ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು (Drinking Water) ಒದಗಿಸಲು ತುರ್ತು ಅನುದಾನ ಬಿಡುಗಡೆ ಮಾಡಲಾಗಿದೆ. ಎಲ್ಲಾ ಜಿಲ್ಲೆಗಳಿಗೆ 45 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ.

ಬೇಸಿಗೆಯಿಂದಾಗಿ ಕುಡಿಯುವ ನೀರನ್ನು ಟ್ಯಾಂಕರ್‌ಗಳ ಮೂಲಕ ಪೂರೈಸಲು ಹಾಗೂ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆಯಲು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.


ಜಿಲ್ಲಾವಾರು ಅನುದಾನ ವಿವರ
1. ಬಾಗಲಕೋಟೆ – 1.5 ಕೋಟಿ
2. ಬೆಂಗಳೂರು – 1.5 ಕೋಟಿ
3. ಬೆಳಗಾವಿ – 2 ಕೋಟಿ
4. ಬೆಂಗಳೂರು (ಗ್ರಾ) – 1.5 ಕೋಟಿ
5. ಬೆಂಗಳೂರು (ನಗರ) – 1.5 ಕೋಟಿ
6. ಬೀದರ – 1.5 ಕೋಟಿ
7. ಚಾಮರಾಜನಗರ – 1.5 ಕೋಟಿ
8. ಚಿಕ್ಕಬಳ್ಳಾಪುರ – 1.5 ಕೋಟಿ
9. ಚಿಕ್ಕಮಗಳೂರು – 1.5 ಕೋಟಿ
10. ಚಿತ್ರದುರ್ಗ – 1.5 ಕೋಟಿ
11. ದಕ್ಷಿಣ ಕನ್ನಡ – 1 ಕೋಟಿ
12. ದಾವಣಗೆರೆ – 1 ಕೋಟಿ
13. ಧಾರವಾಡ – 1 ಕೋಟಿ
14. ಗದಗ – 1 ಕೋಟಿ
15. ಹಾಸನ – 1.5 ಕೋಟಿ
16. ಹಾವೇರಿ – 1.5 ಕೋಟಿ
17. ಕಲಬುರಗಿ – 2 ಕೋಟಿ
18. ಕೊಡಗು – 1 ಕೋಟಿ
19. ಕೋಲಾರ – 2 ಕೋಟಿ
20. ಕೊಪ್ಪಳ – 1.5 ಕೋಟಿ
21. ಮಂಡ್ಯ – 1 ಕೋಟಿ
22. ಮೈಸೂರು – 1.5 ಕೋಟಿ
23. ರಾಯಚೂರು – 2 ಕೋಟಿ
24. ರಾಮನಗರ – 2 ಕೋಟಿ
25. ಶಿವಮೊಗ್ಗ – 1.5 ಕೋಟಿ
26. ತುಮಕೂರು – 1 ಕೋಟಿ
27. ಉಡುಪಿ – 2 ಕೋಟಿ
28. ಉತ್ತರ ಕನ್ನಡ – 1 ಕೋಟಿ
29. ವಿಜಯನಗರ – 1.5 ಕೋಟಿ
30. ವಿಜಯಪುರ – 1.5 ಕೋಟಿ
31. ಯಾದಗಿರಿ – 1.5 ಕೋಟಿ


