– ಇಬ್ಬರ ಸ್ಥಿತಿ ಗಂಭೀರ
ಬ್ರೆಸಿಲಿಯಾ: ಬ್ರೆಜಿಲ್‌ನ ಬೆಲೊ ಹೊರಿಜಾಂಟೆಯಲ್ಲಿ (Belo Horizonte) ಸಣ್ಣ ವಿಮಾನವೊಂದು ವಸತಿ ಕಟ್ಟಡಕ್ಕೆ ಡಿಕ್ಕಿ (Plane Crash) ಹೊಡೆದ ಪರಿಣಾಮ ಪೈಲಟ್ ಸೇರಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ವಿಮಾನದಲ್ಲಿ ಐದು ಜನರು ಪ್ರಯಾಣಿಸುತ್ತಿದ್ದರು. ನಗರ ಕೇಂದ್ರದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಪಂಪುಲ್ಹಾ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ಈ ಘಟನೆ ಸಂಭವಿಸಿದೆ. ಸಾವೊ ಪಾಲೊಗೆ ತೆರಳುತ್ತಿದ್ದ ವಿಮಾನ ಪತನಗೊಂಡಿದೆ. ಇದನ್ನೂ ಓದಿ: ಸೈಕಲ್‌ಗೆ ಟೆಂಪೋ ಡಿಕ್ಕಿ- 11 ವರ್ಷದ ಬಾಲಕ ಸ್ಥಳದಲ್ಲೇ ಸಾವು
ಅಪಘಾತದಲ್ಲಿ ಪೈಲಟ್ ಮತ್ತು ಸಹ-ಪೈಲಟ್ ಸೇರಿ ಮೂವರು ಸಾವನ್ನಪ್ಪಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ವಿಮಾನ ಕಟ್ಟಡಕ್ಕೆ ಡಿಕ್ಕಿ ಹೊಡೆದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿ ರಾಜೀನಾಮೆ ಕೊಡದಿದ್ರೆ ವಜಾಗೊಳಿಸಿ: ಹಿಮಂತ ಶರ್ಮಾ ಕಿಡಿ

