– ʻಪಂಚʼ ಕಜ್ಜಾಯ ಯಾರಿಗೆ?
ನವದೆಹಲಿ: ಪಂಚರಾಜ್ಯಗಳ ಎಕ್ಸಿಟ್ ಪೋಲ್ ಸಮೀಕ್ಷೆಯ ಫಲಿತಾಂಶ (Exit Poll Results) ಹೊರಬಿದ್ದಿದೆ. ಪಶ್ಚಿಮ ಬಂಗಾಳದಲ್ಲಿ ಆದ ದಾಖಲೆಯ ಮತದಾನ ಬಿಜೆಪಿಗೆ ವರದಾನ ಆಗೋ ಸರ್ವ ಲಕ್ಷಣಗಳು ಕಾಣುತ್ತಿವೆ. ಬಹುತೇಕ ಸಮೀಕ್ಷೆಗಳು ಬಿಜೆಪಿ ಸರ್ಕಾರ (BJP Government) ಅಧಿಕಾರಕ್ಕೆ ಬರಲಿದೆ ಅಂತ ಭವಿಷ್ಯ ನೀಡಿವೆ. ತಮಿಳುನಾಡಿನಲ್ಲಿ (Tamil Nadu) ಮತ್ತೆ ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬರಲಿದೆ ಅಂತ ಸಮೀಕ್ಷೆಗಳು ಹೇಳಿವೆ.

ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ವಿಜಯ್ (Actor Vijay) ನೇತೃತ್ವದ ಟಿವಿಕೆ ಪಕ್ಷ 10-15 ಸ್ಥಾನ ಗೆಲ್ಲಬಹುದು ಅಂತ ಹೇಳಲಾಗಿದೆ. ಆದ್ರೆ ಎಕ್ಸಿಸ್ ಮೈ ಇಂಡಿಯಾ ಟಿವಿಕೆ ಬಂಪರ್ ಗೆಲುವು ಸಾಧಿಸಲಿದೆ ಎಂದು ಹೇಳಿದೆ. ಇನ್ನೂ, ಕೇರಳದಲ್ಲಿ ಎಲ್‌ಡಿಎಫ್ ಹಾಗೂ ಯುಡಿಎಫ್ ಲಡಾಯಿ ಇದ್ದರೂ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ 10 ವರ್ಷಗಳ ನಂತರ ಅಧಿಕಾರಕ್ಕೆ ಬರೋ ಸಾಧ್ಯತೆಗಳಿವೆ. ಅಸ್ಸಾಂನಲ್ಲಿ (Assam) ಕಾಂಗ್ರೆಸ್ ಸರ್ಕಾರ ಹಾಗೂ ಪುದುಚೇರಿಯಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಬಹುದು ಅಂತ ಅಂದಾಜಿಸಲಾಗಿದೆ.

ಬಂಗಾಳದಲ್ಲಿ ಬಿಜೆಪಿ ಬಾಸ್..?
ಟೈಮ್ಸ್ ನೌ: ಬಿಜೆಪಿ 138-159.. ಟಿಎಂಸಿ 131-152.. ಇತರೆ 01
ಮ್ಯಾಟ್ರಿಜ್: ಬಿಜೆಪಿ 146-161.. ಟಿಎಂಸಿ 125-140.. ಇತರೆ 6-10
ಪಿಮಾರ್ಕ್: ಬಿಜೆಪಿ 150-175. ಟಿಎಂಸಿ 118-138.. ಕಾಂಗ್ರೆಸ್ 2-6..ಇತರೆ 00
ಸ್ಮಾರ್ಟ್ ಪೋಲ್: ಬಿಜೆಪಿ 154.. ಟಿಎಂಸಿ : 136.. ಕಾಂಗ್ : 1.. ಇತರೆ : 3
ಪೀಪಲ್ಸ್ ಪಲ್ಸ್: ಬಿಜೆಪಿ : 95-110.. ಟಿಎಂಸಿ : 177 – 187.. ಕಾಂಗ್ : 1-3.. ಇತರೆ : 1
ಪ್ರಜಾ ಪೋಲ್ : ಬಿಜೆಪಿ : 178-208.. ಟಿಎಂಸಿ : 85-110.. ಇತರೆ : 0-5
ಪೋಲ್ ಆಫ್ ಪೋಲ್ಸ್ : ಬಿಜೆಪಿ : 143.. ಟಿಎಂಸಿ : 144.. ಇತರೆ : 5

