ದೆಹಲಿ ಹೈಕೋರ್ಟ್ ಸಿಜೆ ಪೀಠದ ವರ್ಚುವಲ್‌ ವಿಚಾರಣೆ ವೇಳೆ ಕಾಣಿಸಿದ ಅಶ್ಲೀಲ ವೀಡಿಯೋ

1 Min Read

– 2 ಬಾರಿ ವೀಡಿಯೋ ಕಾನ್ಫರೆನ್ಸ್ ಆಫ್

ನವದೆಹಲಿ: ದೆಹಲಿ ಹೈಕೋರ್ಟ್ (Delhi HighCourt) ಸಿಜೆ (CJ) ಪೀಠದ ವಿಡಿಯೋ ಕಾನ್ಫರೆನ್ಸಿಂಗ್ ಆನ್‌ಲೈನ್ ವಿಚಾರಣೆ ವೇಳೆ ಮೂರು ಬಾರಿ ಅಶ್ಲೀಲ ವೀಡಿಯೋ ಕಾಣಿಸಿದ್ದು, ದೂರು ದಾಖಲಾಗಿದೆ.

ಬುಧವಾರ (ಏ.29) ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ವಿಭಾಗೀಯ ಪೀಠವು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವರ್ಚುವಲ್ ಆಗಿ ವಿಚಾರಣೆ ನಡೆಸುತ್ತಿದ್ದರು. ಮಧ್ಯಾಹ್ನ 12:56ರ ಸುಮಾರಿಗೆ ಅಪರಿಚಿತ ವ್ಯಕ್ತಿಯೋರ್ವ ವಿಡಿಯೋ ಕಾನ್ಫರೆನ್ಸಿಂಗ್ ಸೇರಿ ಅಶ್ಲೀಲ ವಿಡಿಯೋ ಪ್ಲೇ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬೌರಿಂಗ್‌ ಆಸ್ಪತ್ರೆಯ ಗೋಡೆ ಕುಸಿದು 7 ಮಂದಿ ಸಾವು – ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಎರಡು ಬಾರಿ ಅಶ್ಲೀಲ ವಿಡಿಯೋ ಪ್ಲೇ ಮಾಡಿದ್ದು, ಮೂರನೇ ಬಾರಿ ಹಾಡನ್ನು ಪ್ರಸಾರ ಮಾಡಿದ್ದಾರೆ. ಒಟ್ಟು ಮೂರು ಬಾರಿ ಸಮಸ್ಯೆಯುಂಟು ಮಾಡಿದ್ದು, ಕೂಡಲೇ ವರ್ಚುವಲ್ ಕಲಾಪವನ್ನು ಸ್ಥಗಿತಗೊಳಿಸಿದರು. ಸ್ವಲ್ಪ ಸಮಯದ ನಂತರ ಮತ್ತೆ ವಿಡಿಯೋ ಕಾನ್ಫರೆನ್ಸಿಂಗ್ ಆರಂಭಿಸಿದಾಗ ಅಪರಿಚಿತ ವ್ಯಕ್ತಿಯೋರ್ವ ಜಾಯಿನ್ ಆಗಿ, ನಿಮ್ಮನ್ನು ಹ್ಯಾಕ್ ಮಾಡಲಾಗಿದೆ ಎಂದು ಮೆಸೇಜ್ ತೋರಿಸಿದ್ದಾರೆ.

ಸದ್ಯ ವಿಡಿಯೋ ಕಾನ್ಫರೆನ್ಸಿಂಗ್ ಸಮಯದಲ್ಲಿ ಅಶ್ಲೀಲ ವಿಡಿಯೋವನ್ನು ಪ್ಲೇ ಮಾಡಿದ ಸಂಬಂಧ ಕ್ರಮ ಕೈಗೊಳ್ಳಲು ರಿಜಿಸ್ಟ್ರಾರ್ ಜನರಲ್‌ಗೆ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರು ಸೂಚನೆ ನೀಡಿದ್ದಾರೆ. ನ್ಯಾಯಾಲಯದ ಕಲಾಪಗಳನ್ನು ರೆಕಾರ್ಡ್ ಮಾಡುವುದು ಹಾಗೂ ಪ್ರಸಾರ ಮಾಡುವುದು ನಿಷೇಧಿಸಲಾಗಿದೆ. ಒಂದು ವೇಳೆ ಮಾಡಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.ಇದನ್ನೂ ಓದಿ: Axis my India Exit Poll Results | ತನ್ನ ಚೊಚ್ಚಲ ಚುನಾವಣೆಯಲ್ಲೇ ವಿಜಯ್‌ ಮ್ಯಾಜಿಕ್ – ದಳಪತಿಗೆ ಪಟ್ಟ!

Share This Article