42 ದಿನಗಳಲ್ಲಿ ಕಾಡಿನಿಂದ ನಾಡಿಗೆ ಬಂದ 22 ಹುಲಿ ಸೆರೆ: ಮೈಸೂರು ಡಿಸಿಎಫ್‌

1 Min Read

ಮೈಸೂರು: ಜಿಲ್ಲಾ ವ್ಯಾಪ್ತಿಯಲ್ಲಿ ಕಾಡಿನಿಂದ (Forest) ನಾಡಿಗೆ ಬಂದಿದ್ದ 22 ಹುಲಿಗಳನ್ನು (Tiger) 42 ದಿನಗಳಲ್ಲಿ ಸೆರೆ ಹಿಡಿಯಲಾಗಿದೆ.

ಈ 22 ಹುಲಿಗಳಲ್ಲಿ 12 ಮರಿ ಹುಲಿ, 7 ಗಂಡು ಹುಲಿ, ಮೂರು ಹೆಣ್ಣು ಹುಲಿಗಳು ಸೆರಯಾಗಿವೆ. ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ, ಸರಗೂರು, ನಂಜನಗೂಡು ಮತ್ತು ಹುಣಸೂರು ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಈ ಹುಲಿಗಳು ಉಪಟಳ ನೀಡುತ್ತಿದ್ದವು.

 

ಪಬ್ಲಿಕ್ ಟಿವಿ ಜೊತೆ ಮೈಸೂರು ವಿಭಾಗದ ಡಿಸಿಎಫ್ ಪರಮೇಶ್ ಮಾತನಾಡಿ, ರೈತರು ಆತಂಕ ಪಡುವ ಅಗತ್ಯವಿಲ್ಲ. ರೈತರ ಜೊತೆ ನಾವು ಕೈಜೋಡಿಸಿ ಕೆಲಸ ಮಾಡುತ್ತೇವೆ. ಹುಲಿಕಟ್ಟೆ, ಹುಲಿಯೂರು, ಹುಲಿದುರ್ಗ ಹೆಸರುಗಳಿವೆ. ಹುಲಿಗಳು ಹಿಂದೆ ಇಲ್ಲಿ ಕಾಣಿಸಿದ್ದಕ್ಕೆ ಈ ಹೆಸರುಗಳು ಬಂದಿವೆ. ಹಿಂದೆಯೂ ಹುಲಿಗಳು ಬರುತ್ತಿದ್ದವು, ಈಗಲೂ ಬರುತ್ತಿವೆ. ಹುಲಿಗಳು ಕಂಡು ಬಂದರೆ ಸಹಾಯವಾಣಿಗೆ ಕರೆ ಮಾಡುವಂತೆ ಮನವಿ ಮಾಡಿದರು. ಇದನ್ನೂ ಓದಿ: ನಂದಿನಿ ಪಾರ್ಲರ್‌ಗಳಲ್ಲಿ ಬೇರೆ ಬ್ರ್ಯಾಂಡ್‌ ಮಾರಾಟಕ್ಕೆ ಬ್ರೇಕ್ – ಲೈಸೆನ್ಸ್ ರದ್ದಿಗೆ ಮುಂದಾದ KMF

ಹುಲಿಯನ್ನು ಹಿಡಿಯಲು ಇಲಾಖೆಯಲ್ಲಿ ಎಲ್ಲಾ ರೀತಿಯ ಸಲಕರಣೆಗಳಿವೆ. ಮುಖ್ಯವಾಗಿ ಡ್ರೋನ್‌, ಜನ ಮತ್ತು ಪೊಲೀಸರ ಸಹಕಾರ ಇದ್ದರೆ ಮಾತ್ರ ಕಾರ್ಯಾಚರಣೆ ಯಶಸ್ವಿಯಾಗುತ್ತದೆ. ಹಿಡಿದಿರುವ ಹುಲಿಗಳನ್ನು ಪುನರ್ವಸತಿ ಕೇಂದ್ರದಲ್ಲಿ ಬಿಡಲಾಗಿದೆ. ಈ ವೈದ್ಯರ ಸಲಹೆಯನ್ನು ಆಧಾರಿಸಿ ಹುಲಿಗಳನ್ನು ಕಾಡಿಗೆ ಮರಳಿ ಬಿಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Share This Article