ತಮಿಳುನಾಡಲ್ಲಿ ಮತ್ತೆ ಡಿಎಂಕೆ..?
ಎಕ್ಸಿಸ್ ಮೈ ಇಂಡಿಯಾ: ಟಿವಿಕೆ : 98-120.. ಡಿಎಂಕೆ : 92-110.. ಎಐಎಡಿಎಂಕೆ : 22-32
ಚಾಣಕ್ಯ ಸ್ಟ್ರ್ಯಾಟಜಿ: ಡಿಎಂಕೆ 145-160.. ಎಐಎಡಿಎಂಕೆ 50-65.. ಇತರೆ 18-26..
ಪಿಮಾರ್ಕ್ : ಡಿಎಂಕೆ :125-145.. ಎಐಎಡಿಎಂಕೆ :65-85.. ಟಿವಿಕೆ : 16-26.. ಇತರೆ :1-6
ಸ್ಮಾರ್ಟ್ ಪೋಲ್ ; ಡಿಎಂಕೆ :180.. ಎಐಎಡಿಎಂಕೆ : 28.. ಟಿವಿಕೆ : 26.. ಇತರೆ : 00
ಟೈಮ್ಸ್ ನೌ: ಡಿಎಂಕೆ 75-95.. ಎಐಎಡಿಎಂಕೆ 128 -147.. ಟಿವಿಕೆ 8-15.. ಇತರೆ 00
ಮ್ಯಾಟ್ರಿಜ್: ನಡಿಎಂಕೆ : 122-132.. ಎನ್‌ಡಿಎ : 87-100.. ಟಿವಿಕೆ : 10-12..ಇತರೆ : 0-6
ಪೀಪಲ್ಸ್ ಪಲ್ಸ್ : ಡಿಎಂಕೆ : 125-145.. ಎಐಎಡಿಎಂಕೆ : 65-80.. ಟಿವಿಕೆ 18-24.. ಇತರೆ 02-06
ಪೋಲ್ ಆಫ್ ಪೋಲ್ಸ್: ಡಿಎಂಕೆ : 137.. ಎಐಎಡಿಎಂಕೆ : 75.. ಟಿವಿಕೆ : 17.. ಇತರೆ : 8

ಕೇರಳಂ ನಲ್ಲಿ ಕಾಂಗ್ರೆಸ್..?
ಸ್ಮಾರ್ಟ್ ಪೋಲ್: ಯುಡಿಎಫ್ : 85.. ಎಲ್‌ಡಿಎಫ್ : 51.. ಬಿಜೆಪಿ : 3.. ಇತರೆ : 1
ಎಕ್ಸಿಸ್ ಮೈ ಇಂಡಿಯಾ : ಎಲ್‌ಡಿಎಫ್ 49-62.. ಯುಡಿಎಫ್ 78-90.. ಬಿಜೆಪಿ 0-3.. ಇತರೆ 00
ಟೈಮ್ಸ್ ನೌ: ಎಲ್‌ಡಿಎಫ್ 52-61.. ಯುಡಿಎಫ್ 72-84.. ಬಿಜೆಪಿ 3-7.. ಇತರೆ 00
ಮ್ಯಾಟ್ರಿಜ್: ಎಲ್‌ಡಿಎಫ್ : 60-65.. ಯುಡಿಎಫ್ :70-75.. ಬಿಜೆಪಿ : 3-5.. ಇತರೆ : 2-4
ಪಿಮಾರ್ಕ್: ಎಲ್‌ಡಿಎಫ್ : 62-69.. ಯುಡಿಎಫ್ : 71-79.. ಬಿಜೆಪಿ : 1-4.. ಇತರೆ : 0-3
ಟಿಎಪಿ: ಎಲ್‌ಡಿಎಫ್ 63-67. ಯುಡಿಎಫ್ 66-72.. ಬಿಜೆಪಿ 6-10.. ಇತರೆ 0-3
ಪೋಲ್ ಆಫ್ ಪೋಲ್ಸ್: ಯುಡಿಎಫ್ : 70.. ಎಲ್‌ಡಿಎಫ್ : 60.. ಬಿಜೆಪಿ : 2.. ಇತರೆ :1

