ತ.ನಾಡಲ್ಲಿ ವಿಜಯ್‌ ಗೆಲ್ತಾರೆ ಎಂದಿದ್ದ ನಮ್ಮ ಸಮೀಕ್ಷೆಯನ್ನ ಎಲ್ಲರೂ ಗೇಲಿ ಮಾಡಿದ್ರು: ಆಕ್ಸಿಸ್‌ ಮೈ ಇಂಡಿಯಾ

1 Min Read

ನವದೆಹಲಿ: ನಟ-ರಾಜಕಾರಣಿ ವಿಜಯ್ (Vijay) ಅವರ ಟಿವಿಕೆ (TVK) ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಾಗ ಜನರು ತಮ್ಮನ್ನು ನೋಡಿ ನಗುತ್ತಿದ್ದರು ಎಂದು ಆಕ್ಸಿಸ್ ಮೈ ಇಂಡಿಯಾದ (Axis My India) ಪ್ರದೀಪ್ ಗುಪ್ತಾ ನೆನಪಿಸಿಕೊಂಡಿದ್ದಾರೆ.

234 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿವಿಕೆ 98 ರಿಂದ 120 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದ ಏಕೈಕ ಸಮೀಕ್ಷೆ ಸಂಸ್ಥೆ ಆಕ್ಸಿಸ್ ಮೈ ಇಂಡಿಯಾ. ಈಗ ಅದರ ಚುನಾವಣೋತ್ತರ ಸಮೀಕ್ಷೆ ನಿಜವಾಗಿದೆ. ಇದನ್ನೂ ಓದಿ: ಸಿಂಹ ಒಂಟಿಯಾಗಿದ್ರೂ ಕೂಡ ಅದು ಕಾಡಿನ ರಾಜ – ದಳಪತಿಯ ಹಳೆ ವಿಡಿಯೋ ವೈರಲ್

ತಮಿಳುನಾಡು ಚುನಾವಣಾ ಮತ ಎಣಿಕೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬೀಳುತ್ತಿದೆ. ಟಿವಿಕೆ 108 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆಡಳಿತಾರೂಢ ಡಿಎಂಕೆ ನೆಲಕಚ್ಚಿದೆ. ಸ್ವತಃ ಸಿಎಂ ಎಂ.ಕೆ.ಸ್ಟಾಲಿನ್‌ ಸೋಲುವ ಮೂಲಕ ಪಕ್ಷಕ್ಕೆ ಶಾಕ್‌ ಕೊಟ್ಟಿದ್ದಾರೆ.

ಇದು ಡೇಟಾ ಸೈನ್ಸ್‌ ಗೆಲುವು. ದೇಶಾದ್ಯಂತ ಯಾರೂ ಇದನ್ನು ನಂಬುತ್ತಿರಲಿಲ್ಲ. ಇದೆಲ್ಲವೂ ಕೇವಲ ಊಹಾಪೋಹ ಎಂದು ಹೇಳಿದ್ದರು. ತಮಿಳುನಾಡಿನಲ್ಲಿ ವಿಜಯ್‌ ಗೆಲುವಿನ ಬಗ್ಗೆ ನಾವು ಭವಿಷ್ಯ ನುಡಿದಾಗ ಎಲ್ಲರೂ ನಮ್ಮ ಸಮೀಕ್ಷೆಯನ್ನು ಗೇಲಿ ಮಾಡಿದ್ದರು ಎಂದು ಗುಪ್ತ ತಿಳಿಸಿದ್ದಾರೆ.

ಯುವ ಪೀಳಿಗೆ ವಿಜಯ್ ಅವರ ಹಿಂದೆ ಒಟ್ಟುಗೂಡಿದೆ. ನಾವು ಸಮೀಕ್ಷೆ ಮಾಡುವ 18 ರಿಂದ 39 ವರ್ಷದೊಳಗಿನವರು, ‘ವಿಜಯ್ ಮತ್ತು ಟಿವಿಕೆ ಹೆಚ್ಚು ಮತ ಗಳಿಸುತ್ತಾರೆ’ ಎಂದು ತಿಳಿಸಿದ್ದರು. ಇದು ತಮಿಳುನಾಡಿನ ಮತದಾರರಲ್ಲಿ ಶೇ.42 ರಷ್ಟು ಕೊಡುಗೆ ನೀಡುತ್ತದೆ ಎಂದು ಪ್ರದೀಪ್‌ ಗುಪ್ತ ಹೇಳಿದ್ದಾರೆ. ಇದನ್ನೂ ಓದಿ: ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ಗೆ ಸೋಲು – ದಳಪತಿ ಅಬ್ಬರಕ್ಕೆ ಡಿಎಂಕೆ ಧೂಳಿಪಟ

Share This Article