Exit Polls – ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್‌ ಸಾಧನೆ

1 Min Read

* 70-80 ಸ್ಥಾನಗಳಲ್ಲಿ ಗೆಲವು – ಆಕ್ಸಿಸ್ ಮೈ ಇಂಡಿಯಾ ಭವಿಷ್ಯ

ನವದೆಹಲಿ: ಅಸ್ಸಾಂನ (Assam) ವಿಧಾನಸಭಾ ಚುನಾವಣೆಯಲ್ಲಿ (Election) 126 ಸ್ಥಾನಗಳಲ್ಲಿ ಬಿಜೆಪಿ (BJP) 70-80 ಸ್ಥಾನಗಳನ್ನು ಗೆಲ್ಲಲಿದೆ ಎಂದು ಆಕ್ಸಿಸ್ ಮೈ ಇಂಡಿಯಾ ಭವಿಷ್ಯ ಚುನಾವಣೋತ್ತರ ಸಮಿಕ್ಷೆ ಭವಿಷ್ಯ ನುಡಿದಿದೆ.

ಈ ಮೂಲಕ ಆಡಳಿತರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಅಸ್ಸಾಂನಲ್ಲಿ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದೆ. ಬಿಜೆಪಿ-ಎಜಿಪಿ-ಬಿಪಿಎಫ್ ಮೈತ್ರಿಕೂಟ 88 ರಿಂದ 100 ಸ್ಥಾನಗಳನ್ನು ಗೆಲ್ಲಲಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ – ರಿಪಬ್ಲಿಕ್‌ ಟಿವಿ ಸಮೀಕ್ಷೆ

ಕಾಂಗ್ರೆಸ್‌ 24 ರಿಂದ 36 ಸ್ಥಾನಗಳನ್ನು ಗೆಲ್ಲಲಿದೆ. ಎಜಿಪಿ 7-9 ಸ್ಥಾನಗಳನ್ನು ಮತ್ತು ಬಿಪಿಎಫ್ 9-11 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಭಾರತೀಯ ಜನತಾ ಪಕ್ಷವು 70-80 ಸ್ಥಾನಗಳೊಂದಿಗೆ ಏಕೈಕ ಬಹುಮತ ಪಡೆದ ಪಕ್ಷವಾಗಿ ಹೊರಹೊಮ್ಮಲಿದೆ.

ರೈಜೋರ್ ದಳ 1-4 ಸ್ಥಾನ, ಎಜೆಪಿ 1-2 ಸ್ಥಾನ, ಸಿಪಿಐ(ಎಂ) 0-1 ಸ್ಥಾನಗಳನ್ನು ಮತ್ತು ಐಎನ್‌ಡಿ (ಎಪಿಎಚ್‌ಎಲ್‌ಸಿ) 0-2 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಇದನ್ನೂ ಓದಿ: Exit Polls 2026 Live: ಪಂಚರಾಜ್ಯ ಅಸೆಂಬ್ಲಿ ಎಲೆಕ್ಷನ್‌‌

Share This Article