ಅಸ್ಸಾಂನಲ್ಲಿ ಬಿಜೆಪಿಯೇ ದೊರೆ..?
ಎಕ್ಸಿಸ್ ಮೈ ಇಂಡಿಯಾ : ಎನ್‌ಡಿಎ: 88-100.. ಇಂಡಿ : 24-36..
ಪೋಲ್ ಡೈರಿ: ಎನ್‌ಡಿಎ 86-101.. ಕಾಂಗ್-15-26.. ಎಯುಡಿಎಫ್ 2-5..
ಟೈಮ್ಸ್ ನೌ : ಬಿಜೆಪಿ 88-101.. ಕಾಂಗ್ 23-33.. ಇತರೆ :02-05
ಪಿಮಾರ್ಕ್: ಬಿಜೆಪಿ : 82-94.. ಕಾಂಗ್ : 30-40.. ಇತರೆ : 1-5..
ಮ್ಯಾಟ್ರಿಜ್: ಬಿಜೆಪಿ : 85-95.. ಕಾಂಗ್ : 25-32.. ಇತರೆ : 6-12..
ಪೋಲ್ ಆಫ್ ಪೋಲ್ಸ್: ಎನ್‌ಡಿಎ-87-101.. ಕಾಂಗ್: 19-30.. ಇತರೆ 02-06

ಪುದುಚೇರಿಯಲ್ಲಿ ಎನ್‌ಡಿಎ..?
ಎಕ್ಸಿಸ್ ಮೈ ಇಂಡಿಯಾ: ಬಿಜೆಪಿ: 16-20.. ಕಾಂಗ್ : 6-8.. ಇತರೆ : 3-7
ಪೀಪಲ್ಸ್ ಪಲ್ಸ್: ಬಿಜೆಪಿ: 16-19.. ಕಾಂಗ್ : 10-12.. ಇತರೆ : 1-2
ಪ್ರಜಾ ಪೋಲ್ : ಬಿಜೆಪಿ : 19-25.. ಕಾಂಗ್ : 6-8.. ಇತರೆ : 00
ಪೋಲ್ ಆಫ್ ಪೋಲ್ಸ್ : ಬಿಜೆಪಿ: 17.. ಕಾಂಗ್ : 09.. ಇತರೆ : 03
ಬಂಗಾಳದ 142 ಕ್ಷೇತ್ರಗಳಿಗೆ ಮತದಾನ ಮುಕ್ತಾಯ
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಮತದಾನ ಮುಕ್ತಾಯಗೊಂಡಿದೆ. 7 ಜಿಲ್ಲೆಗಳ 142 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಸುಮಾರು 3.22 ಕೋಟಿ ಮತದಾರರು 1,448 ಅಭ್ಯರ್ಥಿಗಳ ಭವಿಷ್ಯವನ್ನ ಮತಯಂತ್ರದಲ್ಲಿ ಭದ್ರಗೊಳಿಸಿದ್ದಾರೆ. 2ನೇ ಹಂತದಲ್ಲಿ ಶೇ.91.35 ರಷ್ಟು ಮತದಾನವಾಗಿದೆ. ಮೊದಲ ಹಂತದಲ್ಲಿ ದಾಖಲೆಯ ಶೇ.92 ರಷ್ಟು ಮತದಾನವಾಗಿತ್ತು. ಒಟ್ಟು ಶೇ.92.47 ರಷ್ಟು ವೋಟಿಂಗ್ ಆಗಿದೆ.

