ಅಕ್ರಮಗಳಿಗೆ ಬ್ರೇಕ್ ಹಾಕದೇ ಕರ್ತವ್ಯ ಲೋಪ – ಮುನಿರಾಬಾದ್ ಪಿಎಸ್‌ಐ ಅಮಾನತು

1 Min Read

ಕೊಪ್ಪಳ: ಆಡಳಿತಾತ್ಮಕ ವಿಚಾರದಲ್ಲಿ ಸರಿಯಾಗಿ ಕೆಲಸ ನಿರ್ವಹಣೆ ಮಾಡದ್ದಕ್ಕೆ ಮುನಿರಾಬಾದ್ ಪಿಎಸ್‌ಐ ಸುನೀಲ್ ಅವರನ್ನು ಅಮಾನತು ಮಾಡಲಾಗಿದೆ.

ಎಸ್ಪಿ ರಾಮ್ ಅರಸಿದ್ಧಿ ಅವರು ಮುನಿರಾಬಾದ್ ಪೊಲೀಸ್ ಠಾಣೆಯ ಪಿಎಸ್‌ಐ ಸುನೀಲ್ ಅವರನ್ನು ಅಮಾನತು ಮಾಡಿ, ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ನಿಯಮ ಉಲ್ಲಂಘಿಸಿ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ತೆವಾಟಿಯಾ!

ಕಳೆದ ಎರಡು ವರ್ಷಗಳಿಂದ ಸುನೀಲ್ ಮುನಿರಾಬಾದ್ ಠಾಣೆಯ ಪಿಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಮುನಿರಾಬಾದ್ ಠಾಣೆ ವ್ಯಾಪ್ತಿಯಲ್ಲಿ ಕೆಲ ಅನಧಿಕೃತ ಚಟುವಟಿಕೆಗಳು ನಡೆದಿದ್ದವು. ವಿದೇಶಿಗರ ಪಾರ್ಟಿ, ಅಕ್ರಮ ಕಲ್ಲು ಗಣಿಗಾರಿಕೆ, ಅನ್ನಭಾಗ್ಯ ಅಕ್ಕಿ ಮಾರಾಟದಂತಹ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಹೀಗಾಗಿ ಕಚೇರಿಯ ಆಡಳಿತಾತ್ಮಕ ವಿಚಾರದಲ್ಲಿ ಸರಿಯಾಗಿ ಕೆಲಸ ಮಾಡದ ಹಿನ್ನೆಲೆ ಮುನಿರಾಬಾದ್ ಪಿಎಸ್‌ಐ ಸುನೀಲ್ ಅವರನ್ನು ಅಮಾನತು ಮಾಡಿ, ಆದೇಶಿಸಿದ್ದಾರೆ.

Share This Article