ಪಂಚಾಂಗ
ವಾರ: ಸೋಮವಾರ. ತಿಥಿ: ಏಕಾದಶಿ
ನಕ್ಷತ್ರ: ಧನಿಷ್ಠ, ಯೋಗ: ಶುಭ
ಕರಣ: ಬವ
ಶ್ರೀ ಪರಾಭವ ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ಚೈತ್ರ ಮಾಸ, ಕೃಷ್ಣ ಪಕ್ಷ
ರಾಹುಕಾಲ: 7:45 ರಿಂದ 9:18
ಗುಳಿಕಕಾಲ: 1:57 ರಿಂದ 3:30
ಯಮಗಂಡಕಾಲ: 10:40 ರಿಂದ 12:13
ಮೇಷ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕುಟುಂಬ ಸೌಖ್ಯ, ಯತ್ನ ಕಾರ್ಯಗಳಲ್ಲಿ ಜಯ, ಆದಾಯ ಕಡಿಮೆ ಖರ್ಚು ಜಾಸ್ತಿ, ಹಿತ ಶತ್ರು ಭಾದೆ.
ವೃಷಭ: ಅನಾವಶ್ಯಕ ಖರ್ಚಿಗೆ ನೂರಾರು ದಾರಿ, ವಿಪರೀತ ವ್ಯಸನ, ದಂಡ ಕಟ್ಟುವಿರಿ, ಅನಾರೋಗ್ಯ.
ಮಿಥುನ: ಮಹಿಳೆಯರಿಗೆ ಶುಭ, ದೂರ ಪ್ರಯಾಣ, ಅಕಾಲ ಭೋಜನ, ಮನಕ್ಲೇಶ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಉದರಭಾದೆ.
ಕಟಕ: ಸಣ್ಣ ವಿಷಯಕ್ಕೆ ಕಲಹ, ಮಾತಿನ ಮೇಲೆ ಹಿಡಿತವಿರಲಿ, ಭೋಗ ವಸ್ತುಗಳ ಖರೀದಿ, ವಾಹನ ಖರೀದಿ.
ಸಿಂಹ: ಗುರಿ ಸಾಧಿಸಲು ಶ್ರಮ ಪಡುವಿರಿ, ವ್ಯಾಪಾರದಲ್ಲಿ ಉತ್ತಮ ಫಲ, ಸುಖ ಭೋಜನ, ಧನ ಲಾಭ.
ಕನ್ಯಾ: ಸ್ತ್ರೀ ಲಾಭ, ಮೂಗಿನ ಮೇಲೆ ಕೋಪ, ಪರರ ಮಾತಿಗೆ ಕಿವಿ ಕೊಡಬೇಡಿ, ವ್ಯಾಪಾರದಲ್ಲಿ ವಿಶೇಷ ಲಾಭ, ಗಣ್ಯ ವ್ಯಕ್ತಿಗಳ ಭೇಟಿ.
ತುಲಾ: ಪ್ರಯತ್ನ ಪಟ್ಟರೆ ಉತ್ತಮ ಫಲ ಸಿಗುತ್ತೆ, ಕಾರ್ಯಸಿದ್ಧಿ, ಅನೇಕ ಜನರಿಗೆ ವಿವಾಹ ಯೋಗ.
ವೃಶ್ಚಿಕ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಸಾಲ ಮರುಪಾವತಿ, ವಾಹನದಿಂದ ತೊಂದರೆ.
ಧನಸ್ಸು: ಭಯ ಭೀತಿ ನಿವಾರಣೆ, ದಾಂಪತ್ಯದಲ್ಲಿ ಪ್ರೀತಿ, ಯತ್ನ ಕಾರ್ಯಾನುಕೂಲ, ಸಾಲಭಾದೆ, ಆಕಸ್ಮಿಕ ಖರ್ಚು.
ಮಕರ: ಆರೋಗ್ಯದಲ್ಲಿ ಏರುಪೇರು, ಮಾನಸಿಕ ಚಿಂತೆ, ಪುಣ್ಯಕ್ಷೇತ್ರ ದರ್ಶನ, ರೋಗಭಾದೆ, ನಾನಾ ವಿಚಾರಗಳಲ್ಲಿ ಆಸಕ್ತಿ.
ಕುಂಭ: ವಾತಭಾದೆ, ಮಾತಾ ಪಿತರ ಹಿತವಚನ, ಪಾಪ ಬುದ್ಧಿ, ವಿದ್ಯಾರ್ಥಿಗಳಿಗೆ ಪ್ರಶಂಸೆ, ಕೀರ್ತಿ.
ಮೀನ: ಕ್ರಯ ವಿಕ್ರೇಯಗಳಲ್ಲಿ ಲಾಭ, ವಿವಾದಗಳಿಂದ ದೂರವಿರಿ, ಅನಗತ್ಯವಾದ ಖರ್ಚು, ಕಣ್ಣಿನ ತೊಂದರೆ.

