ದಿನ ಭವಿಷ್ಯ: 05-05-2026

1 Min Read

ಶ್ರೀ ಪರಾಭವ ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ವೈಶಾಖ ಮಾಸ, ಕೃಷ್ಣ ಪಕ್ಷ
ವಾರ: ಮಂಗಳವಾರ, ತಿಥಿ: ಚತುರ್ಥಿ
ನಕ್ಷತ್ರ: ಜೇಷ್ಠ

ರಾಹುಕಾಲ: 3.29 ರಿಂದ 5.04
ಗುಳಿಕಕಾಲ: 12.20 ರಿಂದ 1.55
ಯಮಗಂಡಕಾಲ: 9.11 ರಿಂದ 10.46

ಮೇಷ: ರಾಜ ವಿರೋಧ, ಯತ್ನ ಕಾರ್ಯಗಳಲ್ಲಿ ವಿಳಂಬ, ಕುಟುಂಬದಲ್ಲಿ ಅಶಾಂತಿ, ಹಣಕಾಸು ತೊಂದರೆ, ವಾಹನ ಅಪಘಾತ.

ವೃಷಭ: ಈ ದಿನ ಸ್ತ್ರೀ ವಿಚಾರದಲ್ಲಿ ವ್ಯಥೆ, ವ್ಯವಹಾರಗಳಲ್ಲಿ ಕಿರಿಕಿರಿ, ಶತ್ರುಗಳ ಬಾಧೆ, ವ್ಯರ್ಥ ಧನ ಹಾನಿ, ಚೋರ ಭೀತಿ.

ಮಿಥುನ: ಈ ದಿನ ಪ್ರಿಯ ಜನರ ಭೇಟಿ, ಬಂಧುಗಳಿಂದ ತೊಂದರೆ, ಸ್ಥಳ ಬದಲಾವಣೆ, ಮಂಗಳ ಕಾರ್ಯದಲ್ಲಿ ಭಾಗಿ, ಸ್ಥಿರಾಸ್ತಿ ಮಾರಾಟಕ್ಕೆ ಚಿಂತನೆ.

ಕಟಕ: ಆದಾಯಕ್ಕಿಂತ ಖರ್ಚು ಹೆಚ್ಚು, ಆರೋಗ್ಯದ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸಂತಾನಯೋಗ.

ಸಿಂಹ: ಹೊಸ ವ್ಯವಹಾರಗಳಲ್ಲಿ ನಷ್ಟ, ದೂರ ಪ್ರಯಾಣ, ಅನ್ಯರಲ್ಲಿ ದ್ವೇಷ, ದುಃಖದಾಯಕ ಪ್ರಸಂಗ.

ಕನ್ಯಾ: ಈ ದಿನ ವ್ಯಾಸಂಗಕ್ಕೆ ತೊಂದರೆ, ದಾಯಾದಿಗಳ ಕಲಹ, ದುಷ್ಟಬುದ್ಧಿ, ಯತ್ನ ಕಾರ್ಯದಲ್ಲಿ ಜಯ, ಸಲ್ಲದ ಅಪವಾದ.

ತುಲಾ: ನಾನಾ ರೀತಿಯ ಸಂಪಾದನೆ, ಉದ್ಯೋಗದಲ್ಲಿ ಭಡ್ತಿ, ಸ್ನೇಹಿತರಿಂದ ಸಹಾಯ, ವಿವಾಹ ಯೋಗ, ಅಧಿಕ ತಿರುಗಾಟ, ಋಣ ವಿಮೋಚನೆ.

ವೃಶ್ಚಿಕ: ಉದ್ಯೋಗದ ಸ್ಥಳದಲ್ಲಿ ವೈಮನಸ್ಸು, ಅತಿಯಾದ ಕೋಪ, ತಾಳ್ಮೆಯಿಂದ ಕಾರ್ಯದಲ್ಲಿ ಮುನ್ನಡೆ, ಕುಟುಂಬದಲ್ಲಿ ಅಹಿತಕರ ವಾತಾವರಣ, ಸನ್ಮಾರ್ಗದ ಆಲೋಚನೆಯಿಂದ ಒಳಿತು.

ಧನಸ್ಸು: ಸ್ತ್ರೀಯರಿಗೆ ಅನುಕೂಲವಾದ ವಾತಾವರಣ, ಮಾಡುವ ಕೆಲಸ ಕಾರ್ಯಗಳಲ್ಲಿ ಜಯ, ವ್ಯಾಪಾರ ವ್ಯವಹಾರದಲ್ಲಿ ಏರುಪೇರು, ಉದ್ಯೋಗದಲ್ಲಿ ತೊಂದರೆ.

ಮಕರ: ಈ ದಿನ ವಿರೋಧಿಗಳಿಂದ ತೊಂದರೆ, ಆರೋಗ್ಯದ ಸಮಸ್ಯೆ, ವಿವಾಹಕ್ಕೆ ತೊಂದರೆ, ಬಂಧುಗಳೊಂದಿಗೆ ಮನಸ್ತಾಪ, ಷೇರು ವ್ಯವಹಾರದಲ್ಲಿ ಲಾಭ, ಪರಸ್ಥಳವಾಸ.

ಕುಂಭ: ಕಾರ್ಯದಲ್ಲಿ ವಿಳಂಬ, ಸ್ಥಳ ಬದಲಾವಣೆ, ಪಾಪ ಕಾರ್ಯದಲ್ಲಿ ಆಸಕ್ತಿ, ದಾಯಾದಿಗಳ ಕಲಹ, ವಿಪರೀತ ಖರ್ಚು, ತಾಯಿಯ ಬಂಧುಗಳಿಂದ ಕಿರಿಕಿರಿ.

ಮೀನ: ಈ ದಿನ ಮಾನಸಿಕ ನೆಮ್ಮದಿ, ಐಶ್ವರ್ಯ ವೃದ್ಧಿ, ಸ್ವ ಗೃಹ ವಾಸ, ಸೇವಕರಿಂದ ಸಹಾಯ, ಶತ್ರುಗಳ ನಾಶ, ಗೌರವ ಸನ್ಮಾನ ಪ್ರಾಪ್ತಿ.

Share This Article