ನೆಲಮಂಗಲ: ವಿವಾಹಿತೆಯ ಮೋಹಕ್ಕೆ ಬಿದ್ದು, ಬ್ಲ್ಯಾಕ್‌ಮೇಲ್‌ಗೆ (BlackMali) ಸಿಲುಕಿದ್ದ 28 ವರ್ಷದ ಜಿಮ್ ಟ್ರೈನರ್ ನೇಣು ಬಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದ (Nelamangala) ವಾಜರಹಳ್ಳಿಯಲ್ಲಿ ನಡೆದಿದೆ.
ದಿಲೀಪ್ (28) ಮೃತ ಯುವಕನಾಗಿದ್ದು, ನೆಲಮಂಗಲದ ವಾಜರಹಳ್ಳಿಯಲ್ಲಿ ಜಿಮ್ ಟ್ರೈನರ್ (Fitness Trainer) ಆಗಿ ಕೆಲಸ ಮಾಡಿಕೊಂಡಿದ್ದರು. ಇದನ್ನೂ ಓದಿ: ನಟಿ ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್ ಪ್ರಕರಣ – ಉಳಿದ 29 ಆರೋಪಿಗಳ ಬಲೆ ಬೀಸಿದ ಸಿಸಿಬಿ ಪೊಲೀಸ್
ಬಲೆಗೆ ಬೀಳಿಸಿಕೊಂಡಿದ್ಳಾ ಆಂಟಿ?
ಜಿಮ್‌ನಲ್ಲಿ ದಿಲೀಪ್‌ಗೆ 42 ವರ್ಷದ ವಿವಾಹಿತ ಮಹಿಳೆಯ (Married Woman) ಪರಿಚಯವಾಗಿತ್ತು. ಆಕೆಗೆ ಮದುವೆಯಾಗಿದ್ರೂ ದಿಲೀಪ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಳು ಎಂಬ ಆರೋಪಗಳು ಕೇಳಿ ಬಂದಿವೆ. ನಂತರ ಆಕೆ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದಳು ಎಂದು ದಿಲೀಪ್ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಮಹಿಳೆಯ ಬ್ಲ್ಯಾಕ್‌ಮೇಲ್‌ನಿಂದ ನೊಂದು ದಿಲೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸಾವಿಗೂ ಮುನ್ನ ಸುನಿತಾಗೆ ದಿಲೀಪ್ ಕರೆ ಮಾಡಿದ್ದಾನೆ. ಸುನಿತಾಗೆ ವಿಷಯ ತಿಳಿಸಿಯೇ ದಿಲೀಪ್ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಹೇಳಲಾಗಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ದಿಲೀಪ್ ಜೊತೆಗೆ ಸಂಬಂಧದಲ್ಲಿದ್ದಳು ಎನ್ನಲಾದ ವಿವಾಹಿತ ಮಹಿಳೆ ಇನ್‌ಸ್ಟಾಗ್ರಾಮ್ ಮೂಲಕ ದಿಲೀಪ್ ಸಹೋದರನಿಗೆ ಮೆಸೇಜ್ ಮಾಡಿದ್ದಾಳೆ. ನಿನ್ನ ಸಹೋದರ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆಕೆ ತಿಳಿಸಿದ್ದಾಳೆ. ದಿಲೀಪ್ ಸಹೋದರ ಬಾಗಿಲು ಮುರಿದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಮೃತದೇಹವನ್ನ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ – ಚಿತ್ರನಟ ಹರೀಶ್ ಸ್ಥಳದಲ್ಲೇ ಸಾವು
ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಹಾಗೂ ಸೊಕೊ ಟೀಂ ಭೇಟಿ ನೀಡಿ ಪರಿಶೀಲಿಸಿದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದೆ. ಇದನ್ನೂ ಓದಿ: Corporate Jihad | ಹಿಂದೂ ಮಹಿಳಾ ಉದ್ಯೋಗಿಗಳಿಗೆ ಬಲವಂತವಾಗಿ ಗೋಮಾಂಸ ಸೇವಿಸುವಂತೆ, ನಮಾಜ್ ಮಾಡುವಂತೆ ಒತ್ತಾಯ



