ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Actress Ramya) ಪೋಸ್ಟ್‌ಗೆ ಅಶ್ಲೀಲ ಕಾಮೆಂಟ್ ಮಾಡಿದ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಈಗಾಗಲೇ 14 ಆರೋಪಿಗಳನ್ನ ಬಂಧಿಸಿದ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದ ಸಿಸಿಬಿ ಪೊಲೀಸರು (CCB Police), ಇನ್ನುಳಿದ 29 ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಹೌದು. ಅಶ್ಲೀಲ ಕಾಮೆಂಟ್ ಹಾಕಿದ್ದ ಪ್ರಕರಣದಲ್ಲಿ 43 ಆರೋಪಿಗಳ ಪೈಕಿ 14 ಮಂದಿಯನ್ನ ಪೊಲೀಸರು ಬಂಧಿಸಿ, ಚಾರ್ಜ್‌ಶೀಟ್ ಕೂಡ ಸಲ್ಲಿಸಿದ್ದರು. ಉಳಿದ 29 ಆರೋಪಿಗಳ ಮೇಲೆ ಅಬ್‌ಸ್ಕಾಂಡಿಂಗ್ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಬಳಿಕ ಎಸಿಜೆಎಂ ಕೋರ್ಟ್ ಉಳಿದ ಆರೋಪಿಗಳ ಪತ್ತೆಗೆ ಸೂಚನೆ ನೀಡಿತ್ತು. ಅದರಂತೆ ಆರೋಪಿಗಳ ಪತ್ತೆಗಿಳಿದಿದ್ದಾರೆ ಪೊಲೀಸರು. ಇದನ್ನೂ ಓದಿ: ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ – ಬಂಧಿತರಲ್ಲಿ ಓರ್ವ ʻಡಿ ಬಾಸ್ʼ ಅಭಿಮಾನಿ
ಏನಿದು ಪ್ರಕರಣ?
ʻDʼ ಗ್ಯಾಂಗ್‌ನಿಂದ ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿಗೆ ನ್ಯಾಯ ಸಿಗುವ ಬಗ್ಗೆ ರಮ್ಯಾ ಪೋಸ್ಟ್ ಹಾಕಿದ್ದಕ್ಕೆ ಅಶ್ಲೀಲ ಕಾಮೆಂಟ್ ಮಾಡಿರುವುದು ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿತ್ತು. ಒಟ್ಟು 43 ಖಾತೆಗಳ ಸೋಷಿಯಲ್ ಮೀಡಿಯಾ ಖಾತೆಗಳ (Social Media Account) ವಿರುದ್ಧ ಸಿಸಿಬಿಗೆ ನಟಿ ರಮ್ಯಾ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ ಪೊಲೀಸ್ರು 14 ಮಂದಿಯನ್ನ ಲಾಕ್ ಮಾಡಿದ್ದರು. ಉಳಿದ ಕಿಡಿಗೇಡಿಗಳ ಪತ್ತೆಗೆ 6 ತಂಡವನ್ನ ರಚನೆ ಮಾಡಲಾಗಿತ್ತು.
ಬೆಂಗಳೂರು, ಮೈಸೂರು, ಹಾವೇರಿ, ಚಿಕ್ಕಮಗಳೂರು ಸೇರಿದಂತೆ ಹಲವು ಕಡೆ ಕಿಡಿಗೇಡಿಗಳಿಗಾಗಿ ಹುಡುಕಾಟ ನಡೆಸಿದ್ದರು. ಆ ಬLಈಕ 14 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿತ್ತು. ಸದ್ಯ ಪ್ರಕರಣ ಟ್ರಯಲ್ ಹಂತಕ್ಕೆ ಬಂದಿದ್ದು, ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್ – ಬಂಧಿತರು ದರ್ಶನ್ ಅಭಿಮಾನಿಗಳೇ ಅಂತ ಪರಿಶೀಲಿಸ್ತಿದ್ದೇವೆ: ಸೀಮಂತ್ ಕುಮಾರ್ ಸಿಂಗ್




