ನವದೆಹಲಿ: ಪುದುಚೇರಿಯಲ್ಲಿ (Puducherry) ಎನ್ಡಿಎ (NDA) ಸತತ ಎರಡನೇ ಅವಧಿಗೆ 16 ರಿಂದ 25 ಸ್ಥಾನಗಳನ್ನು ಪಡೆಯಲಿದೆ ಎಂದು ಎಕ್ಸಿಟ್ ಪೋಲ್ (Exit Poll) ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಈ ಪ್ರದೇಶದಲ್ಲಿ ಅಧಿಕಾರ ಪಡೆಯಲು ಪ್ರಯತ್ನಿಸುತ್ತಿದ್ದ ಕಾಂಗ್ರೆಸ್ (Congress) ನೇತೃತ್ವದ ಬಣಕ್ಕೆ ಸಮೀಕ್ಷೆಗಳು 6 ರಿಂದ 12 ಸ್ಥಾನಗಳನ್ನು ನೀಡಿವೆ. ಇದನ್ನೂ ಓದಿ: Exit Poll Results 2026 | ತಮಿಳುನಾಡಿನಲ್ಲಿ ಮತ್ತೆ ಡಿಎಂಕೆಗೆ ಪಟ್ಟಾಭಿಷೇಕ – ದಳಪತಿಯ ಟಿವಿಕೆಗೆ ಹೀನಾಯ ಸೋಲು
ಸಾಕಷ್ಟು ಸಂಚಲನ ಸೃಷ್ಟಿಸಿದ್ದ ನಟ-ರಾಜಕಾರಣಿ ವಿಜಯ್ ನೇತೃತ್ವದ ಟಿವಿಕೆ-ಎನ್ಎಂಕೆ ಮೈತ್ರಿ ಎರಡರಿಂದ ನಾಲ್ಕು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಭವಿಷ್ಯ ನುಡಿದಿದೆ.
ಎನ್ಡಿಎ 16 ರಿಂದ 25 ಸ್ಥಾನಗಳೊಂದಿಗೆ ಎರಡನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು ಮೂರು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಕಾಂಗ್ರೆಸ್ ನೇತೃತ್ವದ ಬಣಕ್ಕೆ ಆರು ರಿಂದ 12 ಸ್ಥಾನಗಳನ್ನು ನೀಡಿವೆ. ಈ ಮೂಲಕ ಮತ್ತೆ ಬಿಜೆಪಿ ಅಧಿಕಾರದಲ್ಲಿ ಮುಂದುವರಿಯುವ ನಿರೀಕ್ಷೆ ಇದೆ. ಇದನ್ನೂ ಓದಿ: Exit Polls – ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್ ಸಾಧನೆ

