ಗೆಲುವಿನ ಬಗ್ಗೆ ನನ್ನ ಮಗನಿಗೆ 1% ಅನುಮಾನ ಕೂಡ ಇರಲಿಲ್ಲ – ವಿಜಯ್‌ ಬಗ್ಗೆ ತಂದೆ ಚಂದ್ರಶೇಖರ್ ಮಾತು

1 Min Read

ಚೆನ್ನೈ: ವಿಜಯ್‌ಗೆ (Vijay) ಟಿವಿಕೆ (TVK) ಪಕ್ಷದ ಗೆಲುವಿನ ಬಗ್ಗೆ 1% ಅನುಮಾನ ಕೂಡ ಇರಲಿಲ್ಲ ಎಂದು ಅವರ ತಂದೆ ಎಸ್‌.ಎ ಚಂದ್ರಶೇಖರ್ ಹೇಳಿದರು.

ಟಿವಿಕೆ ಪಕ್ಷ ಮುನ್ನಡೆ ಸಾಧಿಸಿದ್ದರ ಬಗ್ಗೆ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ಒಬ್ಬ ತಂದೆಯಾಗಿ ನನಗೆ ತುಂಬಾ ಹೆಮ್ಮೆ ಮತ್ತು ಸಂತೋಷವಾಗಿದೆ. ನಾನು ಕಳೆದ ಎರಡು ವರ್ಷಗಳಿಂದ ನನ್ನ ಮಗನ ಆತ್ಮವಿಶ್ವಾಸವನ್ನು ನೋಡುತ್ತಿದ್ದೇನೆ. ನಾನು ಅವನಿಗೆ ಶುಭ ಹಾರೈಸುತ್ತೇನೆ. ಇನ್ನೂ, ಇದೇ ವೇಳೆ ವಿಜಯ್ “ನಾನು ತಮಿಳುನಾಡಿನ ಮುಖ್ಯಮಂತ್ರಿಯಾಗುತ್ತೇನೆ” ಎಂದು ಹೇಳಿದ್ದನ್ನು‌ ಅವರು ನೆನಪಿಸಿಕೊಂಡರು. ಇದನ್ನೂ ಓದಿ: ಅಂತಿಮ ಫಲಿತಾಂಶಕ್ಕೂ ಮುನ್ನವೇ ವಿಜಯ್ ಮನೆಯಲ್ಲಿ ಸಂಭ್ರಮಾಚರಣೆ

ಅವನಿಗೆ ಗೆಲುವಿನ ಬಗ್ಗೆ ಯಾವ ಅನುಮಾನ ಇರಲಿಲ್ಲ. ನಾನು ನನ್ನ ಸ್ವಂತ ಕಾಲುಗಳ ಮೇಲೆ ನಿಲ್ಲುತ್ತೇನೆ. ಯಾವುದೇ ಮೈತ್ರಿಯನ್ನೂ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದ. ಈ ಗೆಲುವಿನಿಂದ ತಮಿಳುನಾಡಿನ ಜನರಿಗೆ ಒಳ್ಳೆಯದಾಗಲಿದೆ. ಖಂಡಿತ, ಇದು ಐತಿಹಾಸಿಕ ಯಶಸ್ಸು ಎಂದು ನಾನು ಭಾವಿಸುತ್ತೇನೆ.

ವಿಜಯ್‌ ಕಳೆದ 30 ವರ್ಷಗಳಲ್ಲಿ, ಸಮಾಜಕ್ಕಾಗಿ, ತಮಿಳು ಜನರಿಗಾಗಿ ಏನಾದರೂ ಒಳ್ಳೆಯದು ಮಾಡಬೇಕೆಂದು ಯೋಚಿಸುತ್ತಿದ್ದ. ನಿಧಾನವಾಗಿ ಆ ದಾರಿಯಲ್ಲಿ ಸಾಗಿದ್ದಾನೆ. ವಿಜಯ್‌ ತಮಿಳುನಾಡಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.

ತಮಿಳುನಾಡಿನ (Tamil Nadu) ಜನರು ನನ್ನ ಮಗನನ್ನು ನಾಯಕನನ್ನಾಗಿ ಮಾತ್ರ ಪ್ರೀತಿಸುತ್ತಿರಲಿಲ್ಲ. ಪ್ರತಿಯೊಬ್ಬ ಮಹಿಳೆಯೂ ಅವನನ್ನು ತಮ್ಮ ಸ್ವಂತ ಮಗನೆಂತೆ ನೋಡುತ್ತಾರೆ. ಯುವಕರು ಅವನನ್ನು ತಮ್ಮ ಸ್ವಂತ ಸಹೋದರ ಎಂದು ಪರಿಗಣಿಸಿದ್ದಾರೆ. ಎಲ್ಲರೂ ಅವನನ್ನು ಅಣ್ಣ ಎಂದು ಕರೆಯುತ್ತಾರೆ. ವೃದ್ಧರು ಅವನನ್ನು ತಮ್ಮ ಮೊಮ್ಮಗ ಎಂದು ಪರಿಗಣಿಸುತ್ತಾರೆ. ಸಾರ್ವಜನಿಕವಾಗಿ ಆ ಮಟ್ಟಿಗೆ ಅವರು ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ಮತ ಎಣಿಕೆ ಕೇಂದ್ರದಲ್ಲಿ ಗಲಾಟೆ; ಕೂಚ್ ಬೆಹಾರ್‌ನಲ್ಲಿ ಹೊಡೆದಾಡಿಕೊಂಡ ಬಿಜೆಪಿ-ಟಿಎಂಸಿ ಕಾರ್ಯಕರ್ತರು

Share This Article