Exit Poll| ಕೇರಳದಲ್ಲಿ ಪಿಣರಾಯಿ ಹ್ಯಾಟ್ರಿಕ್‌ ಕನಸು ಭಗ್ನ – ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ಗೆ ಜಯ

1 Min Read

– ಆಕ್ಸಿಸ್‌ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆ

ನವದೆಹಲಿ: ಕೇರಳದಲ್ಲಿ (Kerala Election) ನಿರೀಕ್ಷೆಯಂತೆ ಕಾಂಗ್ರೆಸ್‌ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (United Democratic Front – UDF) ಅಧಿಕಾರಕ್ಕೆ ಏರಲಿದೆ ಎಂದು ಆಕ್ಸಿಸ್‌ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ.

ಪಿಣರಾಯಿ ವಿಜಯನ್‌ ನೇತೃತ್ವದ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌ 2016, 2021 ರಲ್ಲಿ ಜಯಗಳಿಸಿ ಹ್ಯಾಟ್ರಿಕ್‌ ಸಾಧನೆ ಮಾಡುವ ಕನಸು ಈ ಬಾರಿ ಭಗ್ನಗೊಂಡಿದೆ.

ಯುಡಿಎಫ್‌ 78-90, ಎಲ್‌ಡಿಎಫ್‌ 49-62, ಬಿಜೆಪಿ 0-3 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ತಿಳಿಸಿದೆ. ಈ ಸಮೀಕ್ಷೆ ನಿಜವಾದರೆ 10 ವರ್ಷದ ಬಳಿಕ ಕೇರಳದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಏರಿದಂತಾಗುತ್ತದೆ.

ಕೇರಳದಲ್ಲಿ 140 ಸ್ಥಾನಗಳಿದ್ದು ಬಹುಮತಕ್ಕೆ 71 ಸ್ಥಾನಗಳ ಅಗತ್ಯವಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ – ರಿಪಬ್ಲಿಕ್‌ ಟಿವಿ ಸಮೀಕ್ಷೆ

2021 ರಲ್ಲಿ ಏನಾಗಿತ್ತು?
ಕೇರಳದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಾಗುವ 40 ವರ್ಷಗಳ ಸಂಪ್ರದಾಯವನ್ನು ಮುರಿದು ಎಡರಂಗ (LDF) ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಏರಿತ್ತು.

ಎಲ್‌ಡಿಎಫ್‌ 99, ಯುಡಿಎಫ್‌ 41 ಸ್ಥಾನಗಳನ್ನು ಗೆದ್ದುಕೊಂಡರೆ ಬಿಜೆಪಿ ಖಾತೆ ತೆರೆಯಲು ವಿಫಲವಾಗಿತ್ತು. ಪಿಣರಾಯಿ ವಿಜಯನ್ ಅವರು ಪೂರ್ಣಾವಧಿ ಮುಗಿಸಿ ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದರು.

ಯಾರಾಗ್ತಾರೆ ಕೇರಳಂ ಕಿಂಗ್?
ಸ್ಮಾರ್ಟ್ ಪೋಲ್:
ಯುಡಿಎಫ್ 85
ಎಲ್‌ಡಿಎಫ್ 51
ಬಿಜೆಪಿ 3
ಇತರೆ 1

ನ್ಯೂಸ್18
ಯುಡಿಎಫ್ 70-80
ಎಲ್‌ಡಿಎಫ್ 58-68
ಬಿಜೆಪಿ 4
ಇತರೆ 00

ಎಕ್ಸಿಸ್ ಮೈ ಇಂಡಿಯಾ
ಎಲ್‌ಡಿಎಫ್ 49-62
ಯುಡಿಎಫ್ 78-90
ಬಿಜೆಪಿ 0-3
ಇತರೆ 00

ಟೈಮ್ಸ್ ನೌ:
ಎಲ್‌ಡಿಎಫ್ 52-61
ಯುಡಿಎಫ್ 72-84
ಬಿಜೆಪಿ 3-7
ಇತರೆ 00

Share This Article