ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು

1 Min Read

ಪ್ರಕರಣವೊಂದರಲ್ಲಿ ದರ್ಶನ್‌ (Darshan) ಸರ್‌ ಸಿಕ್ಕಾಕಿಕೊಂಡಿದ್ದು ಬಹಳ ಬೇಜಾರಾಯ್ತು ಎಂದು ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ (Mallikarjun) ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ 8 ವರ್ಷಗಳಿಂದ ನಾಪತ್ತೆಯಾಗಿದ್ದ ಮಲ್ಲಿಕಾರ್ಜುನ್‌ ಇಂದು ಪ್ರತ್ಯಕ್ಷವಾಗಿ ಸುದ್ದಿಗೋಷ್ಠಿ ನಡೆಸಿದ್ದಾರೆ. ನಾನು ಇಷ್ಟು ದಿನ ಒಂದೇ ಕಡೆ ಇರಲಿಲ್ಲ. ದೇಶಾಂತರ ಸುತ್ತಾಡಿದ್ದೆ. ಈಗ ವಾಪಸ್ ಬಂದೆ. ದರ್ಶನ್, ದಿನಕರ್ ಅವರಿಗೂ ಮೆಸೇಜ್ ಮಾಡಿ ಹೋಗಿದ್ದೆ ಎಂದು ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಇದನ್ನೂ ಓದಿ: 8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ

ದರ್ಶನ್ ಮೇಲೆ ಆಪಾದನೆ ಬಂದಿದೆ ಅಂತ ಗೊತ್ತಾದಾಗಲೇ ವಾಪಸ್ ಬಂದೆ. ಅವರು ಪ್ರಕರಣದಲ್ಲಿ ಸಿಕ್ಕಾಂಕೊಂಡಾಗ ಬಹಳ ಬೇಜಾಯಾಯ್ತು. ದರ್ಶನ್ ಸರ್‌ ಅವರನ್ನ ಭೇಟಿಯಾಗೋ ಅವಕಾಶ ಸಿಕ್ಕರೆ ಭೇಟಿಯಾಗ್ತೀನಿ. ವಿಜಯಲಕ್ಷ್ಮಿ ಮೇಡಮ್ ಹತ್ತಿರ ಮಾತಾಡ್ತೀನಿ ಎಂದು ಹೇಳಿದ್ದಾರೆ.

ಬದುಕಬೇಕು ಅಂತ ಬಂದಿದ್ದೀನಿ. ಫ್ಯಾಮಿಲಿ ಜೊತೆ ಸಂಪರ್ಕದಲ್ಲಿ ಇದ್ದೆ. ಆದರೆ, ಲೆಟರ್ ಮೂಲಕ ಅಷ್ಟೇ. ಒಂದು ಪ್ಲೇಸ್‌ನಿಂದ ಕಳಿಸಿ ಇನ್ನೆಲ್ಲೋ ಹೋಗಿಬಿಡ್ತಿದ್ದೆ. ಹುಡಕಬೇಡಿ ಅಂತಿದ್ದೆ ಎಂದು ತಾವು ನಾಪತ್ತೆಯಾಗಿದ್ದ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಯೋಗೇಶ್ ಗೌಡ ಕೊಲೆ ಕೇಸ್ – ಅಪರಾಧಿಗಳಿಗೆ ಶಿಕ್ಷೆ ನಾಳೆ ಪ್ರಕಟ

Share This Article