ನವದೆಹಲಿ: ಪಶ್ಚಿಮ ಬಂಗಾಳದ (West Bengal) ರಾಜಕೀಯ ರಣರಂಗದಲ್ಲಿ ಭಾರೀ ಕುತೂಹಲ ಮೂಡಿದೆ. ಎಲ್ಲರ ಮನಸ್ಸಿನಲ್ಲಿಯೂ ಮಮತಾ ಬ್ಯಾನರ್ಜಿಯವರ ಪಶ್ಚಿಮ ಬಂಗಾಳದ ಕೋಟೆಯನ್ನು ಭೇದಿಸುವ ಬಿಜೆಪಿಯ (BJP) ಯೋಜನೆ ಅಂತಿಮವಾಗಿ ಯಶಸ್ವಿಯಾಗಿದೆಯೇ ಎಂಬ ಪ್ರಶ್ನೆ ಮೂಡಿದೆ. ಎಕ್ಸಿಟ್ ಪೋಲ್‌ಗಳ ಪ್ರಕಾರ ಅದು ಯಶಸ್ವಿಯಾಗಿದೆ ಎಂದು ಸೂಚಿಸುತ್ತಿದೆ.
ಆರು ಸಮೀಕ್ಷೆದಾರರು ತಮ್ಮ ಫಲಿತಾಂಶದ ಲೆಕ್ಕಾಚಾರವನ್ನು ಬಿಡುಗಡೆ ಮಾಡಿದ್ದು, ಅವರಲ್ಲಿ ನಾಲ್ಕು ಸಂಸ್ಥೆಗಳು ಬಿಜೆಪಿ ಮೊದಲ ಬಾರಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ. ಅದರಲ್ಲಿ ಎರಡು ಸಂಸ್ಥೆಗಳು ಟಿಎಂಸಿಗೆ (TMC) ಅಧಿಕಾರ ಸಿಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ. ಬಿಜೆಪಿ ಪರ ಹೆಚ್ಚು ಹೆಚ್ಚಿನ ಫಲಿತಾಂಶ ದಾಖಲಾಗಿದ್ದು, ಬಂಗಾಳದ ಜನ ಬದಲಾವಣೆ ಬಯಸಿದ್ದಾರ ಎಂಬ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: Exit Poll| ಪಶ್ಚಿಮ ಬಂಗಾಳದಲ್ಲಿ ಫಸ್ಟ್ ಟೈಂ ಬಿಜೆಪಿ ಅಧಿಕಾರಕ್ಕೆ
ಸಮೀಕ್ಷೆಗಳ ಫಲಿತಾಂಶ
ಮ್ಯಾಟ್ರಿಜ್: ಬಿಜೆಪಿ (146-161), ಟಿಎಂಸಿ (125-140), ಒಟಿಎಚ್ (6-10)
ಪಿ-ಮಾರ್ಕ್: ಬಿಜೆಪಿ (150-175), ಟಿಎಂಸಿ (118-138), ಒಟಿಎಚ್ (2-6)
ಪ್ರಜಾ ಪೋಲ್: ಬಿಜೆಪಿ (178-208), ಟಿಎಂಸಿ (85-110), ಒಟಿಎಚ್ (0-5)
ಪೋಲ್ ಡೈರಿ: ಬಿಜೆಪಿ (142-171), ಟಿಎಂಸಿ (99-127), ಒಟಿಎಚ್ (5-9)
ಜನ್ಮತ: ಟಿಎಂಸಿ (195-205), ಬಿಜೆಪಿ (80-90), ಒಟಿಎಚ್ (4-9)
ಪೀಪಲ್ ಪಲ್ಸ್: ಟಿಎಂಸಿ (177-187), ಬಿಜೆಪಿ (95-110), ಒಟಿಎಚ್ (1-4) ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿಯಲಾಗಿದೆ. ಇದನ್ನೂ ಓದಿ: Axis my India Exit Poll Results | ತನ್ನ ಚೊಚ್ಚಲ ಚುನಾವಣೆಯಲ್ಲೇ ವಿಜಯ್ ಮ್ಯಾಜಿಕ್ – ದಳಪತಿಗೆ ಪಟ್ಟ!

