– ಶೃಂಗೇರಿ ಮತ ಮರು ಎಣಿಕೆ ಫಲಿತಾಂಶದ ಬಗ್ಗೆ ಅಸಮಾಧಾನ ಹೊರಹಾಕಿದ್ದ ಡಿಕೆಶಿ
ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಹಿರಿಯರು, ಕ್ರೈಮ್ ಆಗಿದೆ ಅಂತೆಲ್ಲ ಬೆದರಿಸಬಾರದು ಎಂದು ಶೃಂಗೇರಿ (Sringeri) ಮರು ಎಣಿಕೆಯಲ್ಲಿ ಗೆದ್ದಿರುವ ಶಾಸಕ ಜೀವರಾಜ್ (D.N.Jeevaraj) ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಳಿಕ ಜೀವರಾಜ್ ಮಾತನಾಡಿದರು. ಮತ ಟ್ಯಾಂಪರಿಂಗ್ ಆರೋಪ ತಳ್ಳಿ ಹಾಕಿದ ಜೀವರಾಜ್, ಸರ್ಕಾರದಿಂದ ತನಿಖೆ ಮಾಡ್ತೇವೆ ಅಂತ ಡಿಕೆಶಿ ಹೇಳಿದ್ದಾರೆ. ತನಿಖೆ ಚುನಾವಣಾ ಆಯೋಗ ಮಾಡಬೇಕು. ಡಿಕೆಶಿಯವರು ಬೆದರಿಸುವ ಕೆಲಸ ಮಾಡೋದು ಬೇಡ. ಅವರು ನಮಗೂ ಉಪಮುಖ್ಯಮಂತ್ರಿ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಅಂಚೆ ಮತ ಮರು ಎಣಿಕೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗೆ ECI ಪ್ರಮಾಣ ಪತ್ರ
ಪೋಸ್ಟಲ್ ಬ್ಯಾಲೆಟ್‌ಗಳನ್ನು ಸೇಫಾಗಿ ಟ್ರಂಕ್‌ನಲ್ಲಿಟ್ಟಿರುತ್ತಾರೆ. ಡಿಕೆಶಿಯವರು ಯಾಕೆ ಈ ರೀತಿ ಮಾತಾಡ್ತಿದ್ದಾರೋ ಗೊತ್ತಿಲ್ಲ. 24 ಗಂಟೆ ಪೊಲೀಸ್ ಕಾವಲು ಹಾಕಿರುವ ಕಡೆ ನಾನು ಹೇಗೆ ಹೋಗಿ ಟ್ಯಾಂಪರಿಂಗ್ ಮಾಡಲು ಆಗುತ್ತೆ? ಡಿಕೆಶಿಯವರು ಹಿರಿಯರು ಈಥರ ಮಾತಾಡಬಾರದು ಎಂದರು.
ಕಾಂಗ್ರೆಸ್‌ನವ್ರು ಮತ ಟ್ಯಾಂಪರಿಂಗ್ ಮಾಡಲಾಗಿದೆ ಅಂತ ಆರೋಪ ಮಾಡಿದ್ದಾರೆ. ದೂರು ಕೊಟ್ಟಿದ್ದಾರೆ, ಎಫ್ಐಆರ್ ಹಾಕಿದ್ದಾರೆ. 2023 ರಲ್ಲಿ ಶೃಂಗೇರಿ ಮತ ಎಣಿಕೆ ವಿಳಂಬ ಆಯ್ತು. ಕೊನೆಯಲ್ಲಿ ಪೋಸ್ಟಲ್ ಮತಗಳ ಎಣಿಕೆ ಮಾಡಿದ್ರು. ಕಾಂಗ್ರೆಸ್‌ನವ್ರ ಎಫ್ಐಆರ್ ಕಾನೂನು ಬಾಹಿರ ಆಗಿದೆ ಎಂದು ಜೀವರಾಜ್ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆ – ಬಿಜೆಪಿ ಅಭ್ಯರ್ಥಿಗೆ ಜಯಭೇರಿ

