಕೊಟ್ಟ ಬಿಜೆಪಿ ಇದೀಗ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ವಿರುದ್ಧ ಗಂಭೀರ ಆರೋಪ ಮಾಡಿದೆ.

- Advertisement -

ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅಧಿಕೃತ ನಿವಾಸದ ನವೀಕರಣದ ಕುರಿತು ಬಿಜೆಪಿ ಗಂಭೀರ ಆರೋಪ ಮಾಡಿದ್ದು, ಶೀಷ್ ಮಹಲ್-2 (Sheesh Mahal 2) ಎಂದು ಟೀಕಿಸಿದೆ. ದೆಹಲಿಯಲ್ಲಿ ಮಾತನಾಡಿದ ಡಿಸಿಎಂ ಪರ್ವೇಶ್ ವರ್ಮಾ, ಕೇಜ್ರಿವಾಲ್ ಕಾಮನ್ ಮ್ಯಾನ್ ಇಮೇಜ್ ತ್ಯಜಿಸಿದ್ದು, ಲೋದಿ ಎಸ್ಟೇಟ್‌ನಲ್ಲಿರುವ ಅವರ ನಿವಾಸವನ್ನು ಐಷಾರಾಮಿಯಾಗಿ ನವೀಕರಣ ಮಾಡಲಾಗಿದೆ. ಗೋವಾದ 7 ಸ್ಟಾರ್ ಹೋಟೆಲ್‌ಗಿಂತ ಅದ್ಧೂರಿಯಾಗಿದೆ ಕೇಜ್ರಿವಾಲ್ ಬೆಡ್‌ರೂಂ ಎಂದು ಆರೋಪಿಸಿ ಫೋಟೋ ರಿಲೀಸ್ ಮಾಡಿದ್ದಾರೆ. ಇದನ್ನೂ ಓದಿ: ಚಡ್ಡಾ ಜೊತೆ ಎಎಪಿ ತೊರೆದು ಬಿಜೆಪಿ ಸೇರಿದ 7 ರಾಜ್ಯಸಭಾ ಸಂಸದರು – ಕೇಜ್ರಿವಾಲ್‌ ಫಸ್ಟ್‌ ರಿಯಾಕ್ಷನ್‌

- Advertisement -

ಈ ಆರೋಪಗಳನ್ನು ಆಮ್ ಆದ್ಮಿ ಪಕ್ಷ ಸಂಪೂರ್ಣವಾಗಿ ತಿರಸ್ಕರಿಸಿದೆ. ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮಾತಾಡಿ, ಬಿಜೆಪಿ ಪ್ರದರ್ಶಿಸಿದ ಫೋಟೋಗಳು ನಕಲಿಯಾಗಿವೆ. ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

- Advertisement -

ಇತ್ತ ಪಂಜಾಬ್‌ನಲ್ಲಿ ಎಎಪಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಷಡ್ಯಂತ್ರ ರೂಪಿಸಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಆದಾಗ್ಯೂ, ಎಎಪಿಯೊಳಗಿನ ಆಂತರಿಕ ಅಸಮಾಧಾನ ಮತ್ತು ದೆಹಲಿಯಲ್ಲಿನ ಇತ್ತೀಚಿನ ಚುನಾವಣಾ ಹಿನ್ನಡೆಯಿಂದಾಗಿ ಆಪ್ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆAದು ಬಿಜೆಪಿ ಸಮರ್ಥಿಸಿಕೊಂಡಿದೆ.

Share This Article