ಜುಲೈವರೆಗಿನ ಅಂತಾರಾಷ್ಟ್ರೀಯ ವಿಮಾನ ಹಾರಾಟಗಳ ಸಂಖ್ಯೆ ಕಡಿತಗೊಳಿಸಿದ ಏರ್ ಇಂಡಿಯಾ

1 Min Read

ನವದೆಹಲಿ: ವಿಮಾನ ಇಂಧನ ಏರಿಕೆಯಾಗುತ್ತಿರುವ ಹಿನ್ನೆಲೆ ಏರ್ ಇಂಡಿಯಾ (Air India) ಜುಲೈವರೆಗಿನ ಅಂತಾರಾಷ್ಟ್ರೀಯ ವಿಮಾನ ಹಾರಾಟಗಳ (International Flights) ಸಂಖ್ಯೆ ಕಡಿತಗೊಳಿಸಿದೆ.

ಈ ಬಗ್ಗೆ ಏರ್ ಇಂಡಿಯಾ ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಏರಿಕೆಯಾಗುತ್ತಿರುವ ವಿಮಾನ ಇಂಧನ ದರ ಹಾಗೂ ವಾಯುಪ್ರದೇಶ ನಿರ್ಬಂಧದಿಂದಾಗಿ ಮಾರ್ಗ ಬದಲಾಯಿಸುವುದು ವಿಮಾನಯಾನ ಸಂಸ್ಥೆಗೆ ದುಬಾರಿಯಾಗುತ್ತಿದೆ. ಈಗಾಗಲೇ ಸಂಸ್ಥೆ ನಷ್ಟದಲ್ಲಿದ್ದು, ಇದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತಿದೆ. ಹೀಗಾಗಿ ಜುಲೈವರೆಗೆ ಸುಮಾರು 100 ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಕಡಿತಗೊಳಿಸಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ 18.62 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್

ಈಗಾಗಲೇ ಏಪ್ರಿಲ್ ಹಾಗೂ ಮೇನಲ್ಲಿ ಕೆಲವು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಕಡಿಮೆ ಮಾಡಲಾಗಿದೆ. ಇಂಧನ ದರ ಏರಿಕೆಯಿಂದಾಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿದ್ದು, ಹೀಗಾಗಿ ಜುಲೈವರೆಗೆ ಹೆಚ್ಚುವರಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಕಡಿತಗೊಳಿಸಲಾಗುವುದು ಎಂದಿದ್ದಾರೆ.

ದಿನನಿತ್ಯ ಏರ್ ಇಂಡಿಯಾ ಸುಮಾರು 1,100 ವಿಮಾನಗಳ ಹಾರಾಟ ಸೇವೆ ನೀಡುತ್ತಿತ್ತು. ಆದರೆ ಜೂನ್‌ನಲ್ಲಿ ಯುರೋಪ್, ಉತ್ತರ ಅಮೆರಿಕ, ಆಸ್ಟ್ರೇಲಿಯಾ ಹಾಗೂ ಸಿಂಗಾಪುರಕ್ಕೆ ನೀಡುವ ವಿಮಾನಗಳ ಹಾರಾಟ ಸೇವೆಯನ್ನು ಕಡಿತಗೊಳಿಸಲಿದೆ. ಇದರ ಹೊರತಾಗಿ ಸಂಸ್ಥೆಗೆ ಬೇರೆ ದಾರಿಯಿಲ್ಲ ಎಂದಿದೆ.

ಏರ್ ಇಂಡಿಯಾ ಸಂಸ್ಥೆ 2026 ಮಾ.31ರ ಮುಕ್ತಾಯವಾದ ಹಣಕಾಸು ವರ್ಷದಲ್ಲಿ ಸುಮಾರು 22,000 ಕೋಟಿ ರೂ.ಗಳಿಗಿಂತ ಹೆಚ್ಚಿನ ನಷ್ಟ ಅನುಭವಿಸಿದೆ.ಇದನ್ನೂ ಓದಿ: ಕಾವೇರಿ ನದಿಯ ಅಂಚಿನಲ್ಲಿ ವಿದೇಶಿ ತಂತ್ರಜ್ಞಾನದ ಗೇಬಿಯನ್ ವಾಲ್ ನಿರ್ಮಾಣ

Share This Article